ಹಿರೇಕೆರೂರ ಸರ್ಕಾರಿ ಕಾಲೇಜ್​ನಲ್ಲಿ ‘ಕುಕಿಂಗ್ ವಿಥ್ ಔಟ್ ಫೈರ್’ ಸ್ಪರ್ಧೆ

Cooking with out Fire
Published on

ಹಿರೇಕೆರೂರ: ಬೇಯಿಸಿದ ಸಸ್ಯ ಆಹಾರಕ್ಕಿಂತ ಬೇಯಿಸದೆ ಇರುವ ಆಹಾರ ಆರೋಗ್ಯಕ್ಕೆ ಉತ್ತಮವಾಗಿದ್ದು, ಈ ದೃಷ್ಟಿಯಿಂದ ಬೆಂಕಿ ಇಲ್ಲದೆ ಅಡುಗೆ ಮಾಡಿ ತಿನ್ನುವುದು ಉತ್ತಮ ಎಂದು ಪ್ರಾಚಾರ್ಯ ಡಾ.ಎಸ್.ಪಿ. ಗೌಡರ್ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕುವೆಂಪು ಸಭಾಭವನದಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗವು ವಿದ್ಯಾರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಿದ್ದ ‘ಕುಕಿಂಗ್ ವಿಥ್ ಔಟ್ ಫೈರ್’ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕು. ಕಾಲೇಜಿನಲ್ಲಿ ನಡೆಯುವ ವಿದ್ಯಾರ್ಥಿ ಕೇಂದ್ರಿತ ಕಾರ್ಯಕ್ರಮಗಳು ಹಾಗೂ ಸ್ಪರ್ಧೆಗಳಲ್ಲಿ ಗಮನಾರ್ಹ ಪಾಲ್ಗೊಳ್ಳುವಿಕೆ ನಿಮ್ಮದಾಗಬೇಕು ಎಂದರು.

ಐಕ್ಯೂಎಸಿ ಸಂಚಾಲಕ ನವೀನ್ ಎಂ. ಮಾತನಾಡಿ, ಆರೋಗ್ಯವೇ ಭಾಗ್ಯ, ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ ಬೇಕು. ಈ ದಿಸೆಯಲ್ಲಿ ನಮ್ಮ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು, ಬೆಂಕಿ ಬಳಸದೆ ತಮ್ಮ ಕೌಶಲ ಬಳಸಿ ವಿವಿಧ ತಿಂಡಿ, ತಿನಿಸುಗಳನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ ಎಂದರು.

ಪ್ರಾಧ್ಯಾಪಕ ಪ್ರಸನ್ನಕುಮಾರ್ ಜೆ. ಮಾತನಾಡಿ, ಹೊಸ ಶಿಕ್ಷಣ ನೀತಿಯ ಆಶಯದಂತೆ ನಮ್ಮ ಕಾಲೇಜಿನಲ್ಲಿ ಚಟುವಟಿಕೆ ಕೇಂದ್ರಿತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ಇದು ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಕಲಿಕಾ ಆಸಕ್ತಿ ಮೂಡಿಸುವುದರಲ್ಲಿ ಯಶಸ್ವಿಯಾಗಿದೆ ಎಂದರು.

ವಿಭಾಗದ ಮುಖ್ಯಸ್ಥ ರಾಮಚಂದ್ರಪ್ಪ ಬಿ.ಎಂ. ಮಾತನಾಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ 20 ಗುಂಪು, ಸ್ಥಳಿಯವಾಗಿ ಸಿಗುವ ಕಚ್ಚಾ ಆಹಾರದಲ್ಲಿ ಉತ್ತಮವಾಗಿ ತಿಂಡಿ, ತಿನಿಸುಗಳನ್ನು ತಯಾರಿಸಿ, ಅವರ ಸಾಮರ್ಥ್ಯವನ್ನು ಪ್ರಸ್ತುತಪಡಿಸಿದರು.

ಪ್ರಾಧ್ಯಾಪಕರಾದ ಎಂ.ಬಿ. ಬದನಿಕಾಯಿ, ಡಾ.ಎಲ್.ಎಂ. ಪೂಜಾರ, ಮೀನಾಕ್ಷಿ ಬಿ., ಹೇಮಲತಾ ಕೆ., ಯತೀಶ ಎನ್.ಎ., ಸುಜಾತಾ ಕೆ., ಹರೀಶ ಡಿ., ಸುಮಲತಾ ಬಿ.ಎನ್., ರಾಜು ಗೋವಿಂದಪ್ಪನವರ ಹಾಗೂ ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.

ಪ್ರಾಧ್ಯಾಪಕಿ ಶೃತಿ ಕೆ., ಕಾರ್ಯಕ್ರಮ ಅಧಿಕಾರಿ ಸುನೀತಾ ಡಿ. ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net