ಶಿಕ್ಷಣ, ಸಾಮಾನ್ಯ ಜ್ಞಾನ ಮಾಹಿತಿಗೆ ಸಹಕಾರಿ : ಜಯರಾಮ್ ನಾಯಕ್ ಅಭಿಮತ; ವಿದ್ಯಾರ್ಥಿಮಿತ್ರ ಕೊಡುಗೆ ಕಾರ್ಯಕ್ರಮ

Vidyarthi mithra
ಸರ್ಕಾರಿ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರದಲ್ಲಿ ಬುಧವಾರ ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಪ್ರಾಯೋಜಕತ್ವ ಕಾರ್ಯಕ್ರಮ ಜರುಗಿತು
Published on

ಕೊಕ್ಕರ್ಣೆ: ವಿದ್ಯಾರ್ಥಿಮಿತ್ರ ವಿದ್ಯಾರ್ಥಿಗಳ ಅಂಕಗಳಿಸುವಲ್ಲಿ ಸಹಕಾರಿ. ಶಿಕ್ಷಕರು ಹೇಳಿದ ಪಠ್ಯದೊಂದಿಗೆ ಈ ಪತ್ರಿಕೆ ಓದುವುದರಿಂದ ಇನ್ನೂ ಹೆಚ್ಚಿನ ಅಂಕ ಪಡೆಯಲು ಸಹಾಯವಾಗುತ್ತದೆ. ಪ್ರೌಢಶಾಲಾ ಶಿಕ್ಷಣ, ಉದ್ಯೋಗ ಮಾಹಿತಿ, ಸಾಮಾನ್ಯ ಜ್ಞಾನ ಮುಂತಾದ ಮಾಹಿತಿ ಒಳಗೊಂಡಿರುವುದರಿಂದ ಉಳಿದವರಿಗೂ ಪ್ರಯೋಜನಕಾರಿ ಎಂದು ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ಅಧ್ಯಕ್ಷ ಜಯರಾಮ ನಾಯಕ್ ಹೇಳಿದರು.

ಸರ್ಕಾರಿ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರದಲ್ಲಿ ಬುಧವಾರ ಬ್ರಹ್ಮಾವರ ಬಾರಕೂರು ಲಯನ್ಸ್ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿಮಿತ್ರ ಪ್ರಾಯೋಜಕತ್ವ ಕಾರ್ಯಕ್ರಮದಲ್ಲಿ ಮಾತನಾಡಿದರು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಈ ಹಿಂದೆ ಈ ಪತ್ರಿಕೆ ಪ್ರಯೋಜನ ಪಡೆದು ಅಧಿಕ ಅಂಕಗಳಿಸಿರುವುದನ್ನು ಕಾಣಬಹುದು ಹಾಗೂ ಮುಂದಿನ ದಿನಗಳಲ್ಲಿ ಶೇ.100 ಫಲಿತಾಂಶ ದೊರೆಯಲಿ ಎಂದರು.

ಕ್ಲಬ್ ಕಾರ್ಯದರ್ಶಿ ಐವಾನ್ ದೊನತ್ ಸುವಾರಿಸ್, ಖಜಾಂಚಿ ಸಂತೋಷ್ ಕೋಟ್ಯಾನ್ ಎ.ಎಸ್.ಹೆಗ್ಡೆ, ಸುದೇಶ್ ಹೆಗ್ಡೆ, ಜಿ.ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಶೆಟ್ಟಿ, ಡಾ.ಮಹೇಶ್ ಶೆಟ್ಟಿ, ಆನಂದ ಗಾಣಿಗ, ಶೇಖರ ಶೆಟ್ಟಿ, ಎಸ್.ಜಯರಾಮ್ ಹೆಗ್ಡೆ, ಜಯರಾಮ್ ಶೆಟ್ಟಿ, ಪ್ರದೀಪ್ ಶೆಟ್ಟಿ, ದೇವದಾಸ್ ಶೆಟ್ಟಿ, ವೆಂಕಟರಮಣ ಶೆಟ್ಟಿ, ಎಸ್‌ಡಿಎಂಸಿ ಉಪಾಧ್ಯಕ್ಷ ರಾಮಕೃಷ್ಣ, ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅರುಣ್ ಭಂಡಾರಿ, ಶಿಕ್ಷಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕ ಜಗದೀಶ್ ಸ್ವಾಗತಿಸಿದರು. ಲಯನ್ಸ್ ಸದಸ್ಯ ಶೇಖರ ಶೆಟ್ಟಿ ಪ್ರಸ್ತಾವನೆಗೈದರು. ಉಪಪ್ರಾಂಶುಪಾಲೆ ಉಮಾ ಪಿ. ವಂದಿಸಿದರು.

ವಿಜಯವಾಣಿ ವಿದ್ಯಾರ್ಥಿಮಿತ್ರದಿಂದ ಅಂಕಗಳಿಸಲು ಸಹಕಾರಿ. ನನ್ನ ಮಗಳಿಗೆ ಗಣಿತ ವಿಭಾಗದಲ್ಲಿ ಶೇ.75 ಅಂಕ ಬರಲು ಸಹಾಯವಾಗಿದೆ. ವಿದ್ಯಾರ್ಥಿ ಮಿತ್ರದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಿ.-ಶೇಖರ್ ಶೆಟ್ಟಿ, ಲಯನ್ಸ್ ಸದಸ್ಯ

ಕಳೆದ ಶೈಕ್ಷಣಿಕ ವರ್ಷದಲ್ಲಿ 269 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 262 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಈ ಬಾರಿ ವಿದ್ಯಾರ್ಥಿಮಿತ್ರದಿಂದ ಶೇ.100ಫಲಿತಾಂಶ ಬರಲು ಪ್ರಯತ್ನಿಸುತ್ತೇವೆ.-ಉಮಾ ಪಿ., ಉಪಪ್ರಾಂಶುಪಾಲೆ ಬೋರ್ಡ್ ಹೈಸ್ಕೂಲ್ ಬ್ರಹ್ಮಾವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net