

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾರತವನ್ನು ಮೂರನೇ ಅತಿದೊಡ್ಡ ಆಥಿರ್ಕತೆಯನ್ನಾಗಿ ಮಾಡುವ ಸಂಕಲ್ಪ ಮಾಡಿದ್ದು, ಇದರಲ್ಲಿ ದೇಶದ ಸಹಕಾರ ಕ್ಷೇತ್ರದ ಪಾಲು ದೊಡ್ಡದಿರಲಿದೆ ಎಂದು ಭಾರತ ಸರ್ಕಾರದ ಸಹಕಾರ ಮಂತ್ರಾಲಯದ ರಾಜ್ಯ ಸಚಿವ ಬಿ.ಎಲ್. ವರ್ಮಾ ಹೇಳಿದರು.
ಇಲ್ಲಿಯ ಎಪಿಎಂಸಿ ಎದುರಿನ ವಿದ್ಯಾಧಿರಾಜ ಭವನದಲ್ಲಿ ಶನಿವಾರ ಸಹಕಾರ ಭಾರತಿ ಕರ್ನಾಟಕ ವತಿಯಿಂದ ಏರ್ಪಡಿಸಿದ್ದ ಅಖಿಲ ಭಾರತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ (ಪ್ಯಾಕ್ಸ್) ಸಂಗಳ ಮಹಾಧಿವೇಶನ ಸಮಾರೋಪದಲ್ಲಿ ಅವರು ಮಾತನಾಡಿದರು.
ಸಹಕಾರ ಇಲಾಖೆಯನ್ನು ಬಲವರ್ಧನೆ ಮಾಡಲು ಕೇಂದ್ರ ಸರ್ಕಾರ ಬಹಳಷ್ಟು ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ 300ಕ್ಕೂ ಹೆಚ್ಚು ಸೊಸೈಟಿಗಳನ್ನು ಗಣಕೀರಣ ಮಾಡಲಾಗಿದೆ. ಗಣಕೀರಣಕ್ಕಾಗಿ ಕರ್ನಾಟಕಕ್ಕೆ 40 ಕೋಟಿ ರೂ. ಅನುದಾನ ನೀಡಲಾಗುವುದು ಎಂದರು.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಿ ಭಾರತ ಹೊರಹೊಮ್ಮಲಿದೆ. ಇದು ಸಹಕಾರಿಗಳ ಸಹಕಾರ ಇಲ್ಲದೇ ಸಾಧ್ಯವಿಲ್ಲ. ಹಾಗಾಗಿ ಸಹಕಾರ ರಂಗ ಬಲವರ್ಧನೆಗೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಕಿಸಾನ್ ಸಮೃದ್ಧಿ, ಜನೌಷಧಿ, ಗ್ಯಾಸ್ ಏಜೆನ್ಸಿ, ಪೆಟ್ರೋಲ್ ಪಂಪ್, ಕುಡಿಯುವ ನೀರು, ಹೀಗೆ ಎಲ್ಲ ಕಾರ್ಯಗಳನ್ನು ಗ್ರಾಮದ ಸಹಕಾರ ಸಂವೇ ನಿರ್ವಹಣೆ ಮಾಡಲಿದೆ. ಕೃಷಿ ಕ್ಷೇತ್ರಕ್ಕೆ ಬಜೆಟ್ನಲ್ಲಿ ಈ ಮೊದಲಿದ್ದ 25 ಸಾವಿರ ಕೋಟಿ ರೂಪಾಯಿಗಳಿಂದ 1.25 ಲಕ್ಷ ಕೋಟಿ ರೂ.ಗೆ ಕೇಂದ್ರದ ಬಿಜೆಪಿ ಸರ್ಕಾರ ಹೆಚ್ಚಿಸಿದೆ. 2014ರ ಮೊದಲು ಯುಪಿಎ ಸರ್ಕಾರದಲ್ಲಿ ಆಗಿರುವ ಭ್ರಷ್ಟಾಚಾರವನ್ನು ಒಪ್ಪಿಕೊಳ್ಳಲು ಕಾಂಗ್ರೆಸ್ ತಯಾರಿಲ್ಲ. ಬದಲಾಗಿ ಕಪು$್ಪ ಪತ್ರದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ ಎಂದು ವರ್ಮಾ ಟೀಕಿಸಿದರು.
ಸಹಕಾರ ಭಾರತಿ ರಾಷ್ಟ್ರೀಯ ಅಧ್ಯಕ್ಷ ದೀನಾನಾಥ ಠಾಕೂರ ಮಾತನಾಡಿ, ಸಹಕಾರ ರಂಗಕ್ಕೆ ಶಕ್ತಿ ತುಂಬುವ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗಿಯಾಗಬೇಕು ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಸಾಲ ಕೊಡುವುದಷ್ಟೇ ಸಹಕಾರ ಸಂಗಳ ಕೆಲಸವಾಗಿಲ್ಲ. ಇದೀಗ ವಿವಿಧೋದ್ದೇಶದ ದರ್ಜೆಗೆ ಅವುಗಳನ್ನು ಏರಿಸಲಾಗಿದೆ. ಬ್ಯಾಂಕಿಂಗೇತರ ಸೌಲಭ್ಯಗಳು ಸಿಗಲಿವೆ ಎಂದರು.
ಸಮಾರೋಪ ಭಾಷಣ ಮಾಡಿದ ಸಹಕಾರ ಭಾರತಿ ಸಂಟನಾ ಕಾರ್ಯದಶಿರ್ ಸಂಜಯ ಪಾಚಪುರ, ಇದು ರಾಜಕೀಯ ಸಮಾವೇಶವಲ್ಲ, ಸಹಕಾರಿಗಳ ಅಧಿವೇಶನ. ಪ್ಯಾಕ್ಸ್ ಚೇರ್ಮನ್ಗಳು ಒಬ್ಬ ಮುಖ್ಯಮಂತ್ರಿ ಮಾಡದಷ್ಟು ಕೆಲಸ ಮಾಡಬಹುದು. ಆಹಾರ ಧಾನ್ಯ, ಸಾಲ, ಕೃಷಿ ಯಂತ್ರ, ಬೀಜ, ಗೊಬ್ಬರ ವಿತರಣೆ ಮಾತ್ರವಲ್ಲ, ಒಂದು ಗ್ರಾಮಕ್ಕೆ ಬೇಕಾದ ಎಲ್ಲವನ್ನೂ ಪೂರೈಸುವ ಸಂವಾಗಿ ಮಾರ್ಪಡಲಿದೆ. ಅಷ್ಟೊಂದು ಶಕ್ತಿಯುತವಾಗಲಿದೆ ಎಂದರು.
ಸಹಕಾರ ವಲಯದ ಕಾರ್ಯಚಟುವಟಿಕೆಗೆ ಇರುವ ಅಡೆತಡೆ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿ, ಸದಸ್ಯರು, ಚೇರ್ಮನ್ ಎಲ್ಲರೂ ಕರ್ತವ್ಯ ಮಾತ್ರ ನಿರ್ವಹಿಸಬೇಕು. ಅದು ಬಿಟ್ಟು ಪಕ್ಷಪಾತತನ ಮಾಡಬಾರದು ಎಂದು ಸಲಹೆ ನೀಡಿದರು.
ಸಹಕಾರ ಭಾರತಿ ರಾಷ್ಟ್ರೀಯ ಸಂರಕ್ಷಕ ರಮೇಶ ವೈದ್ಯ, ಸಹಕಾರ ಭಾರತಿ ಕರ್ನಾಟಕ ಪ್ಯಾಕ್ಸ್ ಟಕದ ಸಂಚಾಲಕ ಮಲ್ಲಿಕಾರ್ಜುನ ಹೊರಕೇರಿ, ರಾಜಶೇಖರ ಶೀಲವಂತ, ರಾಜದತ್ತ ಪಾಂಡೆ, ಮೋಹನದಾಸ ನಾಯಕ, ನಾರಾಯಣಸ್ವಾಮಿ, ಇತರರು ಪಾಲ್ಗೊಂಡಿದ್ದರು.