ಸಂಭಾಷಣೆಕಾರ ಶಂಕರ್ ಪಾಗೋಜಿ ಅಭಿಪ್ರಾಯ; ಸಿನಿಮಾ ಆಸಕ್ತಿಯಿಂದ ಸಿನಿ ಕಲಾವಿದ ಬೆಳೆಯಲು ಸಾಧ್ಯ

28 Dwd 6
Published on

ಧಾರವಾಡ: ವಿದ್ಯಾರ್ಥಿ ದೆಸೆಯಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದ್ದಿದ್ದರಿಂದ ಚಿತ್ರದ ಸಂಭಾಷಣೆ ಬರೆಯಲು ಸಾಧ್ಯವಾಯಿತು. ಚಿತ್ರಕಥೆ ಬರೆಯಲು ಸಿನಿಮಾ ಆಸಕ್ತಿ ಬಹಳ ಮುಖ್ಯ ಎಂದು ಹಿರಿಯ ಪತ್ರಕರ್ತ ಹಾಗೂ ಚಲನಚಿತ್ರ ಸಂಭಾಷಣೆಕಾರ ಶಂಕರ್ ಪಾಗೋಜಿ ಹೇಳಿದರು.
ನಗರದ ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ಆಯೋಜಿಸಿದ್ದ ಸಿನಿಮಾ ಬರವಣಿಗೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೌರಾಣಿಕ ಸಿನಿಮಾ ಮಾಡುವಾಗ ಆಳವಾದ ಸಂಶೋಧನೆ ನಡೆಸಿ ಚಿತ್ರಕಥೆ ಮಾಡಬೇಕಾಗುತ್ತದೆ. ಆದರೆ, ಕಾಲ್ಪನಿಕ ಚಿತ್ರಗಳ ಕಥೆ ಹಾಗಯನ್ನು ನಮ್ಮದೆ ಶೈಲಿಯಲ್ಲಿ ಬರೆಯಬಹುದು. ಕಥೆಗಾರ ಹಲವಾರು ಕಲ್ಪನೆಗಳನ್ನು ಹೊಂದಿರಬೇಕಾಗುತ್ತದೆ. ಪಾತ್ರಗಳ ಅಧ್ಯಯನವು ಚಿತ್ರವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಕೋವಿಡ್ ಸಮಯದಲ್ಲಿ ಎದುರಾದ ಸಂಕಷ್ಟಗಳನ್ನು ಅನುಭವಿಸಿದ ಓರ್ವ ಹುಡುಗಿಯ ಕಥೆಯನ್ನಾಧರಿಸಿ ನಾನು `ಇನ್' ಚಿತ್ರಕ್ಕೆ ಸಂಭಾಷಣೆ ಬರೆದಎ ಎಂದರು.
ಸಿನಿಮಾ ನಿರ್ದೇಶಕ ದೇವೇಂದ್ರ ಬಡಿಗೇರ್ ಮಾತನಾಡಿ, ಸಾಹಿತಿ ತನಗೆ ಇಷ್ಟವಾದ ಕಥೆಯನ್ನು ಹೇಗೆ ಪುಸ್ತಕ ರೂಪದಲ್ಲಿ ಇಳಿಸುತ್ತಾನೋ ಹಾಗೆ ಸಿನಿಮಾ ನಿರ್ದೇಶಕ ಕೂಡ ಸಿನಿಮÁ ರೂಪಿಸಬೇಕು. ಆಗ ಮಾತ್ರ ಆ ಸಿನಿಮಾ ಒಳ್ಳೆಯ ಅಭಿರುಚಿ ಹೊಂದಿರಲು ಸಾಧ್ಯ. ಇತ್ತೀಚಿನ ದಿನಗಳಲ್ಲಿ ಆ್ಯಕ್ಷನ್ ಸಿನಿಮಾಗಳ ಹಾವಳಿಗೆ ಸಿಲುಕಿ ಗುಣಮಟ್ಟದ ಸಿನಿಮಾಗಿಂತ ಕಮರ್ಷಿಯಲ್ ಸಿನಿಮಾಗಳು ಹೆಚ್ಚಾಗುತ್ತಿವೆ ಎಂದರು.
ಅಧ್ಯಕ್ಷತೆ ವಹಿದ್ದ ವಿಭಾಗದ ಮುಖ್ಯಸ್ಥ ಡಾ. ಜೆ.ಎಂ ಚಂದುನವರ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಇಂದು ಹಳ್ಳಿಗಾಡಿನ ಯುವಕರು ಮಿಂಚುತ್ತಿದ್ದಾರೆ. ಆ ಮೂಲಕ ಸಿನಿಮಾ ರಂಗಕ್ಕೂ ಕಾಲಿಡುತ್ತಿದ್ದಾರೆ. ಕಲೆ ಮತ್ತು ಸಿನಿಮಾದ ಬಗ್ಗೆ ಆಸಕ್ತಿ ಇದ್ದರೆ ಎಂತಹ ಮನುಷ್ಯ ಬೇಕಾದರೂ ಉತ್ತಮ ಕಲಾವಿದನಾಗಬಲ್ಲ ಎಂದರು.

ಹಿರಿಯ ಪತ್ರಕರ್ತರಾದ ಡಾ. ಬಸವರಾಜ ಹೊಂಗಲ್, ಮಂಜುನಾಥ ಅಂಗಡಿ, ಅನಿಲ್ ಬಾಸೂರ, ಡಾ. ಮಂಜುನಾಥ ಅಡಿಗಲ್, ಡಾ. ನಾಗರಾಜ್ ರೋಣದ್, ಇತರರಿದ್ದರು.
ಸಹ ಪ್ರಾಧ್ಯಾಪಕ ಡಾ. ಸಂಜಯಕುಮಾರ್ ಮಾಲಗತ್ತಿ ಸ್ವಾಗತಿಸಿದರು, ವಿಜಯಲಕ್ಷ್ಮೀ ಮೇಟಗಾರ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net