ನೀರಿನ ಮಿತ ಬಳಕೆಗೆ ಸಹಕರಿಸಿ

18KDR1 (1)
ಕಡೂರಿನ ಕೆ. ದಾಸರಹಳ್ಳಿ ಗ್ರಾಮದಲ್ಲಿ ಶುದ್ದಗಂಗಾ ಘಟಕಕ್ಕೆ ಜಿಲ್ಲಾ ನಿರ್ದೇಶಕ ಪ್ರಕಾಶ್ ರಾವ್ ಚಾಲನೆ ನೀಡಿದರು. ಸಂಜೀವ್‌ಗೌಡ, ಶೇಖರ್ ಮತ್ತಿತರಿದ್ದರು.
Published on

ಕಡೂರು: ನೀರು ಅಮೂಲ್ಯ ಸಂಪತ್ತಾಗಿದ್ದು, ಮಳೆ ಅಭಾವ ಮತ್ತು ಬರದ ಛಾಯೆಯಿಂದ ನೀರಿನ ಅವಶ್ಯತೆ ಹೆಚ್ಚಾಗಿದೆ. ನೀರಿನ ಮಿತ ಬಳಕೆಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಯೋಜನೆ ಜಿಲ್ಲಾ ನಿರ್ದೇಶಕ ಪ್ರಕಾಶ್‌ರಾವ್ ಹೇಳಿದರು.
ತಾಲೂಕಿನ ಕೆ.ದಾಸರಹಳ್ಳಿ ಗ್ರಾಮದಲ್ಲಿ ಯೋಜನೆಯಿಂದ ಸೋಮವಾರ 503ನೇ ಶುದ್ದಗಂಗಾ ಘಟಕಕ್ಕೆ ಚಾಲನೆ ಮಾಡಿ ಮಾತನಾಡಿ, ಬೇಸಿಗೆ ದಿನಗಳಲ್ಲಿ ನೀರಿನ ಅಭಾವ ಹೆಚ್ಚಾಗುತ್ತಿದೆ. ಶುದ್ದಕುಡಿಯುವ ನೀರನ್ನು ಯೋಜನೆಯಿಂದ ಒದಗಿಸಬೇಕೆಂಬ ಸಂಕಲ್ಪದಿಂದ ಗ್ರಾಮದಲ್ಲಿ 503ನೇ ಘಟಕ ಪ್ರಾರಂಭಿಸಲಾಗಿದೆ. ಗ್ರಾಮಸ್ಥರು ನೀರನ್ನು ಮಿತ ಬಳಕೆ ಜತೆಗೆ ಜಲಸಂರಕ್ಷಣೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದರು.
ಅಜ್ಜಂಪುರ ತಾಲೂಕು ಯೋಜನಾಧಿಕಾರಿ ಸಂಜೀವ್‌ಗೌಡ, ಗ್ರಾಪಂ ಅಧ್ಯಕ್ಷ ಶೇಖರ್, ಗ್ರಾಮದ ಮುಖಂಡರು ಹಾಗೂ ಹಿರೇನಲ್ಲೂರು ವಲಯದ ಮೇಲ್ವಿಚಾರಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net