ಭಾಷೆಯ ಅಭ್ಯುದಯಕ್ಕೆ ಕೊಡುಗೆ

16 09 2025_BGR RURAL_PAGE_5B
ತೆಲಗರಹಳ್ಳಿ ಸ್ವಾಮಿ ವಿವೇಕಾನಂದ ಸೆಂಟ್ರಲ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್​ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯನ್ನು ಜಗನ್ನಾಥ್​ ರಾವ್​ ಬಹುಳೆ ಉದ್ಘಾಟಿಸಿದರು. ಸವೋರ್ದಯ ಯೋಗ ಫೌಂಡೇಷನ್​ನ ಶಾಮ್​ ಜಿ, ವಿವೇಕಾನಂದ ಶಾಲೆಯ ಸಂಸ್ಥಾಪಕ ಅಧ್ಯರಾದ ತೆ.ನಾ.ಅಂಬರೀಶ್​, ಡಾ.ವೇದಾವತಿ ಬಿ.ರಾವ್​, ಕವಿ ಸಂತೋಷ್​, ಕವಯಿತ್ರಿ ದಿವ್ಯಾ, ನಾಗವೇಣಿ ಇದ್ದರು.
Published on

ಆನೇಕಲ್​ : ಭಾಷೆಯ ಅಭ್ಯುದಯಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಹುಟ್ಟು ಹಾಕಿದ ಧೀಮಂತ ಚೇತನ ಸರ್​ ಎಂ. ವಿಶ್ವೇಶ್ವರಯ್ಯ ಎಂದು ಹಿರಿಯ ಸಾಹಿತಿ ಜಗನ್ನಾಥ್​ರಾವ್​ ಬಹುಳೆ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್​ ವಿಧಾನಸಭಾ ೇತ್ರದ ವತಿಯಿಂದ ತೆಲಗರಹಳ್ಳಿ ಸ್ವಾಮಿ ವಿವೇಕಾನಂದ ಸೆಂಟ್ರಲ್​ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸರ್​ ಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

ವಿಶ್ವೇಶ್ವರಯ್ಯನವರು ಕನ್ನಡಕ್ಕಾಗಿ ವಿಶ್ವಮಾನವನಾಗಿ ಕೆಲಸ ಮಾಡಿ ಕನ್ನಡ ಮನಸುಗಳನ್ನು ಕಟ್ಟಿ ಮಾದರಿಯಾಗಿದ್ದಾರೆ. ಬ್ರಿಟಿಷರು ಅಹಂಕಾರಿಗಳಾದರೂ ಸರ್​ ಎಂ.ವಿ.ಅವರ ಮುಂದೆ ತಲೆಬಾಗಿ ಅವರ ಪ್ರತಿಭೆಗೆ ಶರಣಾಗಿದ್ದರು. ಇವರು ನಮ್ಮ ಕನ್ನಡಿಗರೆಂಬುವುದು ಹೆಮ್ಮೆಯ ವಿಚಾರವಾಗಿದೆ ಎಂದು ತಿಳಿಸಿದರು. ವಿವೇಕಾನಂದ ಶಾಲೆಯ ಸಂಸ್ಥಾಪಕ ಅಧ್ಯರಾದ ತೆ.ನಾ.ಅಂಬರೀಶ್​ ಮಾತನಾಡಿ, ವಿಶ್ವೇಶ್ವರಯ್ಯನವರು ದೇಶದ ಹೆಸರನ್ನು ವಿಶ್ವಖ್ಯಾತಿಯನ್ನಾಗಿಸಿ ಕನ್ನಡಿಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲಸಗಳನ್ನು ಮಾಡಿ ಕೋಟ್ಯಂತರ ಜನರಿಗೆ ದಾರಿದೀಪವಾಗಿದ್ದಾರೆ ಇಂತಹ ಮಹನೀಯರು ಸದಾ ಪ್ರಾತಸ್ವರಣೆಯರು ಎಂದು ಸ್ಮರಿಸಿದರು.

ಸವೋರ್ದಯ ಯೋಗ ಫೌಂಡೇಷನ್​ನ ಶಾಮ್​ ಜಿ ಮಾತನಾಡಿ, ಜಗತ್ತು ವಿನಾಶದ ಕಡೆಗೆ ಪಯಣಿಸುತ್ತಿದ್ದು ಇದನ್ನು ತಡೆಯುವ ಮಾರ್ಗವು ಒಂದೇ ಶಾಂತಿ. ವಿಶ್ವೇಶ್ವರಯ್ಯನವರು ಬಹಳ ದೂರ ದೃಷ್ಟಿಯಿಂದ ಹಲವಾರು ಕೆಲಸಗಳನ್ನು ಮಾಡಿ ಅಜರಾಮರವಾಗಿ ಉಳಿದುಕೊಂಡಿದ್ದಾರೆ ಇಂತಹ ಮೇಧಾವಿಗಳು ಭೂಮಿಯ ಮೇಲೆ ಅಪರೂಪವಾಗಿ ಹುಟ್ಟುತ್ತಾರೆ ಎಂದು ಹೇಳಿದರು. ಶಾಲೆಯ ಸಹ ನಿರ್ದೇಶಕ ಮಂಜುನಾಥ್​, ಸುದ್ದಿಮನೆ ಗಣೇಶ್​, ಅತಾವುಲ್ಲ, ಉಮೇಶ್​, ನಿವೇದಿತ, ಕನ್ನಡ ಶಿಕಿ ಧನಲ್ಮ, ನಿತ್ಯಾ, ಕನ್ನಡ ಸಾಹಿತ್ಯ ಚಲಿಪಿಲಿ ಸಂಟನೆಯ ಆನಂದ್​, ಸಿಂಗರ್​ ವಿನೋದ್​, ಕಸಾಪ ತಾಲೂಕು ಅಧ್ಯ ಆದೂರು ಪ್ರಕಾಶ್​, ಅಪ್ಸರ್​ ಆಲಿಖಾನ್​, ಚುಟುಕುಶಂಕರ್​, ಮಿಲಿಟರಿ ಕುಮಾರ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net