ಕಾಂಗ್ರೆಸ್‌ನ ಭ್ರಷ್ಟಾಚಾರ ಜನರಿಗೆ ಮನವರಿಕೆ

10 GJD 2
Published on

ಗಜೇಂದ್ರಗಡ: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಆಡಳಿತ, ಮಹತ್ವಾಕಾಂಕ್ಷಿ ಯೋಜನೆಗಳನ್ನು ಮನಗಂಡು ಜನರು ತಾವಾಗಿಯೇ ಬಿಜೆಪಿ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರೋಣ ಮಂಡಲದ ವತಿಯಿಂದ ಸೋಮವಾರ ಜರುಗಿದ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೋದಿ ಅವರ ಜನಪ್ರಿಯತೆ ಹಾಗೂ ರಾಜ್ಯ ಸರ್ಕಾರದ ಭ್ರಷ್ಟಾಚಾರಗಳು ಜನರಿಗೆ ಗೊತ್ತಾಗಿವೆ. ಯಾವ ಸರ್ಕಾರ ನಮಗೆ ಯೋಗ್ಯ ಎಂದು ಜನರಿಗೆ ಗೊತ್ತಾಗಿ ಸದಸ್ಯತ್ವ ಅಭಿಯಾನದಲ್ಲಿ ಪಾಲೊಳ್ಳುತ್ತಿದ್ದಾರೆ. ಇನ್ನಷ್ಟು ಸದಸ್ಯರನ್ನು ಹೊಂದಲು ಪ್ರತಿ ಬೂತ್‌ಗೆ 400 ಸದಸ್ಯರನ್ನು ಹೊಸದಾಗಿ ಸೇರಿಸುವುದರ ಮೂಲಕ ಹೊಸ ಇತಿಹಾಸ ಬರೆಯಬೇಕು. ರಾಜ್ಯದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ನಮ್ಮ ಕ್ಷೇತ್ರ ಹೊಂದಲು ಕಾರ್ಯಕರ್ತರು ಶ್ರಮ ಪಡಬೇಕು ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಪ್ಪ ಚವ್ಹಾಣ ಮಾತನಾಡಿ, ಜಗತ್ತಿನ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷ ಬಿಜೆಪಿ. ಇನ್ನಷ್ಟು ಸದಸ್ಯತ್ವ ಹೆಚ್ಚಿಸಲು ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿ ನಗರ ಘಟಕದ ಅಧ್ಯಕ್ಷ ರಾಜೇಂದ್ರ ಘೋರ್ಪಡೆ, ಪುರಸಭೆ ಸದಸ್ಯರಾದ ಯಮನಪ್ಪ ತಿರಕೋಜಿ, ಯು.ಆರ್. ಚನ್ನಮ್ಮನವರ, ಕನಕಪ್ಪ ಅರಳಿಗಿಡದ, ಶಿವಾನಂದ ಮಠದ, ಉಮೇಶ ಮಲ್ಲಾಪುರ, ನೀಲಪ್ಪ ಮಾಟರಂಗಿ, ಉಮೇಶ ಪಾಟೀಲ, ಮಲ್ಲು ಗೌಡರ, ಅಂಬರೀಶ ಅರಳಿ, ಸೂಗಿರಪ್ಪ ಕಾಜಗಾರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net