ಸಮುದಾಯದ ಅಭಿವೃದ್ಧಿಗೆ ಸಹಕಾರ ಮುಖ್ಯ

RON -G.S. Patil
ರೋಣದ ಒಂದನೇ ವಾರ್ಡ್‌ನ ಸುಭಾಸ ನಗರದಲ್ಲಿ ಶಾಸಕ ಜಿ.ಎಸ್. ಪಾಟೀಲ ಹಾಗೂ 75 ವರ್ಷ ಮೇಲ್ಪಟ್ಟ ಹಿರಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಜಿ.ಎಸ್. ಪಾಟೀಲ ಉದ್ಘಾಟಿಸಿದರು. ರೋಣ ಗುಲಗಂಜಿ ಮಠದ ಗುರುಪಾದ ದೇವರು, ಹಜರತ್ ಸುಲೇಮಾನ ಶಾವಲಿ ದರ್ಗಾದ ಅಜ್ಜನವರು,ಐ.ಎಸ್. ಪಾಟೀಲ, ಮಿಥುನ್ ಪಾಟೀಲ, ಸಿದ್ದಣ್ಣ ಬಂಡಿ, ಬಸಮ್ಮ ಕೊಪ್ಪದ ಇತರರು ಇದ್ದರು.
Published on

ರೋಣ: ಸಮುದಾಯದ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಒಂದನೇ ವಾರ್ಡ್‌ನ ಸುಭಾಸ ನಗರದಲ್ಲಿ ಶಾಸಕ ಜಿ.ಎಸ್. ಪಾಟೀಲ ಹಾಗೂ 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಸನ್ಮಾನ ಹಾಗೂ ಶ್ರೀಗುರು ಬಸವೇಶ್ವರ ಸರಳ ಸಜ್ಜನಿಕೆಯ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸಮಿತಿ ಉದ್ಘಾಟಿಸಿ ಅವರು ಮಾತನಾಡಿದರು. 20 ಕೋಟಿ ರೂ. ವೆಚ್ಚದ ಅಮೃತ ಯೋಜನೆಯಡಿ ಮನೆಮನೆಗೆ ಗಂಗೆಗೆ ಚಾಲನೆ ನೀಡಲಾಗಿದೆ. ರೋಣ ಪಟ್ಟಣದ ಜನರಿಗೆ 24*7 ನೀರು ಒದಗಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಮಹತ್ವ ಕೊಡುವ ನಿಟ್ಟಿನಲ್ಲಿ ರೋಣ ಕ್ಷೇತ್ರಕ್ಕೆ ವಿವಿಧ ವಸತಿ ಶಾಲೆ ಮಂಜೂರಾಗಿವೆ. ಕಾರ್ಮಿಕರ ಮಕ್ಕಳ ವಸತಿ ಶಾಲೆಗಾಗಿ 37 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಸ್ಥಳಕ್ಕಾಗಿ ಹುಡುಕಾಟ ನಡೆದಿದೆ. ಪ್ರಮುಖವಾಗಿ ಕ್ಷೇತ್ರದಲ್ಲಿ ರಸ್ತೆ ಸುಧಾರಣೆಗೆ ವಿಶೇಷ ಒತ್ತು ನೀಡಲಾಗಿದೆ. ಹಿರೇಮಣ್ಣೂರಿನಿಂದ- ಬಾಚಲಾಪುರ- ಕುರಹಟ್ಟಿಯಿಂದ ಕೊತಬಾಳದವರೆಗೆ ಪಿಎಂಜಿಎಸ್‌ವೈ 32 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇನೆ ಎಂದರು.

ಪುರಸಭೆ ಸದಸ್ಯ ಮಲ್ಲಯ್ಯ ಮಹಾಪರುಷಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಶ್ರಯ ಪ್ಲಾಟ್‌ನ ಸರ್ವೇ ಮಾಡಿಸಲಾಗಿದೆ. ಒಟ್ಟು 11 ಎಕರೆ ಸ್ಥಳವಿದ್ದು, ವಾಸವಿದ್ದವರಿಗೆ ಶೀಘ್ರ ಪಟ್ಟಾ ವಿತರಿಸಲಾಗುವುದು ಎಂದರು.

ರೋಣ ಗುಲಗಂಜಿ ಮಠದ ಗುರುಪಾದ ದೇವರು, ಹಜರತ್ ಸುಲೇಮಾನ ಶಾವಲಿ ದರ್ಗಾದ ಅಜ್ಜನವರು, ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಮಿಥುನ್ ಪಾಟೀಲ, ಸಿದ್ದಣ್ಣ ಬಂಡಿ, ಪುರಸಭೆ ಅಧ್ಯಕ್ಷೆ ಬಸಮ್ಮ ಕೊಪ್ಪದ, ಉಪಾಧ್ಯಕ್ಷ ಹನುಮಂತ ತಳ್ಳಿಕೇರಿ, ವಿ.ಆರ್. ಗುಡಿಸಾಗರ, ವೀರಣ್ಣ ಶೆಟ್ಟರ್, ಎಚ್.ಎಸ್. ಸೋಂಪುರ, ಬಸವರಾಜ ನವಲಗುಂದ, ಯೂಸೂಫ್ ಇಟಗಿ, ವಿದ್ಯಾ ದೊಡ್ಡಮನಿ, ನಾಜ್‌ಬೇಗಂ ಯಲಿಗಾರ, ಈಶ್ವರ ಕಡಬಿನಕಟ್ಟಿ, ಎಸ್.ಎಂ. ಮುಲ್ಲಾ, ಪರಶುರಾಮ ಅಳಗವಾಡಿ, ವಿ.ಬಿ. ಸೋಮನಕಟ್ಟಿಮಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net