ಮಾದಕ ವಸ್ತುಗಳ ಹಾವಳಿ ನಿಯಂತ್ರಿಸಿ

kls2 (2)
Published on

ಕಳಸ: ಕಳಸ ತಾಲೂಕಿನಲ್ಲಿ ಮಾದಕ ವಸ್ತುಗಳ ಹಾವಳಿ ಮಿತಿ ಮೀತಿಮೀರಿದೆ. ಇದರಿಂದ ಕಳಸದಲ್ಲಿ ಅಶಾಂತಿ ಉಂಟಾಗಿದ್ದು, ತಾಲೂಕಿನಲ್ಲಿ ಮಾದಕ ವಸ್ತುಗಳ ಹಾವಳಿ ನಿಯಂತ್ರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಟ ನಡೆಸಲಾಗುವುದು ಎಂದು ಸರ್ವಪಕ್ಷಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

ಕಳಸದ ಕೆಸಿಎ ಬ್ಯಾಂಕ್‌ನಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಕೆಸಿಎ ಬ್ಯಾಂಕ್ ಅಧ್ಯಕ್ಷ ಜಿ.ಕೆ.ಮಂಜಪ್ಪಯ್ಯ, ಕಳಸ ಸಮೀಪದ ಖಾಸಗಿ ಕಾಫಿ ತೋಟವೊಂದರಲ್ಲಿ ಮಿಲಿಟರಿ ಸಮವ ಸ್ತ್ರ ಧರಿಸಿದ 50ಭದ್ರತಾ ಸಿಬ್ಬಂದಿ ಆಸುಪಾಸಿನ ತೋಟಗಳ ಕೃಷಿಕರಿಗೆ ಬೆದರಿಕೆ ಗೂಂಡಾಗಳಂತೆ ವರ್ತಿಸಿ ದಬ್ಬಾಳಿಕೆ ಮಾಡುತ್ತಿದ್ದಾರೆ. ಇವರ ಗಲಾಟೆಯಿಂದ ಜನರು ಗೌರವಯುತವಾಗಿ ಬಾಳುವುದು ಕಷ್ಟವಾಗಿದೆ ಎಂದು ದೂರಿದರು.

ತಾಲೂಕಿನಲ್ಲಿ ಮಾದಕ ವಸ್ತುಗಳನ್ನು ತಂದು ಮಾರಾಟ ಮಾಡುತ್ತಿರುವುದರಿಂದ ಇಲ್ಲಿನ ಕಾಲೇಜು ವಿದ್ಯಾರ್ಥಿಗಳು, ಯುವಕರು ಕೆಟ್ಟ ದಾರಿ ಹಿಡಿಯುತ್ತಿದ್ದಾರೆ. ಇದನ್ನು ನಿಯಂತ್ರಣ ಮಾಡಬೇಕಾದ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳು ಕಳಸಕ್ಕೆ ಬಂದು ಸಾರ್ವಜನಿಕ ಸಭೆ ನಡೆಸಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು ಇಲ್ಲವಾದಲ್ಲಿ ಕಳಸದ ಜನರು ಒಟ್ಟಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಗ್ರಾಪಂ ಉಪಾಧ್ಯಕ್ಷ ಭಾಸ್ಕರ್, ಸದಸ್ಯರಾದ ರಂಗನಾಥ್, ಕಾರ್ತಿಕ್ ಶಾಸಿ, ವೀರೇಂದ್ರ, ಜೆಡಿಎಸ್ ಅಧ್ಯಕ್ಷ ಸಂತೋಷ್ ಹಿನಾರಿ, ವಿವಿಧ ಸಂಘಟನೆಗಳ ಮುಖಂಡರಾದ ರವಿ ರೈ, ಅನಿಲ್ ಡಿಸೋಜ, ಬ್ರಹ್ಮದೇವ, ಪದ್ಮಕುಮಾರ್, ನಾಗೇಶ್, ಆಶಾಲತಾ, ಜ್ವಾಲನಯ್ಯ, ಸುರೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net