

ಹುಬ್ಬಳ್ಳಿ: ಇಲ್ಲಿಯ ದಾಜಿಬಾನಪೇಟೆಯ ಶ್ರೀ ತುಳಜಾಭವಾನಿ ದೇವಸ್ಥಾನ ಮಹಾದ್ವಾರದ ಬಲಗಡೆಯ ಹಳೆ ಕಟ್ಟಡದ ಜೀರ್ಣೋದ್ಧಾರ ಕಾಮಗಾರಿಗೆ ಹೆಸ್ಕಾಂ ಅಧ್ಯಕ್ಷ ಅಜೀಮ್ ಪೀರ್ ಖಾದ್ರಿ, ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ, ಹು-ಧಾ ಅಧ್ಯಕ್ಷ ಸತೀಶ ಮೆಹರವಾಡೆ ಬುಧವಾರ ಚಾಲನೆ ನೀಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅಜೀಮ್ ಪೀರ್ ಖಾದ್ರಿ, ದೇವಸ್ಥಾನದ ಅಭಿವೃದ್ಧಿ ಮತ್ತು ಸೌಂದರ್ಯೀಕರಣಕ್ಕೆ ಹೆಸ್ಕಾಂನಿಂದ ಸಹಕಾರ ನೀಡಲಾಗುವುದು ಎಂದರು.
ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಡಾ. ಶಶಿಕುಮಾರ ಮೆಹರವಾಡೆ ಮಾತನಾಡಿ, ಸಮಾಜದ ಕಟ್ಟ ಕಡೆಯ ಜನರಿಗೂ ಸರ್ಕಾರದ ಸೌಲಭ್ಯ ಸಿಗುವಂತಾಗಲು ಪಂಚಾಯತ್ ಘಟಕಗಳಲ್ಲಿ ಸೇವಾ ಕೇಂದ್ರ ಪ್ರಾರಂಭಿಸಲಾಗುವುದು ಎಂದರು.
ಉಪಮುಖ್ಯ ಧರ್ಮದರ್ಶಿ ಭಾಸ್ಕರ ಜಿತೂರಿ ಮಾತನಾಡಿದರು.
ಹುಬ್ಬಳ್ಳಿ -ಧಾರವಾಡ ಎಸ್‌ಎಸ್‌ಕೆ ಸಮಾಜದ ಅಧ್ಯಕ್ಷ ಸತೀಶ ಮೆಹರವಾಡೆ ಅತಿಥಿಗಳನ್ನು ಗೌರವಿಸಿದರು.
ಪ್ರಮುಖರಾದ ಕೆ.ಪಿ. ಪೂಜಾರಿ, ಎನ್.ಎನ್. ಖೋಡೆ, ಶಂಕರ ಹಬೀಬ, ಶ್ರೀಕಾಂತ ಹಬೀಬ, ಎಫ್.ಕೆ. ದಲಬಂಜನ, ನೀಲಕಂಠಸಾ ಜಡಿ, ಜಯರಾಮ ಪವಾರ, ಎನ್.ಆರ್. ಹಬೀಬ, ರಂಗಾ ಬದ್ಧಿ, ಟಿ.ವಿ. ಪೂಜಾರಿ, ಗೋಪಾಲ ಬದ್ದಿ, ರಾಜು ಧರ್ಮದಾಸ, ಎಸ್.ಕೆ. ಬದ್ಧಿ, ವಿ.ಜಿ. ಕಲ್ಬುರ್ಗಿ, ಅರವಿಂದ ಕಲಬುರ್ಗಿ, ವಿಷ್ಣುಸಾ ದೊಂಗಡಿ, ಪ್ರೇಮನಾಥ ಧರ್ಮದಾಸ, ಎಂ.ಆರ್. ಸೊಳಂಕಿ, ಪರಶುರಾಮ ಹಬೀಬ, ಕೃಷ್ಣ ಬದ್ಧಿ , ನಾರಾಯಣ ಜಿತೂರಿ, ನಾರಾಯಣ ಪವಾರ, ತೋರಾಸಾ ಬಾಕಳೆ, ಮೋತಿಲಾಲ್ ಮಿಸ್ಕಿನ್ ಪ್ರಮುಖರು ಉಪಸ್ಥಿತರಿದ್ದರು.