ಲೋಕಾಯುಕ್ತ ತನಿಖೆಗೆ ಸಂಪೂರ್ಣ ಸಹಕಾರ

T.D. rajegowda- Congress Sringeri (2)
Published on

ಶೃಂಗೇರಿ: ನನ್ನ ಕುಟುಂಬ ಮತ್ತು ದಿವಂಗತ ಸಿದ್ದಾರ್ಥ್ ಹೆಗ್ಡೆ ಅವರ ಕುಟುಂಬದ ನಡುವಿನ ವ್ಯವಹಾರವನ್ನು ಕೊಪ್ಪ ಬಿಜೆಪಿ ಮುಖಂಡ ಎಚ್.ಕೆ. ದಿನೇಶ್ ಅವರು ತಮ್ಮ ದ್ವೇಷ ರಾಜಕಾರಣಕ್ಕಾಗಿ ಬಳಸಿಕೊಂಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ದೂರಿದರು.

ತಾಲೂಕಿನ ಬೆಟ್ಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ನನ್ನ ಕುಟುಂಬಸ್ಥರ ಮೇಲೆ ಖಾಸಗಿ ದೂರು ದಾಖಲಿಸಲಾಗಿದೆ. ಅವರು ದಾಖಲಿಸಿದ ದೂರಿನ ಆಧಾರದ ಮೇಲೆ ನ್ಯಾಯಲಯ ಲೋಕಾಯುಕ್ತ ಎಸ್ಪಿಗೆ ತನಿಖೆ ಮಾಡಲು ಆದೇಶ ನೀಡಿದ್ದಾರೆ. ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಕಾಣಿಸಿದ ಜಮೀನಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ನನಗಿರುವ ಅಧಿಕಾರವನ್ನು ನಾನು ದುರ್ಬಳಕೆ ಮಾಡಿಕೊಂಡಿಲ್ಲ ಎಂದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಅವರು ರಾಜಕೀಯ ದುರುದ್ದೇಶದಿಂದ ದೂರುದಾರ ಎಚ್.ಕೆ.ದಿನೇಶ್ ಅವರಿಗೆ ಪ್ರಚೋದನೆ ನೀಡಿದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ಲೋಕಾಯುಕ್ತ ಪೊಲೀಸರು ನಡೆಸುವ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದು ನನ್ನ ಕರ್ತವ್ಯ. ಹಾಗಾಗಿ ವಿದೇಶದಲ್ಲಿರುವ ನನ್ನ ಮಗನನ್ನು ಬರಲು ಸೂಚಿಸಲಾಗಿದೆ. ವಿದೇಶದಲ್ಲಿ ಪತ್ರಿಕೆಯೊಂದರ ಸಹಯೋಗದಲ್ಲಿ ಆಯೋಜಿಸಲಾದ ಕಾರ್ಯಕ್ರಮಕ್ಕೆ ಹಾಜರಾಗದೆ ತನಿಖೆಗೆ ಸಹಕರಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net