ಸಂಸ್ಕೃತಿ ಉಳಿಸಿ, ಬೆಳೆಸಲು ಸಹಕಾರ ಅತ್ಯಗತ್ಯ

12NRGL2 JANAPADA
Published on

ನರೇಗಲ್ಲ: ಜನಪದ ಸಂಗೀತ ಪ್ರಾಚೀನ ಕಾಲದಿಂದಲೂ ಜನರ ಬಾಯಿಂದ ಬಾಯಿಗೆ ಹರಿದು ಬಂದ ಸಂಗೀತ ಪ್ರಕಾರಕ್ಕೆ ಜಾನಪದ ಸಂಗೀತವೆನ್ನಬಹುದು ಎಂದು ನಿಡಗುಂದಿಕೊಪ್ಪ ಶಾಖಾ ಶಿವಯೋಗ ಮಂದಿರದ ಅಭಿನವ ಚನ್ನಬಸವ ಸ್ವಾಮೀಜಿ ಹೇಳಿದರು.

ಸಮೀಪದ ನಿಡಗುಂದಿಕೊಪ್ಪ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ನಾದಸ್ವರ ಸಂಗೀತ, ವಿವಿಧ ಕಲಾಭಿವೃದ್ಧಿ ಸೇವಾ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾನಪದ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಜನಪದ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಸಂಘ-ಸಂಸ್ಥೆಗಳಿಗೆ ಸರ್ಕಾರ ಮತ್ತು ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದರು.

ಪುರಾಣ ಪ್ರವಚನಕಾರ ಶೇಖರಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮಲ್ಲಪ್ಪ ಸರ್ವಿ, ಎಸ್.ಎಸ್. ಬನ್ನಿಗೊಳ, ಗೋವಿಂದಪ್ಪ ಪೂಜಾರ, ಸಂಗಮೇಶ ಅಬ್ಬಿಗೇರಿ, ಹನುಮಂತ ಸೂಡಿ, ವಿ.ವಿ. ಅಣ್ಣಿಗೇರಿ, ಆರ್.ಎಸ್. ರೋಣದ, ಬಸವರಾಜ ಮಠಪತಿ, ಆರ್.ವಿ. ಬೆಲ್ಲದ, ಶರಣವ್ವ ಮಾಸ್ತಿ, ಇತರರಿದ್ದರು.

ಮನಸೂರೆಗೈದ ಸಂಗೀತ: ಬಾಗಲಕೋಟೆಯ ರೆಹಮತ್ ಮುಲ್ಲಾ ಹಾಗೂ ತಂಡದವರು, ಮಂಗಳೂರಿನ ರೋಷನ್ ಅಲಿ, ಧಾರವಾಡದ ವೆಂಕಟೇಶ ಕುಲಕರ್ಣಿ, ಡಿ.ಎಚ್. ಅಣ್ಣಿಗೇರಿ ಸೇರಿ ಇತರರು ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಜನರ ಮನಸೂರೆಗೈದಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net