ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್, ಕರ್ನಾಟಕದ ಗೆಲುವಿಗೆ 10 ರನ್ ಬಾಕಿ!

Screenshot_2024-01-08-09-13-20-45.jpg
Published on

ಬೆಳಗಾವಿ: ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಕರ್ನಾಟಕ ತಂಡವು, ಇಲ್ಲಿನ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ 19 ವಯೋಮಿತಿಯ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಮಿಫೈನಲ್ ಪಂದ್ಯ ಗೆಲ್ಲುವ ಸನಿಹದಲ್ಲಿದೆ. 3ನೇ ದಿನದಾಟದಲ್ಲಿ ಹಾರ್ದಿಕ ರಾಜ 100 (189) ಶತಕ, ಯುವರಾಜ ಅರೋರಾ ಅವರು 51 (138) ಅರ್ಧ ಶತಕದ ನೆರವಿನಿಂದ ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ ಒಟ್ಟಾರೆ 418 ರನ್‌ಗಳ ಬೃಹತ್ ಮೊತ್ತ ಕಲೆಹಾಕಿ, 292 ರನ್‌ಗಳ ಲೀಡ್ ಪಡೆಯಿತು. ದ್ವಿತೀಯ ಇನಿಂಗ್ಸ್ ಆರಂಭಿಸಿದ ತಮಿಳುನಾಡು ತಂಡ 302 ರನ್ ಗಳಿಸಿ ಆಲ್‌ಔಟ್ ಆಗಿದೆ. ಕರ್ನಾಟಕಕ್ಕೆ ದ್ವಿತೀಯ ಇನಿಂಗ್ಸ್‌ನಲ್ಲಿ ಗೆಲುವಿಗೆ 10 ರನ್‌ಗಳ ಅವಶ್ಯಕತೆ ಇದ್ದು, ಗೆಲುವಿನ ದಡದಲ್ಲಿದೆ. ಎರಡನೇ ಇನಿಂಗ್ಸ್‌ನಲ್ಲಿ ತಮಿಳುನಾಡು ಪರ ಕೆಟಿಎ ಮಾಧವ ಪ್ರಸಾದ ಅವರು (118) ಶತಕ ಸಿಡಿಸಿ ಮಿಂಚಿದರು.

 ಕರ್ನಾಟಕ ತಂಡದ ಧೀರಜ್ ಗೌಡ, ಅಗಸ್ತ್ಯ ರಾಜು ತಲಾ 4 ವಿಕೆಟ್ ಉರುಳಿಸಿದರೆ, ಹಾರ್ದಿಕರಾಜ ಹಾಗೂ ಸಮರ್ಥ ಎನ್. ಅವರು ತಲಾ ಒಂದು ವಿಕೆಟ್ ಪಡೆದು ತಮಿಳುನಾಡು ತಂಡವನ್ನು ಕಟ್ಟಿ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net