ಉತ್ತಮ ಪ್ರಜೆಗಳಾಗಿ ಒಳ್ಳೆ ಕೊಡುಗೆ ನೀಡಿ

3 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕ್ರೀಡೆಯ ಜತೆಗೆ ವಿದ್ಯಾಭ್ಯಾಸಕ್ಕೂ ಮಹತ್ವ ನೀಡಿ ಉತ್ತಮ ಕ್ರೀಡಾಪಟುಗಳಾಗಬೇಕು. ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಒಳ್ಳೆ ಕೊಡುಗೆಗಳನ್ನು ನೀಡಬೇಕು ಎಂದು ವೇಮನ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಆರ್​.ಕೆ. ಪಾಟೀಲ ಹೇಳಿದರು.
ನಗರದ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಶಹರ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಥ್ರೋಬಾಲ್​ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರೀಡಾ ಮನೋಭಾವನೆಯಿಂದ ಕ್ರೀಡೆಯಲ್ಲಿ ಭಾಗವಹಿಸಿ ನಿರ್ಣಾಯಕರ ನಿರ್ಣಯಗಳಿಗೆ ಗೌರವ ಕೊಟ್ಟು ಪಂದ್ಯಾವಳಿ ಯಶಸ್ವಿಗೊಳಿಸಿ ಎಂದರು.
ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದ ಉಪ ನಿರ್ದೇಶಕ ಕೆ.ಪಿ. ಸುರೇಶ ಮಾತನಾಡಿ, ಧಾರವಾಡವು ವಿದ್ಯಾಕಾಶಿ ಎನಿಸಿಕೊಂಡಿದೆ. ವಿದ್ಯೆಯೊಂದಿಗೆ ಕ್ರೀಡೆಗೂ ಮಹತ್ವ ನೀಡಬೇಕು ಎಂದರು.
ಯು.ಎನ್​. ಹಜಾರೆ ಮಾತನಾಡಿದರು. ಕೆ.ವಿ. ತಿಮ್ಮಾಪುರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಗೌರವಾಧ್ಯಕ್ಷ ಎಸ್​.ಬಿ. ಮುದಿಗೌಡರ, ಕಾರ್ಯಾಧ್ಯಕ್ಷ ಕೆ.ಎಸ್​. ಪಾಟೀಲ, ಪುಷ್ಪಾ ಯಮನೂರ, ಡಾ.ಎಸ್​.ಎಚ್​. ಪಾಟೀಲ, ಬಿ.ವಿ. ನಾಡಗೌಡರ, ಎ.ಜಿ. ಮುಳ್ಳೂರ, ಇತರರು ಇದ್ದರು.
ಎಸ್​.ಎ. ಕುರಿ ಸ್ವಾಗತಿಸಿದರು. ಡಿ.ವಿ.ಪಟ್ಟಣ ನಿರೂಪಿಸಿದರು. ಎಚ್​.ಬಿ. ಬ್ಯಾಡಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net