ಆಹಾರಸೇವನೆಗೂ ಮುನ್ನ ಕೈಗಳನ್ನು ಸ್ವಚ್ಛಗೊಳಿಸಿ: ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್ ಕಿವಿಮಾತು

Control of acute dysentery mandya
Published on

ಮಂಡ್ಯ: ನಮ್ಮ ದಿನನಿತ್ಯದ ಕಾರ್ಯದ ನಡುವೆ ಆಹಾರ ಸೇವನೆಗೂ ಮುನ್ನ ಕೈಗಳನ್ನು ಸ್ವಚ್ಛಗೊಳಿಸಿ ಮುಂದಿನ ಕೆಲಸಗಳನ್ನುಮಾಡಿದರೆ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಸಲಹೆ ನೀಡಿದರು.

ನಗರದ ಡವರಿ ಕಾಲನಿಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಆಂದೋಲನದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಅನೇಕ ಕಾಯಿಲೆಗಳು ಉತ್ಪತ್ತಿಯಾಗುತ್ತಿವೆ. ಅದನ್ನು ತಡೆಗಟ್ಟಲು ಅರೋಗ್ಯ ಇಲಾಖೆ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಅತೀಸಾರ ಭೇದಿ ಹೆಚ್ಚಾಗಿ ಮಕ್ಕಳಲ್ಲಿ ಸ್ವಚ್ಛತೆಯ ಕೊರತೆಯಿಂದ ಉಂಟಾಗುತ್ತದೆ. ಅದನ್ನು ತಡೆಗಟ್ಟಲು ಕೈ ತೊಳೆಯುವ ಬಗ್ಗೆ ಅರಿವು ಮೂಡಿಸುವುದು ಅಗತ್ಯ. ಅತಿಸಾರ ಭೇದಿ ಉಂಟಾದ ಸಂದರ್ಭದಲ್ಲಿ ದೇಹ ಮತ್ತು ರಕ್ತದಲ್ಲಿನ ತೇವಾಂಶದ ಕೊರತೆ ಉಂಟಾಗಿ ಆಯಾಸ ಹಾಗೂ ಮುಂತಾದ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದಲ್ಲಿ ದುಷ್ಪರಿಣಾಮವಾಗಿ ಸಾವು ಸಹ ಉಂಟಾಗುವ ಸಾಧ್ಯತೆ ಇರುತ್ತದೆ ಎಂದರು.

ಅತೀಸಾರ ಭೇದಿ ತಡೆಗಟ್ಟಲು ಓಆರ್‌ಎಸ್ ಪ್ಯಾಕೆಟ್ ಬಹಳ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ತೆಗೆದುಕೊಳ್ಳುವ ಮುಂಚೆ ನಮ್ಮ ದೇಹದಲ್ಲಿ ಹೊರ ಹೋಗುತ್ತಿರುವ ತೇವಾಂಶದ ನೀರಿನ ಎರಡು ಪಟ್ಟು ಹೆಚ್ಚಿನ ನೀರಿನ ಜತೆ ಇದನ್ನು ಸೇವನೆ ಮಾಡಬೇಕು. ಜಿಂಕ್ ಮಾತ್ರೆ ಸೇವನೆ ಮುಖ್ಯ ಎಂದರು .

ದೇಶದಲ್ಲಿ ಪ್ರತಿಶತ 6ರಷ್ಟು ಮಕ್ಕಳು ಅತಿಸಾರ ಬೇಧಿಯಿಂದ ಸಾವನ್ನು ಕಾಣುತ್ತಿದ್ದಾರೆ. ಇದನ್ನು ತಡೆಗಟ್ಟಲು ದಿನನಿತ್ಯ ಸ್ವಚ್ಛವಾಗಿ ಸೋಪಿನಿಂದ ಕೈ ತೊಳೆಯುವುದು ಉತ್ತಮ ಪರಿಸರ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ ಮೋಹನ್, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್ಕುಮಾರ್, ಕುಷ್ಟ ರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಗಳಾ, ನಗರಸಭೆ ಸದಸ್ಯ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net