ಲಂಬಾಣಿ ತಾಂಡಾದಲ್ಲಿ ಮತಾಂತರ ಸಲ್ಲ

Conversion credit in Lambani Tanda
ಡಾ. ಬಾಬುರಾಜೇಂದ್ರ ನಾಯಿಕ್
Published on

ಜಯಪುರ: ರಾಜ್ಯದ ಲಂಬಾಣಿ ತಾಂಡಾಗಳಲ್ಲಿ ನಡೆಯುತ್ತಿರುವ ಮತಾಂತರದ ಧ್ವನಿ ಎತ್ತಿರುವ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಅವರ ಹೇಳಿಕೆ ಸ್ವಾಗತಾರ್ಹ ಎಂದು ಬಿಜೆಪಿ ವೈದ್ಯಕೀಯ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಬಾಬು ರಾಜೇಂದ್ರ ನಾಯಕ ತಿಳಿಸಿದ್ದಾರೆ.

ಲಂಬಾಣಿ ಸಮುದಾಯ ಆಮಿಷದ ಮತಾಂತರಕ್ಕೆ ಒಡ್ಡುವ ಬೆಳವಣಿಗೆ ಇಂದು ನಿನ್ನೆಯದಲ್ಲ. ಹಿಂದುಳಿದ ಲಂಬಾಣಿ ಸಮುದಾಯ ವಾಸಿಸುವ ತಾಂಡಾಗಳಿಗೆ ಕ್ರೈಸ್ತ ಮಿಷನರಿಗಳು ಭೇಟಿ ನೀಡಿ ಅವರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುತ್ತಿವೆ.

ಆರ್‌ಎಸ್‌ಎಸ್ ಕಾರ್ಯಕರ್ತ ಮತ್ತು ಲಂಬಾಣಿ ಸಮುದಾಯದ ಸದಸ್ಯನೂ ಆದ ನಾನು ಇಂತಹ ಸಾಕಷ್ಟು ಪ್ರಕರಣ ಕಂಡಿದ್ದೇನೆ.

ಹಿಂದೆಯೂ ಕೂಡಾ ಸಾಮೂಹಿಕ ಪ್ರಾರ್ಥನೆ ನೆಪ ಮಾಡಿ ತಾಂಡಾಗಳಿಗೆ ಭೇಟಿ ನೀಡುವ ಮಿಷಿನರಿಗಳು, ಮುಗ್ಧ ಜನರನ್ನು ವಿವಿಧ ಆಮಿಷ, ಆಸೆಗಳನ್ನೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸುವುದು ಬೆಳಕಿಗೆ ಬಂದಾಗ ನಾನು ಮುಂಚಿತವಾಗಿಯೇ ತಾಂಡಾಗಳಿಗೆ ತೆರಳಿ, ಮಿಷನರಿಗಳು ಸದಸ್ಯರನ್ನು ಪ್ರಶ್ನಿಸಿದಾಗ ಅವರ ಬಳಿ ಯಾವ ವಿಷಯದ ಬಗ್ಗೆಯೂ ಉತ್ತರ ನೀಡದೇ ಸುಮ್ಮನಾಗಿ ಬಿಡುತ್ತಿದ್ದರು ಎಂದು ಹೇಳಿದರು.

ತಾಂಡಾಗಳಲ್ಲಿ ಜಾಗೃತಿ ಮತ್ತು ಹಿಂದೂ ಧರ್ಮದ ಬಗ್ಗೆ ಅರಿವು ಮೂಡಿಸಿದ ಪರಿಣಾಮ ಮತಾಂತರದ ಪ್ರಮಾಣ ಬಹಳಷ್ಟು ಕಡಿಮೆಯಾಗಿತ್ತು.

ಆದರೆ, ಇಂದು ರಾಜ್ಯಾದ್ಯಂತ 3,500ಕ್ಕೂ ಹೆಚ್ಚು ತಾಂಡಾಗಳಿದ್ದು, ಅಲ್ಲೆಲ್ಲಾ ತೆರಳಿ ಜಾಗೃತಿ ಮೂಡಿಸುವುದು ಸುಲಭ ಮಾತಲ್ಲ. ಅದಕ್ಕೆ ಸರ್ಕಾರವೇ ಆಮಿಷದಾಸೆ ಮತಾಂತರ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆಯಿದೆ.

ಕ್ರೈಸ್ತ ಮಿಷನರಿಗಳು ತಮ್ಮ ಕುತಂತ್ರದ ಮತಾಂತರವನ್ನು ನಿಲ್ಲಿಸದಿದ್ದರೆ, ಅದು ಸಮಸ್ತ ಕ್ರೈಸ್ತ ಸಮುದಾಯಕ್ಕೆ ಕೆಟ್ಟ ಬರುವುದು ನಿಶ್ಚಿತ ಎಂದು ಬಾಬು ರಾಜೇಂದ್ರ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net