ಮನೆಯ ಯಜಮಾನಿಯನ್ನು ಕೊಂದ ಅಪ್ಪ, ಮಗನಿಗೆ ಜೈಲು ಖಾತರಿಯಾಗಿದೆ

conviction
Published on

ಕಾರವಾರ: ಕುಡಿದ ನಶೆಯಲ್ಲಿ ಮನೆಯ ಯಜಮಾನಿಯನ್ನು ಕೊಂದ ಅಪ್ಪ ಮಗನಿಗೆ ಜೈಲು ಖಾತರಿಯಾಗಿದೆ. ಕುಡಿದ ನಶೆಯಲ್ಲಿ ತಾಯಿಯನ್ನು ಕೊಂದ ಮಗನಿಗೆ 5 ವರ್ಷ ಸಾಧಾರಣ ಕಾರಾಗೃಹ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಽಸಿ ಪ್ರಧಾನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ತೀರ್ಪು ನೀಡಿದೆ.

ಕುಮಟಾ ಕೂಜಳ್ಳಿಯ ಮಧುಕರ ವಿಶ್ವೇಶ್ವರ ಭಟ್ಟ ಶಿಕ್ಷೆಗೊಳಗಾದ ಮಗ. ಆಕೆಯನ್ನು ಎಂದರೆ ತನ್ನ ಪತ್ನಿಯನ್ನು ಕೊಲೆಮಾಡಲು ಮಗನಿಗೆ ಸಹಕರಿಸಿದ ತಂದೆ ವಿಶ್ವೇಶ್ವರ ನಾರಾಯಣ ಭಟ್ಟ ಎಂಬಾತನಿಗೆ 2 ವರ್ಷ ಸಾಧಾರಣ ಶಿಕ್ಷೆ ಹಾಗೂ 5 ಸಾವಿರ ರೂ. ದಂಡ ವಿಽಸಲಾಗಿದೆ.

ತಂದೆ, ಮಗ ಇಬ್ಬರೂ ಕುಡಿದು ಮನೆಗೆ ಬಂದಿದ್ದರು. ಅದನ್ನು ಪ್ರಶ್ನಿಸಿ ಆಕ್ಷೇಪಿಸಿದ ಗೀತಾ ವಿಶ್ವೇಶ್ವರ ಭಟ್ಟ ಆಕೆಗೆ ಪತಿ ವಿಶ್ವೇಶ್ವರ ಭಟ್ಟ ರೀಪಿನಿಂದ ಹೊಡೆದಿದ್ದ. ಮಗ ಮಧುಕರ ಭಟ್ಟ ಸಹ ಆಕೆಯ ತಲೆಗೆ ಮರದ ಸ್ಟೂಲಿನಿಂದ ಹೊಡೆದು ಕೊಲೆ ಮಾಡಿದ್ದ. ಆಕೆಯ ಶವವನ್ನು ಮನೆಯ ಮುಂದಿನ ಅಂಗಳದಿAದ ಎಳೆದುಕೊಂಡು ಹೋಗಿ ವರಾಂಡದ ಮೇಲೆ ಮಲಗಿಸಿ, ಸಾಕ್ಷ÷್ಯ ನಾಶ ಮಾಡಲು ಯತ್ನಿಸಿದ್ದ ಎನ್ನಲಾಗಿದೆ.

2022 ರ ಡಿಸೆಂಬರ್ 6 ರಂದು ಘಟನೆ ನಡೆದಿತ್ತು. ಕುಮಟಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು, ದೋಶಾರೋಪಣಾ ಪಟ್ಟಿ ಸಲ್ಲಿಸಿದ್ದರು. ಜಿಲ್ಲಾ ನ್ಯಾಯಾಽÃಶ ಡಿ.ಎಸ್.ವಿಜಯ ಕುಮಾರ್ ತನಿಖೆ ಕೈಗೊಂಡು ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net