ಆಯುರ್ವೇದ ಜೀವನ ವಿಜ್ಞಾನ

convocation gavisiddeswara ayurvedic college koppal
Published on

ಕೊಪ್ಪಳ: ಆಯುರ್ವೇದ ಜೀವನ ವಿಜ್ಞಾನ. ಜೀವನ ಶೈಲಿ, ಆಹಾರ ಪದ್ಧತಿ ಕಲಿಸಿಕೊಡುತ್ತದೆ ಎಂದು ಆಯುಷ್​ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್​.ಶ್ರೀಧರ ಹೇಳಿದರು.

ನಗರದ ಶಿವಶಾಂತವೀರ ಮಂಗಲಭವನದಲ್ಲಿ ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ರೋಗ ನಿವಾರಣೆ ಜತೆಗೆ ಸ್ವಾಸ್ಥ$್ಯ ಕಾಪಾಡಿಕೊಳ್ಳಲು ಆಯುರ್ವೇದ ಬಳಕೆ ಅವಶ್ಯ. ಆಯುರ್ವೇದ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ವೃತ್ತಿ ಬದುಕಿನಲ್ಲೂ ಪಂಚಕರ್ಮ ಚಿಕಿತ್ಸೆ ಹಾಗೂ ಆಯುರ್ವೇದ ಪದ್ಧತಿ ಔಷಧೋಪಚಾರದಲ್ಲಿ ತೊಡಗುವುದು ಒಳಿತು. ಯೋಗ, ಮಾನಸಿಕ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು.

ಕಾಲೇಜು ಅಧ್ಯಕ್ಷ ಸಂಜಯ ಕೊತಬಾಳ ಮಾತನಾಡಿ, ವೈದ್ಯರು ಸಮಗ್ರತೆ, ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಕಳಕಳಿ ಹೊಂದಿರಬೇಕು. ವೈದ್ಯ ವೃತ್ತಿ ಮೌಲ್ಯ ಪಾಲಿಸಿ. ನಿರಂತರ ಅಭ್ಯಾಸದಲ್ಲಿ ತೊಡಗಿ. ನಿಮ್ಮ ಬಳಿ ಬಂದವರಿಗೆ ಅಗತ್ಯ ಚಿಕಿತ್ಸೆ ನೀಡಿ ಸ್ಪಂದಿಸಿ ಎಂದರು.

ಪ್ರಾಚಾರ್ಯ ಡಾ.ಮಹಾಂತೇಶ ಮಸಾಲಿ ಮಾತನಾಡಿ, ಆಯುರ್ವೇದ ಸಮಗ್ರ ಜ್ಞಾನ ಬಳಸಿದಲ್ಲಿ ಉತ್ತಮ ವೈದ್ಯರಾಗಿ ಹೊರಹೊಮ್ಮಬಹುದು ಎಂದರು. ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ 130 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪರೀೆಯಲ್ಲಿ ಉತ್ತಮ ಅಂಕ ಪಡೆದು ಸಾಧನೆ ಮಾಡಿದ ಡಾ.ಶ್ರೀರಾ, ಡಾ.ತ್ರಿವೇಣಿ, ಡಾ.ಮಮತಾ ಜೋಶಿ, ಡಾ.ಗಗನಾ ಅವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಚಟುವಟಿಕೆಯಲ್ಲಿ ಸಾಧನೆ ಮಾಡಿದ ಡಾ.ಸಿದ್ದಾರ್ಥ ಮಾಲಿ ಪಾಟೀಲ್​, ಡಾ.ನೇತ್ರಾ ಪೂಜಾರ, ಡಾ.ಚೈತ್ರಾ ಶಾಸ್ತ್ರಿಮಠ, ಡಾ.ಕಾವೇರಿ ಮೇಟಿ ಅವರಿಗೆ ಪ್ರಶಸ್ತಿ ನೀಡಲಾಯಿತು. ಉಪ ಪ್ರಾಚಾರ್ಯ ಡಾ.ಸುರೇಶ ಹಕ್ಕಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net