ಅಡುಗೆ ಅನಿಲ ಸಿಲಿಂಡರ್ ಲಾರಿ ಪಲ್ಟಿ

kls jjj
ಕಳಸದ ಯಡ್ರುಗೋಡು ಬಳಿ ಲಾರಿ ಪಲ್ಟಿಯಾಗಿ ಸಿಲಿಂಡರ್ ಚೆಲ್ಲಾಪಿಲ್ಲಿಯಾಗಿರುವುದು.
Published on

ಕಳಸ: ಯಡ್ರುಗೋಡು ಬಳಿ ಶನಿವಾರ ಬೆಳಗ್ಗೆ ಕಳಸ-ಬಾಳೆಹೊನ್ನೂರು ಮುಖ್ಯ ರಸ್ತೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಸಾಗಣೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಶಿವಮೊಗ್ಗದಿಂದ ಕಳಸಕ್ಕೆ ಬರುತ್ತಿದ್ದ ತಿರುವಿನಲ್ಲಿ ಅಡ್ಡ ಬಂದ ಜಾನುವಾರನ್ನು ತಪ್ಪಿಸಲು ಹೋಗಿ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಯಿತು. ಪರಿಣಾಮ ಸಿಲಿಂಡರ್‌ಗಳು ರಸ್ತೆಗೆ ಬಿದ್ದವು. ಸುದ್ದಿ ತಿಳಿದ ಕೂಡಲೇ ಸಿಲಿಂಡರ್‌ಗಳನ್ನು ಸ್ಥಳಾಂತರ ಮಾಡಲಾಯಿತು. ಅದೃಷ್ಟವಶಾತ್ ಯಾವುದೇ ಸಿಲಿಂಡರ್ ಸೋರಿಕೆಯಾಗದಿದ್ದರಿಂದ ಭಾರಿ ಅನಾಹುತ ತಪ್ಪಿತು. ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಳಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net