ಭಾಗಮಂಡಲ ಗ್ರಾ.ಪಂನಿಂದ ಅಂಗನವಾಡಿಗೆ ಕೊಡುಗೆ

anganavaadi
Published on

ಮಡಿಕೇರಿ: ಭಾಗಮಂಡಲ ಗ್ರಾ.ಪಂನಿಂದ ೮ ಅಂಗನವಾಡಿ ಕೇಂದ್ರಗಳಿಗೆ ನೀರಿನ ಫಿಲ್ಟರ್, ಮಕ್ಕಳ ಕುರ್ಚಿ, ಮಕ್ಕಳ ಹಾಸಿಗೆ, ಚಾಪೆ, ಬೆಡ್ ಶೀಟ್‌ಗಳನ್ನು ವಿತರಿಸಲಾಯಿತು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಾಂಡ ಸವಿತ ಕೀರ್ತನ್ ಅವರು, ಕೆಲವು ದಿನಗಳ ಹಿಂದೆ ಕಾರ್ಯಕರ್ತೆಯರ ಮೂಲಕ ಕೇಂದ್ರಕ್ಕಾಗಿ ಬೇಡಿಕೆಗಳನ್ನು ಭಾಗಮಂಡಲ ಗ್ರಾಮ ಪಂಚಾಯತಿಗೆ ಸಲ್ಲಿಸಿದ್ದರು. ಈ ಹಿನ್ನೆಲೆ ಬೇಡಿಕೆಗೆ ಸ್ವಂದಿಸಿ ಭಾಗಮಂಡಲ, ತಾವೂರು-೧ ತಾವೂರು-೨, ಚೇರಂಗಾಲ-೧, ಚೇರಂಗಾಲ-೨, ಕೋರಂಗಾಲ, ತಲಕಾವೇರಿ, ತಣ್ಣಿಮಾನಿ ಸೇರಿದಂತೆ ೮ ಅಂಗನವಾಡಿ ಕೇಂದ್ರಗಳಿಗೆ ನೀರಿನ ಫಿಲ್ಟರ್, ಮಕ್ಕಳ ಕುರ್ಚಿ, ಮಕ್ಕಳ ಹಾಸಿಗೆ, ಚಾಪೆ, ಬೆಡ್ ಶೀಟ್ ವಿತರಿಸಲಾಯಿತು.

ಭಾಗಮಂಡಲ ಗ್ರಾ.ಪಂ ಅಧ್ಯಕ್ಷ ಕಾಳನ ಎ.ರವಿ ಮಾತನಾಡಿ, ಅಂಗನವಾಡಿ ಅಭಿವೃದ್ಧಿಗೆ ಸದಾ ಸಹಕರಿಸಲಾಗುವುದು. ಕೇಂದ್ರದ ಅಭಿವೃದ್ಧಿಗೆ ಪ್ರತಿಯೊಬ್ಬರು ಸೇರಿ ಶ್ರಮಿಸಬೇಕಾಗಿ ಕರೆನೀಡಿದರು.

ಕಾರ್ಯಕ್ರಮದಲ್ಲಿ ಭಾಗಮಂಡಲ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಗಂಗಮ್ಮ, ಸದಸ್ಯರಾದ ದಂಡಿನ ಜಯಂತ, ನಿತ್ಯಾನಂದ, ಸಿರಕಜೆ ನಾಗೇಶ್, ಪೆಮಿತಾ, ದುರ್ಗಾವತಿ, ಶಶಿಕಲಾ, ವೀಣಾ ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನಂದ, ಅಂಗನವಾಡಿ ಶಿಕ್ಷಕರಾದ ಶೋಭಾ, ಹೇಮಾವತಿ, ಉಮೈಮ, ಗೀತಾ, ಪ್ರಸದಿನಿ, ದೇವಿಕಾ, ರಕ್ಷಿತಾ, ಘನಶ್ರೀ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net