ಅಡುಗೆ ಅನಿಲ ಸೋರಿಕೆ, ಮೂವರಿಗೆ ಗಂಭೀರ ಗಾಯ

crime
Published on

ಹುಬ್ಬಳ್ಳಿ: ಅಡುಗೆ ಅನಿಲ ಸೋರಿಕೆಯಾಗಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಇಲ್ಲಿಯ ಗೋಕುಲ ರಸ್ತೆಯ ಅರ್ಜುನ ವಿಹಾರದಲ್ಲಿ ಸೋಮವಾರ ನಡೆದಿದೆ.

ಅಶೋಕ (25), ಸುಭಾಷ (25), ಮಂಗಿಲಾಲ (35) ಗಾಯಗೊಂಡಿದ್ದು, ಕೆಎಂಸಿಆರ್‌ಐನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಇವರೆಲ್ಲರೂ ರಾಜಸ್ತಾನ ಮೂಲದವರಾಗಿದ್ದು, ಅಡುಗೆ ಮಾಡುವ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗುತ್ತಿದೆ. ಇವರೆಲ್ಲರೂ ಶೇ. 60ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದು, ಗೋಕುಲ ರೋಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಭೇಟಿ ನೀಡಿ, ಘಟನೆ ಕುರಿತು ವಿವರ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net