ಯುವಪೀಳಿಗೆಗೆ ಚನ್ನಮ್ಮನ ಆದರ್ಶ ಮನವರಿಕೆ ಮಾಡಿಕೊಡಿ

ILK RURALA 23-1
ಇಳಕಲ್ಲದ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮನ ಭಾವಚಿತ್ರಕ್ಕೆ ಸಮಾಜಬಾಂಧವರು ಪುಷ್ಪನಮನ ಸಲ್ಲಿಸಿದರು. ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಐಹೋಳೆ, ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಇತರರಿದ್ದರು.
Published on

ಇಳಕಲ್ಲ(ಗ್ರಾ): ವೀರರಾಣಿ ಕಿತ್ತೂರು ಚನ್ನಮಳ ಆದರ್ಶಗಳನ್ನು ಯುವ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕೆಂದು ಇಳಕಲ್ಲ ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಮಹಾಂತಗೌಡ ಪಾಟೀಲ ಹೇಳಿದರು.

ಇಲ್ಲಿನ ಬಸ್ ನಿಲ್ದಾಣ ಮುಂದೆ ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಬುಧವಾರ ಪಂಚಮಸಾಲಿ ಸಮಾಜದವರು ಕಿತ್ತೂರು ರಾಣಿ ಚನ್ನಮ್ಮಳ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯುವಕರಲ್ಲಿ ಇಂದು ದೇಶಾಭಿಮಾನ ಕಡಿಮೆ ಆಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ್, ಉಪಾಧ್ಯಕ್ಷೆ ಕಾಳಮ್ಮ ಜಕ್ಕಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಐಹೋಳೆ ಚನ್ನಮ್ಮಳ ಭಾವಚಿತ್ರಕ್ಕೆ ಪಷ್ಪನಮನ ಸಲ್ಲಿಸಿದರು.

ಮುರುಗೇಶ ಸಂಗಮ್, ಮುತ್ತು ಬೀಳಗಿ, ಪರಶುರಾಮ ಮೂಲಿಮನಿ, ಮುತ್ತು ನಾಲವಾಡದ ಅಮೃತ ಬಿಜ್ಜಳ, ಮಹಾಂತೇಶ ವಕ್ಕಲಕುಂಟಿ, ಮಹಾಲಿಂಗಪ್ಪ ಕೂಡ್ಲೂರು, ಮಹಾಂತೇಶ ಭಮ್ಮಸಾಗರ, ಬಸು ಪಾಟೀಲ, ಗಿರಿರಾಜಗೌಡ ಪಾಟೀಲ, ಭೀಮಣ್ಣ ಗಾಣಿಗೇರ ಇತರರಿದ್ದರು.

ನಗರಸಭೆ ಕಾರ್ಯಾಲಯ : ಇಲ್ಲಿ ನಡೆದ ಜಯಂತಿ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಧಾರಾಣಿ ಸಂಗಮ ಚನ್ನಮಳ ಭಾವಚಿತ್ರಕ್ಕೆ ಪಷ್ಪ ಅರ್ಪಿಸಿದರು. ಸದಸ್ಯರು ಮತ್ತು ಸಿಬ್ಬಂದಿ ಇದ್ದರು.

ತಹಸೀಲ್ದಾರ್ ಕಚೇರಿ: ಇಲ್ಲಿ ತಹಸೀಲ್ದಾರ್ ಸತೀಶ ಕೂಡಲಗಿ ಪುಷ್ಪನಮನ ಸಲ್ಲಿಸಿದರು. ನಗರಸಭೆ ಸದಸ್ಯೆ ಶರಣಮ್ಮ ತಿಮ್ಮಾಪೂರ, ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಹಾಂತಗೌಡ ಪಾಟೀಲ ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಇದ್ದರು.

ಕಾಂಗ್ರೆಸ್ ಕಚೇರಿ: ಕಚೇರಿಯಲ್ಲಿ ಚನ್ನಮ್ಮ ಜಯಂತಿ ಆಚರಿಸಲಾಯಿತು. ವಿಜಯಮಹಾಂತೇಶ ಗದ್ದನಕೇರಿ ಮಾತನಾಡಿದರು. ಇಳಕಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲರಜಾಕ ತಟಗಾರ, ಹನುಮಂತ ತುಂಬದ, ಕಾಂಗ್ರೆಸ್ ಮುಖಂಡರಾದ ಮಹಾಂತೇಶ ತಿಮ್ಮಾಪೂರ, ರಾಘವೇಂದ್ರ ಚಿಂಚಮಿ ಇತರರಿದ್ದರು.

ಬಿಜೆಪಿ ಕಚೇರಿ: ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರು ಚನ್ನಮ್ಮಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಅರವಿಂದ ಮಂಗಳೂರ, ಮುಖಂಡರಾದ ಡಾ. ಮಹಾಂತೇಶ ಕಡಪಟ್ಟಿ, ಮಲ್ಲಣ್ಣ ಬೊಮ್ಮಸಾಗರ, ಮಲ್ಲಣ್ಣ ಪಲ್ಲೆದ, ರಾಜಕುಮಾರ್ ಬಾದವಾಡಗಿ, ಚಂದ್ರಶೇಖರ ಏಕಬೋಟೆ, ಮಂಜುನಾಥ ಹೊಸಮನಿ, ಬಸವರಾಜ ಹುನಕುಂಟಿ, ಬಸವರಾಜ ಹೊಸೂರ, ಉಮೇಶ್ ಕೊಂಗಾರಿ, ವಿರೇಶ ಹಿರೇಮನಿ, ಮಹಾಂತೇಶ ಹೊಸಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net