ಜ್ಞಾನದಿಂದ ಸಮಾಜದಲ್ಲಿ ಗೌರವ: ಡಾ. ರಘುವಂಶಿ

udp-19-mahe
Published on

ಉಡುಪಿ: ಪದವಿಯಲ್ಲಿ ಸಂಪಾದಿಸಿದ ಜ್ಞಾನವನ್ನು ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿ ಹಂತದಲ್ಲಿಯೂ ಹೊಸದನ್ನು ಕಲಿಯಲು ಅವಕಾಶವಿದೆ. ಅಂತಿಮವಾಗಿ "ಜ್ಞಾನ" ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಸಮಾಜದಲ್ಲಿ ಗೌರವವನ್ನು ತರುತ್ತದೆ ಎಂದು ಡ್ರಗ್ಸ್​ ಕಂಟ್ರೋಲರ್​ ಜನರಲ್​ ಆಫ್​ ಇಂಡಿಯಾ ಡಾ. ರಾಜೀವ್​ ಸಿಂಗ್​ ರಘುವಂಶಿ ಹೇಳಿದರು.

ಮಣಿಪಾಲ್​ ಅಕಾಡೆಮಿ ಆಫ್​ ಹೈಯರ್​ ಎಜುಕೇಶನ್​ನ 31 ನೇ ಘಟಿಕೋತ್ಸವದ ದಿನದ ಎರಡನೇ ದಿನ ಭಾನುವಾರ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಜ್ಞಾನ ಎಂದಿಗೂ ವ್ಯರ್ಥವಾಗುವುದಿಲ್ಲ, ಸಮಾಜದಲ್ಲಿ ಸ್ವೀಕಾರಾರ್ಹತೆ ಹೆಚ್ಚಿಸುತ್ತದೆ. ಜಗತ್ತು ಬದಲಾವಣೆ ಹಾದಿಯಲ್ಲಿದ್ದು, ಖಾಸಗಿ ಅಥವಾ ಸರ್ಕಾರಿ ಉದ್ಯೋಗಕ್ಕಿಂತ ವಿಜ್ಞಾನದ ವಿದ್ಯಾರ್ಥಿಗಳು ಉದ್ಯಮಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ಮುಂದುವರಿದ ದೇಶಗಳಿಗೆ ಹೋಲಿಸಿದರೆ ಭಾರತ ಕೋವಿಡ್​ ಸಂಕಷ್ಟವನ್ನು ಚೆನ್ನಾಗಿ ನಿರ್ವಹಿಸಿದೆ. ವಿಜ್ಞಾನದ ಹಿನ್ನೆಲೆ ಹೊಂದಿರುವ ಭಾರತೀಯ ಸಮೂಹ ಇದಕ್ಕೆ ಮುಖ್ಯ ಕಾರಣ. ವಿಜ್ಞಾನದ ತಳಹದಿಯ ಮೇಲೆ ಭಾರತೀಯ ಸಮಾಜ ನಿಂತಿದ್ದು, ಒಗ್ಗಟ್ಟಿನಿಂದ ಈ ಸವಾಲನ್ನು ನಾವು ಎದುರಿಸಿದ್ದೇವೆ. ಈ ಟನೆ ಭವಿಷ್ಯದ ಸವಾಲುಗಳನ್ನು ಒಟ್ಟಿಗೆ ಎದುರಿಸುವ ಬಗ್ಗೆ ಅಗತ್ಯ ಪಾಠ ಕಲಿಸಿದೆ ಎಂದರು.

ಪ್ರೊ-.ಚಾನ್ಸಲರ್​ ಡಾ.ಎಚ್​.ಎಸ್​. ಬಲ್ಲಾಳ್​, ಮಾಹೆ ಟ್ರಸ್ಟ್​ ಅಧ್ಯಕ್ಷ ಡಾ.ರಂಜನ್​ ಆರ್​. ಪೈ, ಟ್ರಸ್ಟಿ ವಸಂತಿ ಆರ್​ ಪೈ, ಮಾಹೆ ಉಪಕುಲಪತಿ ಲೆಫ್ಟಿನೆಂಟ್​ ಜನರಲ್​ (ಡಾ) ಎಂ ಡಿ ವೆಂಕಟೇಶ್​, ಪ್ರೊ-ವೈಸ್​ -ಚಾನ್ಸಲರ್​ ಗಳಾದ ಡಾ ದಿಲೀಪ್​ ಜಿ. ನಾಯಕ್​, ಡಾ.ಪ್ರಜ್ಞಾ ರಾವ್​, ಡಾ.ನಾರಾಯಣ ಸಭಾಹಿತ್​, ಡಾ.ಶರತ್​ ಕೆ.ರಾವ್​, ಡಾ.ಮಧು ವೀರರಾಘವನ್​, ರಿಜಿಸ್ಟ್ರಾರ್​ ಡಾ.ಗಿರಿಧರ್​ ಕಿಣಿ, ಮೌಲ್ಯಮಾಪನ ಕುಲಸಚಿವ ಡಾ.ವಿನೋದ್​ ವಿ. ಥಾಮಸ್​ ಉಪಸ್ಥಿತರಿದ್ದರು. ಸಂಹಿತಾ ಡಿ (ಮಣಿಪಾಲದ ಕಸ್ತೂರ್ಬಾ ವೈದ್ಯಕಿಯ ಕಾಲೇಜು) ಮತ್ತು ಅದಿತಿ ಮಜುಂದಾರ್​(ಮಣಿಪಾಲ್​ ಕಾಲೇಜ್​ ಆಫ್​ ಹೆಲ್ತ್​ ಪ್ರೊಫೆಶನ್ಸ್​) ಚಿನ್ನದ ಪದಕ ಗಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net