‘ಸುದೀಪ್‌ ಅವರು ದೇವ್ರಾ? ಕಿಚ್ಚನ ಬಗ್ಗೆ ಮಾತಾಡಿ ಫುಲ್ ಟ್ರೋಲ್..ವಿವಾದ ಬಳಿಕ ಕೈ ಮುಗಿದು ಕ್ಷಮೆ ಕೇಳಿದ ರಕ್ಷಕ್ ಬುಲೆಟ್

Controversy Statement Bullet Rakshak Ask Sorry For Kichcha Sudeep
Published on

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ಬಾಸ್​​ ಕಾರ್ಯಕ್ರಮ ಜನಮನ್ನಣೆ ಪಡೆದಿದೆ. ಬಿಗ್​ಬಾಸ್​ ಸ್ಪರ್ಧಿಯಲ್ಲಿ ಒಬ್ಬರಾಗಿದ್ದ ರಕ್ಷಕ್ ಬುಲೆಟ್ ಬಿಗ್ ಬಾಸ್​ನಿಂದ ಹೊರಗೆ ಬಂದ ಬಳಿಕ ಸಾಕಷ್ಟು ಕಡೆಗಳಿಗೆ ಸಂದರ್ಶನ ನೀಡಿದ್ದರು. ಸುದೀಪ್ ಬಗ್ಗೆ ಅವರು ನಾಲಿಗೆ ಹರಿಬಿಟ್ಟಿದ್ದರು. ಈ ವಿಚಾರವಾಗಿ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಟ್ರೋಲ್​​ ಆಗಿತ್ತು. ಈ ಕುರಿತಾಗಿ ರಕ್ಷಕ್​ ಮಾತನಾಡಿ ಕ್ಷಮೆ ಕೇಳಿದ್ದಾರೆ.

ಖಾಸಗಿವಾಹಿನಿ ನಡೆಸಿದ ಸಂದರ್ಶನದಲ್ಲಿ ಸ್ನೇಹಿತ್‌, ರಕ್ಷಕ್‌ ಬುಲೆಟ್‌, ಮೈಕಲ್‌, ನೀತು ವನಜಾಕ್ಷಿ, ಪವಿ ಪೂವಪ್ಪ ಭಾಗವಹಿಸಿದ್ದರು. ಈ ವೇಳೆ ಕಳಪೆ ಮತ್ತು ಉತ್ತಮ ಪಟ್ಟದ ಬಗ್ಗೆ ಎಲ್ಲರ ನಡುವೆ ಚರ್ಚೆಯಾಗಿದೆ. ಈ ವೇಳೆ ಮಾತನಾಡಿದ, ರಕ್ಷಕ್‌, "‌ಬಿಗ್ ಬಾಸ್ ಮನೆಯಲ್ಲಿ ಎಲ್ಲ ಸ್ಪರ್ಧಿಗಳು ಡ್ರಾಮಾ ಮಾಡ್ತಾರೆ. ಕಳಪೆ ಉತ್ತಮ ಅಂತ ಕೊಟ್ಟಮೇಲೆ ಆ ಮಾತಿನ ಮೇಲೆ ಯಾರೂ ನಿಲ್ಲುವುದಿಲ್ಲ. ಅನಿಸಿದ್ದನ್ನು ಕೊಟ್ಟು ಬಿಡ್ತಾರೆ. ಆಮೇಲೆ ಸುದೀಪ್‌ ಅವರು ಬಂದ ಮೇಲೆ ಎಲ್ಲವೂ ಬದಲಾಗುತ್ತದೆ. ಸುದೀಪಣ್ಣ ಬಂದ ಬಳಿಕ, ದೇವರು ನಿಂತಿದ್ದಾರೆ. ನಾವೆಲ್ಲ ಭಕ್ತಾದಿಗಳು.. ಅವರು ಹೆಂಗೆ ವರ ಕೊಡ್ತಾರೋ, ಹಂಗೆ ತೆಗೋಬೇಕು ಅನ್ನೋ ಥರ ಎಲ್ಲರೂ ಇರ್ತಾರೆ" ಎಂದು ರಕ್ಷಕ್‌ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈ ವಿಡಿಯೋ ವೈರಲ್​​ ಆಗುತ್ತಿದ್ದಂತೆ ಈ ಹೇಳಿಕೆಯೇ ಟೀಕೆ ವ್ಯಕ್ತವಾಗಿತ್ತು.

ರಕ್ಷಕ್ ಕ್ಷಮೆ ಕೇಳಬೇಕು ಎಂದು ಸುದೀಪ್ ಅಭಿಮಾನಿಗಳು ಪಟ್ಟು ಹಿಡಿದಿದ್ದರು. ಕೊನೆಗೂ ರಕ್ಷಕ್ ಅವರು ಕ್ಷಮೆ ಕೇಳಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ.

ರಕ್ಷಕ್​​ ಮಾತನಾಡಿ, "ಎರಡು ದಿನಗಳಿಂದ ಒಂದು ವಿಡಿಯೋ ಹರಿದಾಡ್ತಿದೆ. ನಾನು ಸುದೀಪ್ ಅಣ್ಣನ ಬಗ್ಗೆ ನೆಗೆಟಿವ್‌ ಆಗಿ ಮಾತನಾಡಿದೆ ಎಂದು. ನಾನು ಹೇಳಿದ್ದು ಆ ಕಾಂಟಾಸ್ಟ್‌ನಲ್ಲಿ ಅಲ್ಲ. ಇಡೀ ಸಂದರ್ಶನ ನೋಡಿದರೆ ನಿಮಗೆ ತಿಳಿಯುತ್ತದೆ. ಏನಕ್ಕೆ ಯಾವ ಲೈನ್‌ ಹೇಳಿದೆ ಎಂದು ಗೊತ್ತಾಗುತ್ತದೆ. ಬೇಜಾರಾಗಿದ್ದರೆ, ಎಲ್ಲರಿಗೂ ಸಾರಿ. ಸುದೀಪ್‌ ಅಣ್ಣನಿಗೂ ಮತ್ತು ಸುದೀಪ್‌ ಅಣ್ಣನ ಫ್ಯಾನ್ಸ್‌ಗೂ. ತುಂಬ ಗೌರವ ಇದೆ ಸುದೀಪಣ್ಣನ ಮೇಲೆ" ಎಂದು ವಿಡಿಯೋ ಮೂಲಕ ಕ್ಷಮೆ ಕೇಳಿದ್ದಾರೆ ರಕ್ಷಕ್‌ಸ್ಯಾ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net