

ಮೈಸೂರು: ಭಾರತದ ಪ್ರಮುಖ ಆಭರಣ ಸಂಸ್ಥೆಗಳಲ್ಲಿ ಒಂದಾದ ಜೋಸ್ ಆಲುಕ್ಕಾಸ್ ವತಿಯಿಂದ ಸಿಎಸ್‌ಆರ್ ಹಣದಲ್ಲಿ ಬಡಮಕ್ಕಳಿಗೆ ಆಟೋಟ ಮತ್ತಿತರ ಉಪಕರಣಗಳನ್ನು ನೀಡಲಾಯಿತು.
ಸಾಂಸ್ಕೃತಿಕ ನಗರಿ ಮೈಸೂರಿನ ಬಿ.ಎನ್.ರಸ್ತೆಯ ಜೋಸ್ ಆಲುಕ್ಕಾಸ್ ಜುವೆಲ್ಲರಿ ಮಳಿಗೆಯಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಗರದ ಶ್ರೀ ವಾಣಿ ವಿದ್ಯಾಮಂದಿರ ಶಾಲೆ ಹಾಗೂ ಚಾಮುಂಡಿ ಚಿಲ್ಡ್ರನ್ಸ್ ಹೋಂನ 50ಕ್ಕೂ ಹೆಚ್ಚು ಮಕ್ಕಳಿಗೆ ಚೆಸ್ ಬೋರ್ಡ್, ಕ್ರಿಕೆಟ್ ಬ್ಯಾಟ್, ಕ್ರಿಕೆಟ್ ಬಾಲ್, ಬಾಸ್ಕೆಟ್ ಬಾಲ್, ವಾಲಿಬಾಲ್ ಬಾಲ್, ಥ್ರೋ ಬಾಲ್, ಷಟಲ್ ಬ್ಯಾಡ್ಮಿಂಟನ್ ಬ್ಯಾಟ್, ಕೇರಂ ಬೋರ್ಡ್ ಸೇರಿದಂತೆ ಇತರ ಆಟೋಟ ಉಪಕರಣಗಳನ್ನು ನೀಡಲಾಯಿತು. ಜತೆಗೆ ಮಕ್ಕಳ ಅನುಕೂಲಕ್ಕಾಗಿ ಓದಲು ಟೇಬಲ್ ಸೇರಿದಂತೆ ಇತರ ಉಪಕರಣಗಳನ್ನು ನೀಡಲಾಯಿತು. ಜತೆಗೆ ಶ್ರೀ ವಾಣಿ ವಿದ್ಯಾಮಂದಿರ ಶಾಲೆಗೆ 52,430 ರೂ. ಹಾಗೂ ಚಾಮುಂಡಿ ಚಿಲ್ಡ್ರನ್ಸ್ ಹೋಂಗೆ 30 ಸಾವಿರ ರೂ. ಚೆಕ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಿಇಒ ರಾಮಾರಾಧ್ಯ ಮಾತನಾಡಿ, ಜೋಸ್ ಆಲುಕ್ಕಾಸ್ ಸಿಎಸ್‌ಆರ್ ಹಣದಲ್ಲಿ ಮಕ್ಕಳಿಗೆ ಅನುಕೂಲಕವಾಗುವ ಉಪಕರಣಗಳನ್ನು ನೀಡುತ್ತಿರುವುದು ಖುಷಿಯಾಗಿದೆ. ಅನೇಕ ಸಂಸ್ಥೆಗಳಿಗೆ ಇಂತಹ ಮನೋಭಾವ ಇರುವುದಿಲ್ಲ. ಆದರೆ, ಜೋಸ್ ಆಲುಕ್ಕಾಸ್ ಮಕ್ಕಳಲ್ಲಿ ವಿದ್ಯಾಭ್ಯಾಸ ಮತ್ತು ಕ್ರೀಡೆಯ ಆಸಕ್ತಿ ಹೆಚ್ಚಿಸಲು ಮುಂದಾಗಿದೆ ಎಂದರು.
ಬಿಆರ್‌ಸಿ ರಾಜಮ್ಮ, ಶ್ರೀ ವಾಣಿ ವಿದ್ಯಾಮಂದಿರದ ಕಾರ್ಯದರ್ಶಿ ಡಾ.ಎ.ಎಸ್.ಚಂದ್ರಶೇಖರ್, ಮುಖ್ಯಶಿಕ್ಷಕರಾದ ಸುಜಯಾ, ಪರಶುರಾಮ, ಜೋಸ್ ಆಲುಕ್ಕಾಸ್‌ನ ಏರಿಯಾ ಮ್ಯಾನೇಜರ್ ಬಿಜು, ಮಳಿಗೆಯ ಮುಖ್ಯಸ್ಥ ಸಿಯೋ, ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿ.ಎಸ್.ರಾಘವೇಂದ್ರ ಇತರರಿದ್ದರು. ಅತಿದೊಡ್ಡ ಚಿನ್ನಾಭರಣಗಳ ಸಂಸ್ಥೆಯಾಗಿರುವ ಇದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ಚಿನ್ನಾಭರಣ, ವಜ್ರ ಹಾಗೂ ಪ್ಲಾಟಿನಂಗಳನ್ನು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.