

ಬೆಳಗಾವಿ: ಬೆಂಗಳೂರು& ಮುಂಬಯಿ ನಡುವೆ ಸೂಪರ್ ಫಾಸ್ಟ್ ರೈಲು ಬೆಳಗಾವಿ ಮಾರ್ಗವಾಗಿ ಸಂಚರಿಸುವಂತೆ ಕ್ರಮ ವಹಿಸಿ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ, ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು& ಮುಂಬಯಿ ನಡುವೆ ಶ್ರೀದಲ್ಲಿ ನೂತನ ಸೂಪರ್ ಫಾಸ್ಟ್ ರೈಲು ತನ್ನ ಸಂಚಾರ ಪ್ರಾರಂಭ ಮಾಡಲಿರುವ ಕುರಿತು ಪ್ರಸ್ತಾವನೆ ರೈಲು ಸಚಿವಾಲಯದಲ್ಲಿ ನಿರ್ಣಾಯಕ ಹಂತದಲ್ಲಿದ್ದು, ಬೆಳಗಾವಿ ನಗರದ ಮಾರ್ಗವಾಗಿ ಸಂಚರಿಸುವಂತೆ ನೋಡಿಕೊಳ್ಳುವಂತೆ ಪತ್ರದ ಮೂಲಕ ವಿನಂತಿಸಲಾಗಿದೆ ಎಂದರು. ಬೆಂಗಳೂರು ಮತ್ತು ಮುಂಬಯಿ ನಡುವೆ ಸುಮಾರು 1200 ಕಿ.ಮಿ ಅಂತರವಿದ್ದು, ಅಂದಾಜು 650 ಕಿ.ಮಿ ಮಾರ್ಗ ಕರ್ನಾಟಕ ಬೆಳಗಾವಿ ಮಾರ್ಗವಾಗಿ ಶೇ.48ರಷ್ಟು ವ್ಯಾಪ್ತಿಗೆ ಬರುವುದು. ಈ ನಿಟ್ಟಿನಲ್ಲಿ ಬೆಂಗಳೂರು ಮುಂಬಯಿ ನಡುವಿನ ಸೂಪರ್ ಫಾಸ್ಟ್ ರೈಲು ತುಮಕೂರು & ಹುಬ್ಬಳ್ಳಿ & ಧಾರವಾಡ & ಬೆಳಗಾವಿ & ಮಿರಜ್ ಮಾರ್ಗವಾಗಿ ಸಂಚಾರ ನಡೆಸುವಂತೆ ನೋಡಿಕೊಂಡಲ್ಲಿ, ಬಹು ಜಿಲ್ಲೆಗಳ ಪಾಲಿನ ಜನರಿಗೆ ಅನುಕೂಲಕರವಾಗಲಿದೆ ಎಂದು ತಿಳಿಸಿದರು. ಆರ್ಎಸ್ಎಸ್ ದೇಶಾಭಿಮಾನ ಬೆಳೆಸುವ ಸಂಸ್ಥೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ (ಆರ್ಎಸ್ಎಸ್) ಬ್ಯಾನ್ ಮಾಡುತ್ತೇವೆ ಎಂದು ಪದೇ ಪದೇ ಹೇಳುತ್ತಿರುವ ಸಚಿವ ಪ್ರೀಯಾಂಕಾ ರ್ಖಗೆ ಅವರದು ಚಿಕ್ಕಮಕ್ಕಳ ಬುದ್ದಿ. ತಂದೆ ಮಲ್ಲಿಕಾರ್ಜುನ ರ್ಖಗೆ ಹೆಸರಿನಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದಾರೆ. ಅಹಂಕಾರದಿಂದಲೇ ಲೋಕಸಭೆಯಲ್ಲಿ ಮಲ್ಲಿಕಾರ್ಜುನ ರ್ಖಗೆ ಸೋತಿಸಿದ್ದಾರೆ. ಕಾಂಗ್ರೆಸ್ನವರು ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಆರ್ಎಸ್ಎಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇಂದಿರಾಗಾಂಧಿ ಪ್ರಧಾನಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರ್ಎಸ್ಎಸ್ ಬ್ಯಾನ್ ಮಾಡಿದ್ದರು. ಮೂರು ಬಾರಿ ನಿಷೇಧ ಆದರೂ ಸಂಸ್ಥೆ ಪ್ರಾರಂಭದಲ್ಲಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು. ರೈಲ್ವೆ ಮೇಲ್ಸೇತುವೆ ಪರಿಶೀಲನೆ ನಗರದ ಟಿಳಕವಾಡಿ ರೇಲ್ವೆ ಮೇಲ್ಸೇತುವೆಯಲ್ಲಿ ಹಾಳಾದ ರಸ್ತೆಯಿಂದ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಖುದ್ದು ಪರಿಶೀಲನೆ ನಡೆಸಿದರು. ಬಳಿಕ ಒಂದು ವಾರದ ಅವಧಿಯಲ್ಲಿ ದುರಸ್ತಿಗೊಳಿಸಿ ಸಮಸ್ಯೆ ಪರಿಹರಿಸಬೇಕು. ನಿಗದಿತ ಸಮಯದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಸಿಕೊಡಬೇಕು ಎಂದು ಸೂಚಿಸಿದರು. ಉಪಮೇಯರ ವಾಣಿ ಜೋಶಿ, ಲೋಕೋಪಯೋಗಿ ಅಭಿಯಂತರ ಎಸ್.ಕೋಳೆಕರ್, ರೈಲ್ವೆ ನೈರುತ್ಯ ವಲಯದ ಸಹಾಯಕ ಅಭಿಯಂತರ ಮಯನಾಕ ಇತರರಿದ್ದರು.