

ಪುತ್ತೂರು ಗ್ರಾಮಾಂತರ: ಪುತ್ತೂರಿನ ಪ್ರತಿಷ್ಠಿತ ಜೋಸ್ ಅಲುಕಾಸ್ ಜ್ಯುವೆಲ್ಸ್ ಸಂಸ್ಥೆಯ ಸಿಎಸ್ಆರ್ ನಿಧಿಯಿಂದ ವೀರಮಂಗಲದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪೀಠೋಪಕರಣಗಳಿಗಾಗಿ ರೂ. 1 ಲಕ್ಷ ಕೊಡುಗೆ ನೀಡಲಾಗಿದೆ. ರೂ 1,00,800 ಮೊತ್ತದ ಚೆಕ್ಕನ್ನು ಪುತ್ತೂರಿನ ಸುದಾನ ವಿದ್ಯಾಸಂಸ್ಥೆಯ ಸಂಚಾಲಕ ವಿಜಯ ಹಾರ್ವಿನ್ ಮುಖ್ಯಶಿಕ್ಷಕ ತಾರಾನಾಥ ಸವಣೂರು ಮೂಲಕ ಶಾಲೆಗೆ ಹಸ್ತಾಂತರಿಸಿದರು.
ಜೋಸ್ ಅಲುಕಾಸ್ ಜ್ಯುವೆಲ್ಸ್ ಸಂಸ್ಥೆ ಮೇಲ್ವಿಚಾರಕ ರಿತೇಶ್ ಕಾರ್ಯಕ್ರಮ ಸಂಯೋಜಿಸಿದ್ದರು. ಶಿಕ್ಷಕರಾದ ಹರಿಣಾಕ್ಷಿ, ಕವಿತಾ ಹಾಗೂ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.