ಕುನ್ನೂರ ಪೋಸ್ಟ್ ಆಫೀಸರ್ ಸೌಮ್ಯಾ ಆತ್ಮಹತ್ಯೆ

Sowmya achanur
Published on

ಶಿಗ್ಗಾಂವಿ: ತಾಲೂಕಿನ ಕುನ್ನೂರ ಗ್ರಾಮದ ಪೋಸ್ಟ್ ಆಫೀಸ್​ನಲ್ಲಿ ಬ್ರಾಂಚ್ ಪೋಸ್ಟ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದ ಗಂಗೆಬಾವಿಯ ಸೌಮ್ಯಾ ಲಕ್ಷ್ಮಣ ಅಚನೂರ(23) ಭಾನುವಾರ ರಾತ್ರಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೂಲತಃ ಬಾಗಲಕೋಟೆ ಜಿಲ್ಲೆಯ ತೆಗ್ಗಿ ಗ್ರಾಮದವರಾದ ಲಕ್ಷ್ಮಣ ಅಚನೂರ ಗಂಗೆಬಾವಿಯ ಕೆಎಸ್​ಆರ್​ಪಿ 10ನೇ ಪಡೆಯಲ್ಲಿ ಹೆಡ್ ಕಾನ್​ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದು, ಕೆಎಸ್​ಆರ್​ಪಿ ಪೊಲೀಸ್ ವಸತಿ ಗೃಹದಲ್ಲಿ ವಾಸವಿದ್ದರು. ಮಗಳು ಸೌಮ್ಯಾ ಪ್ರತಿದಿನ ಗಂಗೆಬಾವಿ ಯಿಂದ ಕುನ್ನೂರ ಗ್ರಾಮದ ಪೋಸ್ಟ್ ಆಫೀಸ್ ಹೋಗುತ್ತಿದ್ದಳು. ಆದರೆ, ಇದ್ದಕ್ಕಿದ್ದಂತೆ ಭಾನುವಾರ ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಮನೆಯವರು ಗಮನಿಸಿ ಶಿಗ್ಗಾಂವಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ. ಘಟನೆ ಕುರಿತು ಶಿಗ್ಗಾಂವಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net