ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಹಕಾರ ಸಂ ಪ್ರೇರಣೆ

21 08 2025_BGR_RURAL-PAGE_03
ಸೂಲಿಬೆಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂದ 50ನೇ ಸರ್ವಸದಸ್ಯರ ಸಭೆಯನ್ನು ಶಾಸಕ ಶರತ್​ ಬಚ್ಚೇಗೌಡ ಉದ್ಘಾಟಿಸಿದರು. ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ, ಸಂದ ಅಧ್ಯಕ್ಷ ಬಿ.ವಿ.ಸತೀಶ್​ಗೌಡ ಇತರರಿದ್ದರು.
Published on

ಸೂಲಿಬೆಲೆ : ರೈತರು ಹಾಗೂ ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಸಹಕಾರ ಸಂಗಳು ಸಾಕಷ್ಟು ಪ್ರೇರಣೆ ನೀಡುತ್ತಿವೆ ಎಂದು ಶಾಸಕ ಶರತ್​ ಬಚ್ಚೇಗೌಡ ತಿಳಿಸಿದರು. ಪಟ್ಟಣ ಹೊರವಲಯದ ಸೂಲಿಬೆಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂದ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ 50ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.

ದೂರದೃಷ್ಟಿಯ ಫಲವಾಗಿ ಪ್ರಾರಂಭಗೊಂಡ ಸಹಕಾರ ಸಂದಿಂದ ಸಹಸ್ರಾರು ಬಡ ಮತ್ತು ಮಧ್ಯಮ ವರ್ಗದವರ ಆರ್ಥಿಕ ಸ್ವಾವಲಂಬನೆ ಕೃಷಿಯಿಂದ ಸಾಧ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಸಂವು 62 ಲಕ್ಷ ರೂಪಾಯಿ ಲಾಭ ಗಳಿಸಿದ್ದು, ಮುಂದಿನ ದಿನಗಳಲ್ಲಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಬಿಡಿಸಿಸಿ ಬ್ಯಾಂಕ್​ಗೆ ಒತ್ತಾಯಿಸಲಾಗುವುದು ಎಂದರು. ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ ಮಾತನಾಡಿ, ಬಿಡಿಸಿಸಿ ಬ್ಯಾಂಕ್​ 1955ರಲ್ಲಿ ಪ್ರಾರಂಭಗೊಂಡು ದೊಡ್ಡಬಳ್ಳಾಪುರ ರಾಮೇಗೌಡರು ಪ್ರಥಮ ಅಧ್ಯಕ್ಷರಾದರು. ಪ್ರಸ್ತುತ 208 ಸಹಕಾರ ಸಂಗಳು ಜಿಲ್ಲೆಯಲ್ಲಿ ರೈತರ ಪರ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿಯೇ ಬಿಡಿಸಿಸಿ ಬ್ಯಾಂಕ್​ ಆರ್ಥಿಕ ವಹಿವಾಟಿನಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಹೇಳಿದರು. ಬಿಡಿಸಿಸಿ ಬ್ಯಾಂಕ್​ ಅಧ್ಯಕ್ಷ ವಿಜಯದೇವ್​ ಮಾತನಾಡಿ, ಬ್ಯಾಂಕ್​ನಿಂದ ಜಿಲ್ಲೆಯಲ್ಲಿ 40ಕೋಟಿ ಸಾಲ ಶೂನ್ಯ ಬಡ್ಡಿದರದಲ್ಲಿ ನೀಡಲಾಗಿದ್ದು, ಹೊಸಕೋಟೆ ತಾಲೂಕಿಗೆ 8 ಕೋಟಿ ಸಾಲ ನೀಡಲಾಗಿದೆ. ಬಿಡಿಸಿಸಿ ಬ್ಯಾಂಕ್​ನಿಂದ ಸಂಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡಲಾಗುವುದು ಎಂದರು.

ಸೂಲಿಬೆಲೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರ ಸಂದ ಅಧ್ಯಕ್ಷ ಬಿ.ವಿ.ಸತೀಶ್​ಗೌಡ, ಉಪಾಧ್ಯಕ್ಷ ಮುನಿಯಪ್ಪ, ಬಿಡಿಸಿಸಿ ಬ್ಯಾಂಕ್​ ಉಪಾಧ್ಯಕ್ಷ ಕೃಷ್ಣಮೂರ್ತಿ, ಪ್ರಧಾನ ವ್ಯವಸ್ಥಾಪಕ ಪಿಳ್ಳೆಗೌಡ, ಟಿಎಪಿಸಿಎಂಎಸ್​ ಅಧ್ಯಕ್ಷ ಮುತ್ಸದ್ರ ಬಾಬುರೆಡ್ಡಿ, ಹಾಫ್​ ಕಾಮ್ಸ್​ ಮಾಜಿ ನಿರ್ದೇಶಕ ವೆಂಕಟೇಶಪ್ಪ, ಯುವ ಮುಖಂಡ ಬಿ.ಜಿ.ನಾರಾಯಣಗೌಡ, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೇಶವಮೂರ್ತಿ, ನಿರ್ದೇಶಕ ತಮ್ಮೆಗೌಡ, ಸಿಇಒ ಶ್ರೀನಿವಾಸಮೂರ್ತಿ, ನಿವೃತ್ತ ಸಿಇಒ ಗಿರೀಶ್​ ಇದ್ದರು.

ವೇರ್​ ಹೌಸ್​ ನಿರ್ಮಾಣ ! : ಸಹಕಾರ ಸಂ ಬಡವರು, ರೈತರು, ಕೃಷಿ, ಹೈನುಗಾರಿಕೆ ಸಾಲ ಸೌಲಭ್ಯ ನೀಡುತ್ತಾ ಆರ್ಥಿಕವಾಗಿ ಮೇಲೆತ್ತುತ್ತಿದೆ. ಬಿ.ಎನ್​.ಬಚ್ಚೇಗೌಡರು ಸಚಿವರಾಗಿದ್ದಾಗ ಸೂಲಿಬೆಲೆ ಸಹಕಾರ ಸಂಕ್ಕೆ 5 ಎಕರೆ ಜಾಗ ಮಂಜೂರು ಮಾಡಿಸಿದ್ದು, ಇದೀಗ ರಾಜ್ಯದಲ್ಲಿ ಎಲ್ಲೂ ಇರದ ಜಾಗ ನಮ್ಮ ಸಂಕ್ಕಿದೆ. ಮುಂದಿನ ದಿನಗಳಲ್ಲಿ ವೇರ್​ ಹೌಸ್​ ನಿರ್ಮಿಸಿ ಬಾಡಿಗೆಗೆ ನೀಡುವ ಚಿಂತನೆ ನಡೆದಿದ್ದು, ಯೋಜನೆ ಸಾಕಾರಗೊಂಡರೆ ಸಂಕ್ಕೆ ಮತ್ತಷ್ಟು ಆರ್ಥಿಕ ವರಮಾನ ನಿರಂತರವಾಗಿ ಬರಲಿದೆ ಎಂದು ಒಕ್ಕಲಿಗರ ಸಂದ ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ ಮಾಹಿತಿ ನೀಡಿದರು.

ಅಭಿವೃದ್ಧಿ ಕಾರ್ಯಗಳಿಗೆ ಚಿಂತನೆ : ಕಾಂಗ್ರೆಸ್​ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸುತ್ತಿದ್ದು, ಸೂಲಿಬೆಲೆಯ ಮುರಾರ್ಜಿ ದೇಸಾಯಿ ಶಾಲೆಯಲ್ಲಿ 3 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ, 4ಕೋಟಿ ರೂ. ವೆಚ್ಚದಲ್ಲಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ, ಎಪಿಜಿ ಅಬ್ದುಲ್​ ಕಲಂ ವಸತಿ ಶಾಲೆಯಲ್ಲಿ ಪಿಯುಸಿ ಪ್ರಾರಂಭಿಸಲು 9 ಕೋಟಿ ರೂ. ವೆಚ್ಚದಲ್ಲಿ ಹೊಸ ಬ್ಲಾಕ್​, 10 ಕೋಟಿ ವೆಚ್ಚದಲ್ಲಿ ನೂತನ ಬಿಸಿಎಂ ವಸತಿ ಶಾಲೆ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸೂಲಿಬೆಲೆಯಲ್ಲಿ ಕೇಂದ್ರಿಯ ವಿದ್ಯಾಲಯ ಶ್ರೀ ಪ್ರಾರಂಭಿಸುವುದಾಗಿ ಶಾಸಕ ಶರತ್​ ಬಚ್ಚೇಗೌಡ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net