ಜಾತಿಮುಕ್ತ ಸಮಾಜಕ್ಕೆ ಕೊಡುಗೆ ಅಪಾರ

30 apr tnp 03
ತಿ.ನರಸೀಪುರ ಪುರಸಭೆ ಆವರಣದಲ್ಲಿ ಬುಧವಾರ ಶ್ರೀ ಬಸವ ಜಯಂತಿ ಆಚರಿಸಲಾಯಿತು. ಬಿ.ವಸಂತ ಶ್ರೀೀಕಂಠ, ಬಿ.ಕೆ. ವಸಂತಕುಮಾರಿ, ಸಿ.ಪ್ರಕಾಶ್, ಬಿ.ಮರಯ್ಯ, ಮಾದೇಶ್ ಇತರರು ಇದ್ದರು.
Published on

ತಿ.ನರಸೀಪುರ: ಕಾಯಕ ಮತ್ತು ದಾಸೋಹವನ್ನು ಪ್ರತಿಪಾದಿಸಿ, ವಚನಗಳ ಮೂಲಕ ಸಾಮಾಜಿಕ ಜಾಗೃತಿಯನ್ನು ಮೂಡಿಸಿ, ಜಾತಿಮುಕ್ತ ಸಮಾಜ ನಿರ್ಮಾಣದ ನಿಟ್ಟಿನಲ್ಲಿ ಬಸವಣ್ಣನವರ ಕೊಡುಗೆ ಅಪಾರ ಎಂದು ಪುರಸಭೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತುಂಬಲ ಸಿ.ಪ್ರಕಾಶ್ ಬಣ್ಣಿಸಿದರು.

ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಬಸಬಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ತ್ಯ ಕಾಯಕ ಹಾಗೂ ದಾಸೋಹದ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬರ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಾಗೃತಿ ಮೂಡಿಸಿದರು ಎಂದರು.

ಅಸಮಾನತೆಯ ಸಮಾಜದಲ್ಲಿ ಸುಧಾರಣೆಯಾಗಬೇಕು. ಧರ್ಮ ಮತ್ತು ಜಾತಿಯ ಕಟ್ಟುಪಾಡು ನಿವಾರಣೆಯಾಗಬೇಕೆಂದು ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಪಣತೂಟ್ಟರು. ಎಲ್ಲ ವರ್ಗದ ಜನರಿಗೂ ಲಿಂಗಧಾರಣೆ ಮಾಡುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಿದರು. ಅವರ ವಚನಗಳು ತತ್ವ ಸರ್ವಕಾಲಕ್ಕೂ ಅನ್ವಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಅವರ ಆದರ್ಶ, ವಚನ, ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸೌಹಾರ್ದ ಬದುಕು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಪುರಸಭೆ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ಬಸವಣ್ಣ, ಸದಸ್ಯರಾದ ಬಾದಮಿ ಮಂಜು, ಎಸ್.ಕೆ.ಕಿರಣ್, ಸಿದ್ದು, ಆರ್.ನಾಗರಾಜು, ಮುಖ್ಯಾಧಿಕಾರಿ ಬಿ.ಕೆ.ವಸಂತ ಕುಮಾರಿ, ವ್ಯವಸ್ಥಾಪಕ ಮಹೇಂದ್ರ, ಕಿರಿಯ ಅಭಿಯಂತರ ಸಿದ್ದಪ್ಪ, ಸಮುದಾಯ ಸಂಘಟಕ ಕೆ.ಮಹದೇವ, ಹಿರಿಯ ಆರೋಗ್ಯಾಧಿಕಾರಿ ಚಂಪಾ, ಆರ್.ಐ.ಅಶೋಕ್, ತ್ರಿವೇಣಿ, ರವಿ, ಶಿವಣ್ಣ, ಜಯಲಕ್ಷ್ಮೀ, ಚಂದ್ರು, ಮುಖಂಡರಾದ ಬಿ.ಮರಯ್ಯ, ಶ್ರೀಕಂಠ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net