

ನಾಗರಾಜ ಜೋರಾಪೂರ ಚನ್ನಮ್ಮನ ಕಿತ್ತೂರು
ಪ್ರತಿವರ್ಷ ಸದ್ದಿಲ್ಲದೆ ಚುನಾವಣೆ ಕಾಣುತ್ತಿದ್ದ ಜಿಲ್ಲಾ ಮಧ್ಯವರ್ತಿ ಸಹಕಾರ ಬ್ಯಾಂಕ್ (ಬಿಡಿಸಿಸಿ) ಈ ವರ್ಷ ಇನ್ನಿಲ್ಲದ ಪೈಪೋಟಿ ಕಾಣುತ್ತಿದ್ದು, ಚನ್ನಮ್ಮನ ಕಿತ್ತೂರು ಕ್ಷೇತ್ರ ವ್ಯಾಪ್ತಿಯ ಪ್ರಾಥಮಿಕ ಕೃಷಿ ಪತ್ತಿನ ಠರಾವು ಸಭೆಗಳು ಕಾದಾಟದ ಸ್ಥಳಗಳಾಗಿ ಪರಿಣಮಿಸುತ್ತಿವೆ.
ಡಿಸಿಸಿ ಬ್ಯಾಂಕ್ ಚುನಾವಣೆಗೆ ಮತದಾನ ಹಕ್ಕು ನೀಡುವ ನಿಟ್ಟಿನಲ್ಲಿ ನಡೆಯುತ್ತಿರುವ ಠರಾವು ಸಭೆಗಳು ಜನಸಾಮಾನ್ಯರಲ್ಲಿ ಗೊಂದಲ ಸೃಷ್ಟಿಸುತ್ತಿದ್ದರೆ, ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸುತ್ತಿವೆ. ಇದೇ ಕಾರಣದಿಂದ ಪಿಕೆಪಿಎಸ್ ಠರಾವು ಸಭೆಗಳು ಈಗ ರಾಜಕೀಯ ಕುಟುಂಬಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಕಾಡಲಾರಂಭಿಸಿವೆ.
ಮಂಗಳವಾರ ಬೆಲೂರು ಗ್ರಾಮದ ಪಿಕೆಪಿಎಸ್ ಸಭೆಗೆ ಇಬ್ಬರು ನಿರೀಕರ ನೇಮಕಾತಿ ಕಳೆದೊಂದು ವಾರದಿಂದ ಸೃಷ್ಟಿಸಿರುವ ಗೊಂದಲ ಮುಂದುವರಿಯುವಂತೆ ಮಾಡಿದ್ದಲ್ಲದೇ ಬಿಜೆಪಿ ಕಾರ್ಯಕರ್ತರ ವಿರೋಧದಿಂದ ಸೃಷ್ಟಿಯಾದ ಗದ್ದಲ ನಿಯಂತ್ರಣಕ್ಕೆ ಪೊಲೀಸರ ಲು ಲಾಠಿಪ್ರಹಾರಕ್ಕೂ ಕಾರಣವಾಗಿದೆ. ಉಗರಖೋಡ ಗ್ರಾಮದಲ್ಲೂ ಠರಾವು ಸಭೆಗೆ ಮುಖ್ಯ ಕಾರ್ಯನಿರ್ವಾಹಕ ಗೆರುಹಾಜರಾಗಿರುವುದಕ್ಕೆ ಬಿಜೆಪಿ ನಾಯಕರು ಕಾರಣ ಎಂದು ಆರೋರೋಪಿಸಿ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರನ್ನು ಒತ್ತಾಯಿಸಿದ್ದಾರೆ.
ಈಚೆಗೆ ಚನ್ನಮ್ಮನ ಕಿತ್ತೂರಿನ ಪಿಕೆಪಿಎಸ್ ಠರಾವು ಸಭೆಯಿಂದ ಹೊರಹಾಕಿದ ಕಾರ್ಯದರ್ಶಿಯನ್ನು ಪೊಲೀಸರ ಕಣ್ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರು ಅಪಹರಣ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದಾಗ ಎರಡೂ ಪಕ್ಷದ ಕಾರ್ಯಕರ್ತರು ಪರಸ್ಪರ ಬಡಿದಾಡಿಕೊಂಡಿದ್ದು ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿತ್ತು. ಸೋಮವಾರ ಹುಲಿಕಟ್ಟಿ ಗ್ರಾಮದ ಪಿಕೆಪಿಎಸ್ ಠರಾವು ಸಭೆಯಲ್ಲಿ ಕಿತ್ತೂರು ಪಿಎಸ್ಐ ಬೆದರಿಕೆಯಿಂದ ಬಿಜೆಪಿ ಪರವಾಗಿದ್ದ ಬಹುಮತವನ್ನು ಕಾಂಗ್ರೆಸ್ನವರು ಪಡೆದುಕೊಂಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದು ಗಲಾಟೆಗೆ ಕಾರಣವಾಗಿದೆ.
ಪ್ರತಿಷ್ಠೆಯ ಪ್ರಶ್ನೆ
"ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಾವುಟ ಹಿಡಿದಿರುವ ಮಾಜಿ ಸಚಿವ ದಿವಂಗತ ಡಿ.ಬಿ.ಇನಾಮದಾರ ಪುತ್ರ ವಿಕ್ರಮ್ ಇನಾಮದಾರ ವಿರುದ್ಧ ಕಾಂಗ್ರೆಸ್ನ ಹಾಲಿ ಶಾಸಕ ಬಾಬಾಸಾಹೇಬ ಪಾಟೀಲ ಸಹೋದರ ನಾನಾಸಾಹೇಬ ಪಾಟೀಲ ಡಿಸಿಸಿ ಬ್ಯಾಂಕ್ ಚುನಾವಣೆ ಕಣದಲ್ಲಿದ್ದು, ಪೈಪೋಟಿಯು ಪ್ರತಿಷ್ಠೆಯ ವಿಷಯವಾಗಿ ಬದಲಾಗಿದೆ. ಒಟ್ಟಾರೆ ದಿನ ಕಳೆದಂತೆ ಗೊಂದಲ ಸೃಷ್ಟಿಸುತ್ತಿರುವ ಡಿಸಿಸಿ ಬ್ಯಾಂಕ್ ಚುನಾವಣೆ ಸುಸೂತ್ರವಾಗಿ ನಡೆದರೆ ಸಾಕು ಎಂಬುದು ಜನಸಾಮಾನ್ಯರ ನಿರೀೆಯಾಗಿದೆ."