ಚಿಕ್ಕಮಗಳೂರು ಅಭಿವೃದ್ಧಿಗೆ ಸಹಕಾರ

20 ckm 5 (1)
ಸಿಡಿಎ ಅಧ್ಯಕ್ಷ ನಯಾಜ್ ಅವರನ್ನು ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು ಸನ್ಮಾನಿಸಿದರು.
Published on

ಚಿಕ್ಕಮಗಳೂರು: ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಮೊಹಮ್ಮದ್ ನಯಾಜ್‌ಗೆ ಸಿವಿಲ್ ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳು ಅಭಿನಂದಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಜಿ.ರಮೇಶ್ ಮಾತನಾಡಿ, ಸಿಡಿಎ ಅಧ್ಯಕ್ಷರ ಅವಧಿಯಲ್ಲಿ ನಗರ ಅಭಿವೃದ್ಧಿಗೆ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ನೀಡಿ ಸಾಮಾನ್ಯ ಜನತೆಗೆ ಅನುಕೂಲವಾಗುವಂತೆ ಕಾರ್ಯನಿರ್ವಹಿಸಬೇಕು. ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಚಿಕ್ಕಮಗಳೂರು ನಗರದ ಮಾಸ್ಟರ್‌ಪ್ಲಾನ್ ತಯಾರಿಸಬೇಕು ಹಾಗೂ ನಗರಾಭಿವೃಧ್ದಿ ಇಲಾಖೆಯಡಿ ನಡೆಯುವ ಸಭೆಗಳಿಗೆ ಅಸೋಸಿಯೇಷನ್‌ಗೆ ಆಹ್ವಾನಿಸಿದರೆ ಚಿಕ್ಕಮಗಳೂರು ಸಂಬಂಧಿಸಿದಂತೆ ಮಾಹಿತಿ ಇಂಜಿನಿಯರ್ಸ್‌ಗಳಿಗೆ ಲಭ್ಯವಾಗುತ್ತದೆ. ಆಗ ನಗರದ ಅಭಿವೃದ್ಧಿಗೆ ಸೂಕ್ತ ಸಲಹೆ, ಸಹಕಾರ ನೀಡಬಹುದು ಎಂದು ಹೇಳಿದರು.
ಅಸೋಸಿಯೇಷನ್‌ನಲ್ಲಿ ಸುಮಾರು 100ಕ್ಕೂ ಹೆಚ್ಚು ಸದಸ್ಯರಿರುವ ಹಿನ್ನೆಲೆಯಲ್ಲಿ ಕಚೇರಿಯ ಝೋನಲ್ ರೆಗ್ಯೂಲೇಷನ್ಸ್ ಮತ್ತು ಪರವಾನಗಿ ನಿಯಮಗಳನ್ನು ತಿಳಿಸಿಕೊಡಲು ಪ್ರಾಧಿಕಾರದಿಂದ ಒಂದು ಕಾರ್ಯಕ್ರಮ ಏರ್ಪಡಿಸಬೇಕು ಎಂದು ಮನವಿ ಮಾಡಿದರು.
ಅಸೋಸಿಯೇಷನ್‌ನ ಉಪಾಧ್ಯಕ್ಷ ಕೆ.ಪಿ.ನಾಗೇಂದ್ರ, ಟಿ.ನಾರಾಯಣ ಸ್ವಾಮಿ, ಕಾರ್ಯದರ್ಶಿ ಪಿ.ಯುವರಾಜ್, ಸಹ ಕಾರ್ಯದರ್ಶಿ ಸಿ.ರಾಜು, ಖಜಾಂಚಿ ಅಬ್ದುಲ್ ಕಬೀರ್, ಕೋ ಆರ್ಡಿನೇಟರ್ ಕೆ.ಜಿ.ವೆಂಕಟೇಶ್, ಇಂಜಿನಿಯರ್ಸ್‌ಗಳಾದ ಎನ್.ರವಿ, ಎಂ.ಸಿ.ಕೃಷ್ಣಚಾರಿ, ಕುಮಾರನಾಯ್ಕ, ಸುನೀಲ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net