ಆರೋಗ್ಯ ಸಮಾಜ ನಿರ್ಮಾಣಕ್ಕೆ ಸಹಕಾರಿ

CLK TALAKU 19
Published on

ಚಳ್ಳಕೆರೆ: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯಗಳು ಆಧಾರ ಎನ್ನುವುದು ಸ್ಥಳೀಯ ಸಂಸ್ಥೆಗಳು ಅರಿತುಕೊಳ್ಳಬೇಕು ಎಂದು ತಾಲೂಕು ಪಂಚಾಯಿತಿ ಎಇಒ ಸಂಪತ್‌ಕುಮಾರ್ ಹೇಳಿದರು.

ಸ್ವಚ್ಛ ಭಾರತ್ ಮಷಿನ್ ಯೋಜನೆಯಡಿ ಗ್ರಾಪಂ ವತಿಯಿಂದ ತಳಕು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ನೈರ್ಮಲ್ಯ ಕಾಪಾಡಿ ಜಾಗೃತಿ ಜಾಥಾ ಮತ್ತು ಪಂಜಿನ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಪ್ರಗತಿ ಸಾಧ್ಯ. ಹಳ್ಳಿಗಳಲ್ಲಿ ಕಾಲರಾ ಮತ್ತು ರೋಗಬಾಧೆಗಳು ಕಾಡದಂತೆ ಸ್ವಚ್ಛತೆಗೆ ಸ್ಥಳೀಯ ಆಡಳಿತ ಆದ್ಯತೆ ನೀಡಬೇಕು. ಮನೆಯ ಸುತ್ತಮುತ್ತ ಮಳೆ ಮತ್ತು ಚರಂಡಿ ನೀರು ನಿಲ್ಲದಂತೆ ಜಾಗೃತಿ ವಹಿಸಬೇಕು. ರಸ್ತೆ ಮತ್ತು ಚರಂಡಿ ಸ್ವಚ್ಛತೆ ಕಾರ್ಯಕ್ಕೆ ಸಿಬ್ಬಂದಿ ಶ್ರಮಿಸಬೇಕಿದೆ ಎಂದರು.

ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ, ಉಪಾಧ್ಯಕ್ಷೆ ಉಮಾಕುಮಾರ್, ಅಭಿವೃದ್ದಿ ಅಧಿಕಾರಿ ಬಿ.ಸಿ.ಶಶಿರಾಜ್, ತಾಪಂ ವ್ಯವಸ್ಥಾಪಕ ದಿವಾಕರ್, ಅಂಗನವಾಡಿ ಇಲಾಖೆ ಮೇಲ್ವಿಚಾರಕಿ ಮಲಕಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net