ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸಿ

New Joshi new
Published on

ಹುಬ್ಬಳ್ಳಿ : ಎಸ್​ಎಸ್​ಎಸ್ ಹುಬ್ಬಳ್ಳಿ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿವರ್ತಿಸುವ ಕುರಿತು ಹಾಗೂ ಗದಗ ರಸ್ತೆಯಲ್ಲಿ ಮತ್ತೊಂದು ರೈಲ್ವೆ ಬ್ರಿಡ್ಜ್ ನಿರ್ಮಾಣ ಮಾಡುವ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ಅವರೊಂದಿಗೆ ದೆಹಲಿಯಲ್ಲಿ ಬುಧವಾರ ಮಾತುಕತೆ ನಡೆಸಿದರು.

ಬೆಂಗಳೂರು ರೈಲು ನಿಲ್ದಾಣ ಹೊರತು ಪಡಿಸಿದರೆ ಹುಬ್ಬಳ್ಳಿ ರೈಲು ನಿಲ್ದಾಣ ಅತ್ಯಂತ ಜನನಿಬಿಡ ನಿಲ್ದಾಣವಾಗಿದೆ. ನಿತ್ಯ 50 ಸಾವಿರಕ್ಕೂ ಹೆಚ್ಚು ಜನರು ಈ ನಿಲ್ದಾಣದಿಂದ ಸಂಚರಿಸುತ್ತಾರೆ. ನೈಋತ್ಯ ರೈಲ್ವೆ ವಲಯದ ಮುಖ್ಯ ಕಚೇರಿ ಹೊಂದಿರುವ ಹುಬ್ಬಳ್ಳಿ ನಿಲ್ದಾಣವು ಭಾರತೀಯ ರೈಲ್ವೆಯಲ್ಲಿ ತನ್ನದೇ ಆದ ಮಹತ್ವ ಹೊಂದಿರುವುದರಿಂದ ಈ ನಿಲ್ದಾಣವನ್ನು ಅಂತಾರಾಷ್ಟ್ರೀಯ ದರ್ಜೆಗೆ ಪರಿವರ್ತಿಸುವುದು ಅವಶ್ಯ ಎಂದು ಪ್ರಲ್ಹಾದ ಜೋಶಿ ಹೇಳಿದ್ದಾರೆ.

ಹುಬ್ಬಳ್ಳಿಗೆ ನಿತ್ಯ ಸಾವಿರಾರು ಜನ ಓಡಾಡುತ್ತಾರೆ. ಉದೊ್ಯೕಗ, ಶಿಕ್ಷಣದ ಕಾರಣಕ್ಕಾಗಿ ಸಂಚರಿಸುವವರಿಗೆ ದಿನನಿತ್ಯದ ರೈಲು ಭರ್ತಿಯಾಗಿರುತ್ತದೆ. ಸುತ್ತಲಿನ ಪಟ್ಟಣ, ಗ್ರಾಮಗಳಿಂದ ಹುಬ್ಬಳ್ಳಿಗೆ ಪ್ರಯಾಣಿಸುವವರಿಗೆ ಹತ್ತು ಹೊಸ ಮೆಮು ರೈಲು ಆರಂಭಿಸುವಂತೆ ವಿನಂತಿಸಿದರು. ಕೋವಿಡ್ ಸಮಯದಲ್ಲಿ ಸ್ಥಗಿತೊಂಡಿದ್ದ ಹಲವಾರು ಪ್ಯಾಸೆಂಜರ್ ರೈಲುಗಳನ್ನು ಪುನಾರಂಭಿಸುವಂತೆಯೂ ಕೋರಿದರು.

ಆಧಾರ್ ಸೇವಾ ಕೇಂದ್ರ : ಹುಬ್ಬಳ್ಳಿಯನ್ನು ‘ಆಧಾರ್ ಸೇವಾ ಕೇಂದ್ರವನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಸೇವಾ ಪೂರೖಕೆದಾರರ ತೊಡಗಿಸಿಕೊಳ್ಳಲು‘ ಸಂಬಂಧಿಸಿದ ವಿನಂತಿ ಪ್ರಸ್ತಾಪ ದಲ್ಲಿ ಮುಂದುವರಿಸುವಂತೆ ಕೋರಿದ್ದಾರೆ.

ಉತ್ತರ ಕರ್ನಾಟಕದ ವಾಣಿಜ್ಯ ರಾಜಧಾನಿಯಾಗಿರುವ ಹುಬ್ಬಳ್ಳಿಯು ಸುಮಾರು 10 ಲಕ್ಷ ಜನಸಂಖ್ಯೆಯನ್ನು ಹೊಂದಿರುವುದರಿಂದ ಇಲ್ಲಿ ಈ ಕೇಂದ್ರ ಅತ್ಯಂತ ಅವಶ್ಯಕವಾಗಿದ್ದು, ದೇಶದಾದ್ಯಂತ ಪ್ರತಿ ಜಿಲ್ಲಾವಾರು ಕೇಂದ್ರದ ಜತೆಗೆ ಮಹತ್ತರವಾದ ನಗರಗಳಲ್ಲಿ ಈ ಕೇಂದ್ರಗಳನ್ನು ಮುಂದುವರಿಸುವಂತೆ ಕೋರಿದ್ದಾರೆ.

ಕೋರಿಕೆಗಳಿಗೆ ಸಕರಾತ್ಮಕವಾಗಿ ಸ್ಪಂದಿಸಿರುವ ಸಚಿವ ಅಶ್ವಿನಿ ವೖಷ್ಣವ ಅವರು, ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದು, ಜಿಲ್ಲಾ ಕೇಂದ್ರದ ಜತೆಗೆ ಹುಬ್ಬಳ್ಳಿ ಮತ್ತು ಇತರ ಪ್ರಮುಖ ನಗರದಲ್ಲಿ ಕೇಂದ್ರಗಳನ್ನು ಮುಂದುವರಿಸುವಂತೆ ಟೆಂಡರ್ ಕರೆಯಲು ಸೂಚಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ಈ ಸಂದರ್ಭದಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net