ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಅತ್ಯಗತ್ಯ

Cooperation is essential for the growth of the cooperative sector
ಇಳಕಲ್ಲ ನಗರದಲ್ಲಿ ಹಮ್ಮಿಕೊಂಡಿದ್ದ ವಿಶೇಷ ತರಬೇತಿ ಕಾರ್ಯಾಗಾರವನ್ನು ಶಿರೂರಿನ ಬಸವಲಿಂಗ ಸ್ವಾಮಿಗಳು ಉದ್ಘಾಟಿಸಿದರು. ಸಂಗಯ್ಯ ಹಿರೇಮಠ, ಉಪನ್ಯಾಸಕ ಹೊಸಪೇಟೆಯ ಲಿಯಾಖತ್‌ಅಲಿ, ಸಾಂತಪ್ಪ ಸಾಂತಗೇರಿ ಇತರರಿದ್ದರು.
Published on

ಇಳಕಲ್ಲ: ಸಹಕಾರ ಕ್ಷೇತ್ರದ ಬೆಳವಣಿಗೆಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ ಎಂದು ಶಿರೂರಿನ ಬಸವಲಿಂಗ ಸ್ವಾಮಿಗಳು ಹೇಳಿದರು.
ನಗರದ ಶ್ರೀ ವಿಜಯ ಮಹಾಂತೇಶ ಚಿತ್ತರಗಿ ಸಂಸ್ಥಾನ ಮಠದ ದಾಸೋಹ ಭವನದಲ್ಲಿ ಬೆಂಗಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಬಾಗಲಕೋಟೆ ಜಿಲ್ಲಾ ಸಹಕಾರಿ ಯೂನಿಯನ್ ಆಶ್ರಯದಲ್ಲಿ ಹುನಗುಂದ ಹಾಗೂ ಇಳಕಲ್ಲ ತಾಲೂಕಿನ ಎಲ್ಲ ವಿವಿಧ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಕರಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ತರಬೇತಿ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಂಗಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರ ಸಹಕಾರ ಕ್ಷೇತ್ರಗಳ ಮೇಲೆ ಹಲವಾರು ಬದಲಾವಣೆಗಳು ತಂದಿದ್ದು, ಅವುಗಳನ್ನು ಚುನಾಯಿತ ಪ್ರತಿನಿಧಿಗಳು, ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಾಹಕರಿಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಂಥ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಉಪನ್ಯಾಸಕ ಹೊಸಪೇಟೆಯ ಲಿಯಾಖತ್‌ಅಲಿ ಹಾಗೂ ಸಾಂತಪ್ಪ ಸಾಂತಗೇರಿ, ಲಕ್ಮಣ ಪಲಮಾರಿ, ಮಹಾಬಳೇಶ ಮರಟದ, ಜೆ. ಎನ್. ದೋಟಿಹಾಳ, ಮಹಮ್ಮದ್ ಯೂಸ್ು ಕಟಂಬ್ಲಿ ಇತರರಿದ್ದರು.

ವ್ಯವಸ್ಥಾಪಕ ಎಂ. ಎಸ್. ನಾಗರಾಳ ನಿರೂಪಿಸಿದರು. ಅನ್ನಪೂರ್ಣ ಹೇಮವಾಡಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net