ಏಜೆಂಟರ ಮೂಲಕ ಮತಾಂತರ ನಡೀತಿದೆ... ನಮ್ಮ ಸರ್ಕಾರ ಬ್ರೇಕ್ ಹಾಕುತ್ತೆ - ಸಚಿವ ಅಶೋಕ್

ashok
Published on

ಮಂಡ್ಯ: ವಿವಿಧ ಆಮಿಷ ತೋರಿಸಿ ಜನರನ್ನು ಮತಾಂತರ ಮಾಡುತ್ತಿರುವ ಏಜೆಂಟ್​ಗಳು ದೇಶದಲ್ಲಿ ಎಲ್ಲೆಡೆ ಇದ್ದಾರೆ, ರಾಜ್ಯದಲ್ಲೂ ಇದ್ದಾರೆ. ಈ ಸಮಾಜಘಾತುಕ ವ್ಯಕ್ತಿಗಳ ವಿರುದ್ಧ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೆ ಎಂದು ಸಚಿವ ಆರ್​.ಅಶೋಕ್ ಹೇಳಿದ್ದಾರೆ.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್​, ಮತಾಂತರ ಎಂಬುದು ಹೀನ ಕೃತ್ಯ. ಯಾವ ಧರ್ಮದಲ್ಲಿ ಹುಟ್ಟಿರುತ್ತಾರೆ ಆ ಧರ್ಮದಲ್ಲಿ ಪೂಜೆಪುನಸ್ಕಾರ ಮಾಡುವುದು ಅವರ ಹಕ್ಕು. ಆದರೆ ವಿದೇಶದಿಂದ ಹಣ ತಂದು, ಏಜೆಂಟ್​​ಗಳ ಮೂಲಕ ಹಣ ಕೊಟ್ಟು ಆಮಿಷ ಒಡ್ಡುತ್ತಿದ್ದಾರೆ. ಹಸು, ಎಮ್ಮೆ ಕೊಡುಸ್ತೀನಿ, ಆಸ್ಪತ್ರೆ ಖರ್ಚು‌ ನೋಡ್ಕೊಳ್ತೀನಿ ಅಂತ ಲಕ್ಷಾಂತರ ಜನರನ್ನ ಮತಾಂತರ ಮಾಡಲು ಮುಂದಾಗ್ತಿದ್ದಾರೆ ಎಂದರು.

ಮತಾಂತರ ಮಾಡುತ್ತಿರುವವರು ಏಜೆಂಟ್​ಗಳಿದ್ದ ಹಾಗೆ. ಒಂದು ಮತಾಂತರಕ್ಕೆ ಇಂತಿಷ್ಟು ಅಂತ ಅವರಿಗೆ ಹಣ ಕೊಡ್ತಾರೆ. ಆ ಹಣದ ಆಸೆಗೆ ಮತಾಂತರ ಮಾಡ್ತಿರುವುದು ನಮಗೆ ಗೊತ್ತಾಗಿದೆ. ರಾಜ್ಯದಲ್ಲಿ ನಡೀತಿದೆ, ಮಂಡ್ಯದಲ್ಲೂ ನಡೀತಿದೆ. ಈ ಕೆಲಸ ಮಾಡುತ್ತಿರುವ ಸಮಾಜಘಾತುಕ, ದೇಶದ್ರೋಹಿ ಹಾಗೂ ಧರ್ಮದ್ರೋಹಿ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ತೀವಿ ಎಂದ ಅಶೋಕ್​ ಖಡಕ್​ ಆಗಿ ಹೇಳಿದರು.

ಜೊತೆಗೆ, "ಮತಾಂತರಕ್ಕೆ ಬ್ರೇಕ್​ ಹಾಕುವ ಕೆಲಸ ಬಿಜೆಪಿ ಸರ್ಕಾರವೇ ಮಾಡಬೇಕು. ಈ ಕೆಲಸವನ್ನ ಕಾಂಗ್ರೆಸ್​ ಸರ್ಕಾರ ಬಂದ್ರೆ ಮಾಡಲ್ಲ, ಆದ್ದರಿಂದ ನಮ್ಮ ಸರ್ಕಾರವೇ ಮಾಡುತ್ತೆ" ಎಂದು ಸಚಿವ ಅಶೋಕ್​ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net