ಮಾದರಿ ಲೇಔಟ್ ನಿರ್ಮಾಣಕ್ಕೆ ಸಹಕಾರ: ಸದಾಶಿವ ಉಳ್ಳಾಲ್ ಅಭಿಮತ

Ull_model layout
Published on

ಉಳ್ಳಾಲ: ಕೊಣಾಜೆಯಲ್ಲಿರುವ ಮುಡಾ ಬಡಾವಣೆ ಕಾಂಕ್ರೀಟ್ ರಸ್ತೆಗೆ ನಾಲ್ಕು ಹಂತದಲ್ಲಿ ಅನುದಾನ ಬಿಡುಗಡೆಗೊಳಿಸಿ ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ತಿಳಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಾಣಗೊಳ್ಳಲಿರುವ ಕೊಣಾಜೆ ಬಡಾವಣೆ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಉಳ್ಳಾಲ ಕ್ಷೇತ್ರಾದ್ಯಂತ ಶಾಸಕರ ಶಿಫಾರಸ್ಸಿನ ಮೇರೆಗೆ ಮುಡಾ ಸಹಿತ ವಿವಿಧ ಇಲಾಖೆಗಳ ಅನುದಾನದಲ್ಲಿ ಸಾವಿರ ಕೋಟಿ ರೂ. ಅಧಿಕ ವೆಚ್ಚದ ಕಾಮಗಾರಿ ನಡೆದಿದೆ. ಕೊಣಾಜೆ ಮುಡಾ ಬಡಾವಣೆ ಪ್ರದೇಶಾಭಿವೃದ್ಧಿಗೆ ಗ್ರಾಮಸ್ಥರು ಮತ್ತು ಗ್ರಾ.ಪಂ.ನ ಸಹಕಾರ ಅಗತ್ಯ. ಈ ಮೂಲಕ ಅತ್ಯುತ್ತಮ ಲೇಔಟ್ ನಿರ್ಮಾಣ ಗುರಿ ಹೊಂದಲಾಗಿದೆ ಎಂದರು.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ಮುಡಾ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಸದಸ್ಯರಾದ ಅಬ್ಬು, ಸುಮನ್, ಸಬಿತಾ ಮಿಸ್ಮಿತ್, ಕೊಣಾಜೆ ಗ್ರಾ.ಪಂ. ಸದಸ್ಯರಾದ ಶೋಭಾ, ಪ್ರೇಮ್ ದಾಸ್, ಇಕ್ಬಾಲ್ ಬರುವ, ಇಕ್ಬಾಲ್ ಕೊಣಾಜೆ, ಮಾಜಿ ಸದಸ್ಯೆ ಗುಲಾಬಿ ಶೆಟ್ಟಿಗಾರ್, ಮಾಜಿ ಅಧ್ಯಕೆ ಹಿಲ್ಡಾ ಡಿಸೋಜ, ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಅಚ್ಚುತ ಗಟ್ಟಿ, ಮಂಗಳೂರು ತಾ.ಪಂ. ಮಾಜಿ ಅಧ್ಯಕ್ಷ ಮಹಮ್ಮದ್ ಮೋನು, ಮುಡಾ ಸಹಾಯಕ ಇಂಜಿನಿಯರ್‌ಗಳಾದ ಅಕ್ಬರ್ ಬಾಷಾ, ಅಶ್ವಿನಿ ಉಪಸ್ಥಿತರಿದ್ದರು. ವಲಯಾಧ್ಯಕ್ಷ ಶೌಕತ್ ಅಲಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net