

ಮೈಸೂರು: ನಗರದ ಬಲಿಜ ವಿದ್ಯಾರ್ಥಿನಿಲಯದ ಮೊದಲ ಹಂತದ ಕಟ್ಟಡ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಮಾಜಿ ಸಚಿವ ಡಾ.ಎಂ.ಆರ್. ಸೀತಾರಾಂ ಭರವಸೆ ನೀಡಿದರು.
ನಗರದ ಸರಸ್ವತಿಪುರಂನಲ್ಲಿರುವ ಬಣಜಿಗ ಸಮುದಾಯದ ವಿದ್ಯಾರ್ಥಿನಿಲಯದಲ್ಲಿ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿನಿಲಯದ ಕಟ್ಟಡ ಅಭಿವೃದ್ಧಿ ಪಡಿಸಲಾಗುವುದು. ಜತೆಗೆ ಮೊದಲ ಮಹಡಿಯ ಕೊಠಡಿಗಳ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ಸಮುದಾಯದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು ಸಮುದಾಯಕ್ಕೆ ನಾವು ಮಾಡುತ್ತಿರುವ ಸಾರ್ಥಕದ ಸೇವೆ ಎಂದುಕೊಂಡಿದ್ದೇನೆ. ಸಮುದಾಯದ ಹಣವಂತರು ಧನ ಸಹಾಯ ಮಾಡಬೇಕು. ಮಧ್ಯಮ ವರ್ಗದವರು ತಮ್ಮ ಕೈಲಾದಷ್ಟು ಸಹಕಾರ ನೀಡಬೇಕು ಎಂದು ಹೇಳಿದರು.
ಮೈಸೂರಿನ ಜಿಲ್ಲಾ ಬಣಜಿಗ (ಬಲಿಜ) ಸಂಘದ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಪ್ರಾಮಾಣಿಕವಾಗಿ ಸಮುದಾಯದ ಕೆಲಸವನ್ನು ಮಾಡು ಸಂಘ-ಸಂಸ್ಥೆಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡಬೇಕಾದ ಸಮುದಾಯದ ಪ್ರತಿಯೊಬ್ಬರ ಕರ್ತವ್ಯ. ಬೆಳೆಯುತ್ತಿರುವ ಸಮುದಾಯಕ್ಕೆ ಹೆಚ್ಚಿನ ಪಾಲುದಾರಿಕೆ ಮಾಡಬೇಕು. ಈ ಕಟ್ಟಡದ ಮೇಲೆ ಹಳೆ ಕಟ್ಟಡವಾಗಿದೆ. ಹೆಚ್ಚಿನ ಪ್ರೋತ್ಸಾಹ ಮಾಡುತ್ತೇವೆ. ಯುವ ಪೀಳಿಗೆಗೆ ಪ್ರೋತ್ಸಾಹ ನೀಡಬೇಕು ಎಂದರು.
ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಸಂಘದ ಜಿಲ್ಲಾಧ್ಯಕ್ಷ ಎಂ.ನಾರಾಯಣ ಮಾತನಾಡಿ, ದಶಕಗಳಿಂದ ಸಂಘದ ಅಭಿವೃದ್ಧಿ ಸಲಹೆ ಸಹಕಾರವನ್ನು ನೀಡುತ್ತ ಬರಲಾಗುತ್ತಿದೆ. ಎಚ್.ಎ.ವೆಂಕಟೇಶ್ ಸಮುದಾಯದ ಮೇಲೆ ಕಾಳಜಿ ಹೊಂದಿದ್ದಾರೆ. ಸಂಘದ ನಿರ್ದೇಶಕರ ಸಹಕಾರದಿಂದ ಬಣಜಿಗ ಸಂಘವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಸಮುದಾಯವು ಹಿಂದುಳಿದಿದೆ. ಕೈಗಾರಿಕೋದ್ಯಮಿ, ಸ್ಥಿತಿವಂತರು ಈ ಭಾಗದಲ್ಲಿ ಇಲ್ಲ. ರೈತಾಪಿ ವರ್ಗದವರೇ ಹೆಚ್ಚು ಇದ್ದು, ಸಂಸಾರ ನಿರ್ವಹಣೆ ಮಾಡಲು ಕಷ್ಟವಾಗಿದೆ. ಹೀಗಿದ್ದರೂ ಸಮುದಾಯದ ಏಳಿಗೆಗೆ ಹಣ ನೀಡುತ್ತಿರುವುದು ಶ್ಲಾಘನೀಯ. ನಾನು ಇರುವರೆಗೂ ಸಮಾಜದ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಅರಗು ಮತ್ತು ಬಣ್ಣದ ಕಾರ್ಖಾನೆಯ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಮಾತನಾಡಿ, ಅಧಿಕಾರಿ ವರ್ಗದ ಪ್ರಮಾಣಿಕತೆಯಿಂದ ಜಿಲ್ಲೆಯಲ್ಲಿ ಅತ್ಯುತ್ತಮ ಕೆಲಸ ಮಾಡಲು ಸಹಕಾರವಾಗಿದೆ. ಈ ಕಟ್ಟಡದ ನಿರ್ವಹಣೆಗೆ ಡಾ.ಎಂ.ಆರ್.ಸೀತಾರಾಂ ಅವರು ದಯೆ ತೋರಬೇಕು ಎಂದು ಮನವಿ ಮಾಡಿದರು.
ಮಂಡ್ಯ ಸಂಘದ ಅಧ್ಯಕ್ಷ ಕೆ.ಎನ್.ಮೋಹನ್ ಕುಮಾರ್, ದಾಸ ಬಣಜಿಗರ ಸಂಘದ ಚಾಮರಾಜನಗರ ಅಧ್ಯಕ್ಷ ಸಿ.ಜಿ. ಚಂದ್ರಶೇಖರ್, ಪ್ರಮುಖರಾದ ಪಾಂಡುರಂಗ, ಆರ್.ಬಾಲರಾಜು, ಎಂ.ನಾಗರಾಜು, ಟಿ.ಎಸ್.ರಮೇಶ್, ಜಿ.ರಮೇಶ್, ಎಚ್.ಆರ್. ಗೋಪಾಲಕೃಷ್ಣ, ಚೆಲುವರಾಜು, ಕೆ. ಚಂದ್ರಶೇಖರ, ಡಿ.ನಾಗರಾಜ ಹಾಗೂ ಇತರರು ಇದ್ದರು.