

ವಿಜಯವಾಣಿ ಸುದ್ದಿಜಾಲ ಧಾರವಾಡ
ಲೋಕಸಭೆ ಚುನಾವಣೆಗೆ ಏ. 12ರಿಂದ 19ರವರೆಗೆ ನಾಮಪತ್ರ ಸಲ್ಲಿಕೆ ನಡೆಯುತ್ತದೆ. ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿ ರಾಜಕೀಯ ಪಗಳಿಗೆ ಅಗತ್ಯ ಮಾಹಿತಿ ನೀಡಲಾಗಿದ್ದು, ಅಜಿರ್ ನಮೂನೆ ಭತಿರ್ ಸೇರಿ ನಾಮಪತ್ರ ಸಲ್ಲಿಕೆ ಅವಧಿಯಲ್ಲಿ ಪಾಲಿಸಬೇಕಾದ ಚುನಾವಣಾ ನಿಯಮಗಳನ್ನು ತಿಳಿಸಲಾಗಿದೆ. ಎಲ್ಲವನ್ನೂ ಸರಿಯಾಗಿ ಪಾಲಿಸುವ ಮೂಲಕ ರಾಜಕೀಯ ಪಗಳು ಸಹಕಾರ ನೀಡಬೇಕು ಎಂದು ಜಿಲ್ಲಾ ಚುನಾವಣಾವಧಿಕಾರಿ ದಿವ್ಯ ಪ್ರಭು ಹೇಳಿದರು.
ಅಭ್ಯಥಿರ್ಗಳು ನಾಮಪತ್ರ ಸಲ್ಲಿಕೆಗೆ ಅನುಸರಿಸಬೇಕಾದ ನಿಯಮ ಮತ್ತು ನಾಮಪತ್ರ ಸಲ್ಲಿಕೆ ಕುರಿತು ರಾಜಕೀಯ ಪಗಳ ಪ್ರತಿನಿಧಿಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣಾಧಿಕಾರಿ ಕಚೇರಿ ಸುತ್ತ 200 ಮೀ. ವ್ಯಾಪ್ತಿಯ ಗಡಿ ಗುರುತಿಸಿದ್ದು, 100 ಮೀ. ವ್ಯಾಪ್ತಿ ನಿರ್ಬಂಧಿತ ಪ್ರದೇಶವಾಗಲಿದೆ. ಆ ವ್ಯಾಪ್ತಿಯಲ್ಲಿ ಪ್ರವೇಶಿಸುವ ವಾಹನಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಚುನಾವಣಾಧಿಕಾರಿ ಕಚೇರಿ ಒಳಗೆ ಪ್ರವೇಶಿಸಲು ಅಭ್ಯಥಿರ್ಯೊಂದಿಗೆ 4 ಜನರಿಗೆ ಮಾತ್ರ ಅವಕಾಶವಿದೆ ಎಂದರು.
ಮತದಾರರ ಯಾದಿಯಲ್ಲಿನ ಹೆಸರು ಸೇರ್ಪಡೆ, ತಿದ್ದುಪಡಿ ತೆಗೆದುಹಾಕಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೆ ಬಿಎಲ್ಎಗಳ (ಬ್ಲಾಕ್ ಲೇವಲ್ ಎಜೆಂಟ್) ಮೂಲಕ ಪರಿಶೀಲಿಸಿ ನಮೂನೆ 6 ಸಲ್ಲಿಸಿ ಹೆಸರು ಸೇರ್ಪೆಡೆಗೆ ಏ. 9ರವರೆಗೆ ಅವಕಾಶವಿದೆ. ರಾಕೀಯ ಪದ ಪ್ರತಿನಿಧಿಗಳು ಸಭೆಯಲ್ಲಿ ಚಚಿರ್ಸಿದ ಅಂಶಗಳ ಜತೆಗೆ ಕಾಲಕಾಲಕ್ಕೆ ಚುನಾವಾಣಾ ಆಯೋಗ, ಚುನಾವಣಾಧಿಕಾರಿ ನೀಡುವ ನಿರ್ದೇಶನ ಮತ್ತು ಮಾರ್ಗಸೂಚಿಗಳನ್ನು ಪಾಲಿಸಿ ಸಹಕರಿಸುವಂತೆ ತಿಳಿಸಿದರು.
ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, ಮೆರವಣಿಗೆ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ, ಆಯೋಗದ ನಿಯಮಗಳ ಪ್ರಕಾರ 3 ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ವಾಹನಗಳ ಬಳಕೆಗೆ ಟ್ರಾಫಿಕ್ ನಿಯಮ ಪಾಲಿಸಬೇಕು. ವಾಹನಗಳ ಮಾಹಿತಿಯನ್ನು ಮೊದಲೇ ಪೊಲೀಸ್ ಇಲಾಖೆಗೆ ನೀಡಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ, ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಎಸಿಪಿ ಬಿ.ಎಸ್.ಬಸವರಾಜ, ನೋಡಲ್ ಅಧಿಕಾರಿ ಅಜೀಜ ದೇಸಾಯಿ, ವಿವಿಧ ರಾಕೀಯ ಪಗಳ ಪ್ರತಿನಿಧಿಗಳು, ಚುನಾವಣಾ ಸಿಬ್ಬಂದಿ, ಇತರರು ಇದ್ದರು.