

ಹುಬ್ಬಳ್ಳಿ: ಇಲ್ಲಿಯ ಜೈಂಟ್ಸ್ ಗ್ರುಪ್ ಆಫ್ ರಾಜಧಾನಿ ಕಾಲನಿ ಸಹಯೋಗದಲ್ಲಿ ಜೈಂಟ್ಸ್ ಸಪ್ತಾಹದ ಅಂಗವಾಗಿ ನವನಗರದ ಮೈತ್ರಿ ವೃದ್ಧಾಶ್ರಮಕ್ಕೆ ಬುಧವಾರ ಅಕ್ಕಿ, ಬೇಳೆ, ಅಡುಗೆ ಎಣ್ಣೆ ಇತರ ಸಾಮಗ್ರಿಗಳನ್ನು ದೇಣಿಗೆ ನೀಡಲಾಯಿತು.
ಗ್ರುಪ್ ಅಧ್ಯಕ್ಷ ಶ್ರೀಕಾಂತ ಹಬೀಬ, ಫೆಡರೇಶನ್ ಅಧಿಕಾರಿ ಎಸ್.ಬಿ. ಹೊಸೂರ, ಚನ್ನಬಸಪ್ಪ ಧಾರವಾಡಶೆಟ್ಟರ, ರುನಾಥ ಮಗಚಿಕೊಂಡಿ, ಗಣಪತಿ ಐಯ್ಯರ ಮುಂತಾದವರು ಉಪಸ್ಥಿತರಿದ್ದರು.