

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್ ಆಲಗುಡ್ಡ ವತಿಯಿಂದ ಸ್ವಾತಂತ್ರೊೃೀತ್ಸವ ಸಂದರ್ಭ ಸಂಸ್ಥೆ ಮತ್ತು ದಾನಿಗಳ ಸಹಾಯದಿಂದ 1,30,000 ರೂ. ವೆಚ್ಚದ ಎಂಟು ಮೇಜು ಹಾಗೂ ಎಂಟು ಕುರ್ಚಿಯನ್ನು ಕೋಡಿಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹಾಗೂ ಶ್ರೀನಿವಾಸ ಪಾಠಶಾಲ ಓರಿಯೆಂಟಲ್ ಪ್ರೌಢಶಾಲೆಗೆ ಮಂಗಳೂರು ನಾಲ್ಕು ಕಂಪ್ಯೂಟರ್ ಟೇಬಲ್‌ಗಳನ್ನು ಇತ್ತೀಚೆಗೆ ವಿತರಿಸಲಾಯಿತು.
ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ರವಿಪ್ರಸಾದ್ ಶೆಟ್ಟಿಗಾರ್, ಗೌರವಾಧ್ಯಕ್ಷ ಶೀನ ನಾಯ್ಕ, ಮಾಜಿ ಅಧ್ಯಕ್ಷರಾದ ದಿನೇಶ್ ಕೋಡಿಕಲ್, ಶಿವಪ್ರಸಾದ್ ಶೆಟ್ಟಿ, ರಾಜೇಶ್ ಸಾಲಿಯಾನ್, ಸಂತೋಷ್ ಕೋಡಿಕಲ್, ರಾಜೇಶ್ ಕುಡ್ಲ, ಹರೀಶ್ ಕೋಡಿಕಲ್ ಹಾಗೂ ಸಂಸ್ಥೆಯ ಸದಸ್ಯರು ಮತ್ತು ಪದಾಧಿಕಾರಿಗಳು, ಪ್ರಮುಖರಾದ ಪುರುಷೋತ್ತಮ್ ಕುಲಾಲ್ ಕಲ್ಬಾವಿ ಹಾಗೂ ಮಹಾಬಲ ಚೌಟ ಮತ್ತು ಕೋಡಿಕಲ್ ಶಾಲೆಯ ಮುಖ್ಯ ಶಿಕ್ಷಕ ನಿತ್ಯಾನಂದ ಉಪಸ್ಥಿತರಿದ್ದರು.