ಗ್ರಾಮೀಣ ಸೊಗಡಿನ ವೈಭವಕ್ಕೆ ಸಹಕಾರಿ

ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಜರತ್ ಸೈಯದ್ ಶಾ ಮೆಹಬೂಬ ಖಾದ್ರಿ ಗುರುಗಳು ಉದ್ಘಾಟಿಸಿದರು. ಪ್ರಮುಖರಾದ ಚಂದ್ರಗಿರಿಯಪ್ಪ, ನೀಲಪ್ಪ, ಹೊನ್ನಪ್ಪಗೌಡ, ಕನಕನಗೌಡ, ವಿಷ್ಣು, ಶಿವನಗೌಡ ಇತರರಿದ್ದರು.
ಅಳವಂಡಿ ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಜರತ್ ಸೈಯದ್ ಶಾ ಮೆಹಬೂಬ ಖಾದ್ರಿ ಗುರುಗಳು ಉದ್ಘಾಟಿಸಿದರು. ಪ್ರಮುಖರಾದ ಚಂದ್ರಗಿರಿಯಪ್ಪ, ನೀಲಪ್ಪ, ಹೊನ್ನಪ್ಪಗೌಡ, ಕನಕನಗೌಡ, ವಿಷ್ಣು, ಶಿವನಗೌಡ ಇತರರಿದ್ದರು.
Published on

ಅಳವಂಡಿ: ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು, ಸ್ಪರ್ಧಾ ಮನೋಭಾವ ಬೆಳೆಸಲು ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿಯಾಗಿವೆ ಎಂದು ಹಜರತ್ ಸೈಯದ್ ಶಾ ಮೆಹಬೂಬ ಖಾದ್ರಿ ಗುರುಗಳು ಹೇಳಿದರು.

ಸಮೀಪದ ಬೆಳಗಟ್ಟಿ ಗ್ರಾಮದಲ್ಲಿ ಶ್ರೀ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ ಲೋಕಾರ್ಪಣೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳು ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ವೈಭವ ಪ್ರದರ್ಶಿಸಲು ಹಾಗೂ ಉಳಿಸಲು ಸಹಕಾರಿಯಾಗಿವೆ. ಮಕ್ಕಳ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆಯಾಗಿದ್ದು, ಎಲ್ಲರೂ ಸದ್ಬಳಕೆ ಮಾಡಿಕೊಳ್ಳಿ ಎಂದರು.

ಜಾನಪದ ಸಾಹಿತಿ, ಶಿಕ್ಷಕ ನೀಲಪ್ಪ ಹಕ್ಕಂಡಿ ಮಾತನಾಡಿ, ಮೊಬೈಲ್ ಹಾವಳಿಯಿಂದ ಗ್ರಾಮೀಣ ಕಲೆಗಳು ನಶಿಸುತ್ತಿವೆ. ಮಕ್ಕಳು ಮೊಬೈಲ್ ಬಳಸುತ್ತಾ ಒಂಟಿತನ ಅನುಭವಿಸುತ್ತಿದ್ದು, ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಿವೆ. ಆದ್ದರಿಂದ ಪಾಲಕರು ಮಕ್ಕಳನ್ನು ಓದಿನತ್ತ ಚಿತ್ತ ಹರಿಸುವಂತೆ ಮಾಡಬೇಕು. ಸ್ಪರ್ಧೆ ಹಾಗೂ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕ ಚಂದ್ರಗಿರಿಯಪ್ಪ ಬೆಳಗಿ, ಪ್ರಮುಖರಾದ ಹೊನ್ನಪ್ಪಗೌಡ ಪಾಟೀಲ, ಕನಕನಗೌಡ, ವಿಷ್ಣು ಹಾಳಕೇರಿ, ಶಿವನಗೌಡ, ನಿಂಗಪ್ಪ, ಗುಡುಸಾಬ, ದೇವಪ್ಪ, ಗುಡದಪ್ಪ, ದೇವೇಂದ್ರ ಗೌಡ, ಬಸನಗೌಡ, ಮೋದಿನಸಾಬ, ಗುಡದನಗೌಡ, ಪಕೀರಗೌಡ, ಬಲವಂತ, ಗುಡದಪ್ಪ, ಜಗದೀಶ, ಈರಪ್ಪ, ಮುಸ್ತುಸಾಬ, ಸುರೇಶ, ರಾಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net