

ಶಿಗ್ಗಾಂವಿ: ಪೊಲೀಸರು ಸವಾಜದಲ್ಲಿ ಶಾಂತಿ ಕಾಪಾಡುವಲ್ಲಿ ನಿರಂತರವಾಗಿ ಶ್ರಮಿಸುತ್ತಿರುತ್ತಾರೆ. ಉತ್ತಮ ಸವಾಜ ನಿರ್ವಾಣಕ್ಕಾಗಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಗಂಗೇಬಾವಿ ಕೆಎಸ್‌ಆರ್‌ಪಿ 10ನೇ ಪೊಲೀಸ್ ಪಡೆ ಕವಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಹೇಳಿದರು.
ತಾಲೂಕಿನ ಗಂಗೇಬಾವಿ ಕೆಎಸ್‌ಆರ್‌ಪಿ 10ನೇ ಪೊಲೀಸ್ ಪಡೆ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಸಂಸ್ಮರಣಾ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ವಾತನಾಡಿದರು.
ಸವಾಜಕ್ಕಾಗಿ ಜನರ ಹಿತ ಕಾಯುವಲ್ಲಿ ಪೊಲೀಸರು ಪ್ರಾಣದ ಹಂಗು ತೊರೆದು ಶ್ರಮವಹಿಸಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಟುಂಬ, ಬಂಧುಗಳನ್ನು ಬಿಟ್ಟು ಅನೇಕ ದಿನಗಳವರೆಗೆ ಹೊರಗೆ ಉಳಿದು ಗಲಭೆಗಳನ್ನು ತಡೆಯುವಲ್ಲಿ ಶ್ರಮಿಸುತ್ತಾರೆ. ಎಂತಹ ಸಂದರ್ಭದಲ್ಲೂ ಎದೆಗುಂದದೇ ಪ್ರಾಣ, ತ್ಯಾಗ ವಾಡಿದ ಅನೇಕ ಪೊಲೀಸ್ ಹುತಾತ್ಮರನ್ನು ಸ್ಮರಿಸುವ ಜತೆಗೆ ಅವರ ಕುಟುಂಬ ಬಂಧುಗಳಿಗೆ ನೆರವಾಗಿ ನಿಲ್ಲುವುದು ಅವಶ್ಯವಾಗಿದೆ. ಸರ್ಕಾರದಿಂದ ಅವರ ಕುಟುಂಬಕ್ಕೆ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯವಾಗಿದೆ. ಹುತಾತ್ಮ ಪೊಲೀಸರ ಸೇವೆ ಸ್ಮರಣೀಯವಾಗಿದೆ ಎಂದರು.
ಜಿಲ್ಲಾ ಆರೋಗ್ಯ ಅಧಿಕಾರಿ ರಾಜೇಶ ಸುರಗೀಹಳ್ಳಿ ವಾತನಾಡಿ, ಪೊಲೀಸರ ಸೇವೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಮ್ಮ ರಕ್ಷಣೆಗೆ ನಿಂತ ಪೊಲೀಸ್ ಸಿಬ್ಬಂದಿ ಆರೋಗ್ಯ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಕೆಎಸ್‌ಆರ್‌ಪಿ ಆವರಣದಲ್ಲಿ ಸರ್ಕಾರಿ ಆಸ್ಪತ್ರೆ ತೆರೆಯಲಾಗುತ್ತಿದೆ ಎಂದರು.
ಶಿಗ್ಗಾಂವಿ ರಂಭಾಪುರಿ ಕಾಲೇಜ್ ಪ್ರಾಚಾರ್ಯ ಪ್ರೊ.ಬಿ.ವೈ. ತೊಂಡಿಹಾಳ, ನಿವೃತ್ತ ಪ್ರಾಚಾರ್ಯ ಸಿ.ಎಚ್. ತಾವರಗೊಂದಿ ಅವರು ಕಾಲೇಜಿನಲ್ಲಿ ಓದಿ ಉನ್ನತ ಹುದ್ದೆಗೇರಿದ ಕವಾಂಡೆಂಟ್ ಎನ್.ಬಿ. ಮೆಳ್ಳಾಗಟ್ಟಿ ಅವರನ್ನು ಸನ್ಮಾನಿಸಿದರು.
ಸಹಾಯಕ ಕವಾಂಡೆಂಟ್ ವಿಶ್ವನಾಥ ನಾಯಕ, ದಾವಲಸಾಬ್ ಯಲಿಗಾರ, ಅಧಿಕಾರಿಗಳಾದ ರಾಜಶೇಖರ ಪಾಟೀಲ, ಶ್ರೀಕಾಂತ ನಾಯಕ, ಶ್ರೀಧರ ವ್ಮಾುರಿ, ಕೃಷ್ಣಪ್ಪ , ರಾಜೇಂದ್ರ, ಸಂತೋಷ ವಸದ, ವಾರುತಿ ಬಿ., ನಾರಾಯಣ ಹೋಗಾಡೆ, ಸುರೇಶ ಡಂಬೇರಿ, ಹನುಮೇಶ ಜಿ. ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.
ಇದಕ್ಕೂ ಪೂರ್ವದಲ್ಲಿ ಅಧಿಕಾರಿಗಳಿಂದ ಹುತಾತ್ಮ ಸ್ಮಾರಕಕ್ಕೆ ಹೂಗುಚ್ಛ ಸಮರ್ಪಣೆ, ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ಸಲ್ಲಿಕೆ, ಶಸ ವಂದನೆಗಳೊಂದಿಗೆ ಮೌನಾಚರಣೆ, ನಂತರ ವಾದ್ಯ ತಂಡದಿಂದ ಶೋಕಗೀತೆ ಜರುಗಿದವು.