ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಮ್ಮೇಳನ ಯಶಸ್ವಿಗೆ ಸಹಕರಿಸಿ

lkp 8-2 visit
ಲೋಕಾಪುರ ಪಟ್ಟಣದ ರಾಘವೇಂದ್ರ ಕಲ್ಯಾಣ ಮಂಟಪದ ಕಾಮಗಾರಿಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ಅಶೋಕ ಹಾರನಹಳ್ಳಿ ವೀಕ್ಷಿಸಿದರು. ಬಿ.ಜಿ. ಜೋಶಿ, ಕೃಷ್ಣಾಜಿ ಕುಲಕರ್ಣಿ, ಗೋಪಾಲರಾವ ದೇಶಪಾಂಡೆ ಇದ್ದರು.
Published on

ಲೋಕಾಪುರ: ಬರುವ ಜನವರಿ 18,19 ರಂದು 11ನೇ ಬ್ರಾಹ್ಮಣ ಮಹಾ ಸಮ್ಮೇಳನ ನಡೆಯಲಿದ್ದು, ಕಾರ್ಯಕ್ರಮ ಯಶಸ್ವಿಗೆ ಎಲ್ಲ ವಿಪ್ರ ಸಮಾಜದವವರು ಶ್ರಮಿಸಬೇಕೆಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾಧ್ಯಕ್ಷ ಅಶೋಕ ಹಾರನಹಳ್ಳಿ ಮನವಿ ಮಾಡಿದರು.

ಪಟ್ಟಣದ ರಾಘವೇಂದ್ರ ಮಠಕ್ಕೆ ಭಾನುವಾರ ಭೇಟಿ ನೀಡಿ ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಿಸಿ ಸಮ್ಮೇಳನದ ಆಮಂತ್ರಣ ಪತ್ರಿಕೆ ವಿತರಿಸಿ ಅವರು ಮಾತನಾಡಿದರು.

ಬ್ರಾಹ್ಮಣ ಸಮಾಜದವರು ಮೊದಲು ಧರ್ಮ ಅರಿತು ಇತರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು. ಆಗ ಇತರ ಸಮಾಜದವರು ಬ್ರಾಹ್ಮಣರನ್ನು ಕೀಳಾಗಿ ಕಾಣುವ ಪ್ರಮೇಯವೇ ಬರುವುದಿಲ್ಲ, ಅಲ್ಲದೇ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದನ್ನು ಕಲಿತುಕೊಳ್ಳಬೇಕೆಂದರಲ್ಲದೆ, ಹೆಚ್ಚಿನ ಸಂಖ್ಯೆಯಲ್ಲಿ ಸಮ್ಮೇಳನದಲ್ಲಿ ಭಾಗವಹಿಸಬೇಕೆಂದು ತಿಳಿಸಿದರು.

ಸಮ್ಮೇಳನಕ್ಕೆ ಬರುವ ವಿಪ್ರ ಸಮಾಜ ಬಾಂಧವರಿಗೆ ಎಲ್ಲ ಸೌಕರ್ಯ ನೀಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ತಿಳಿಸಿದರು. ನಂತರ ರಾಘವೇಂದ್ರ ಕಲ್ಯಾಣ ಮಂಟಪದ ಕಾಮಗಾರಿ ವೀಕ್ಷಿಸಿ ಕಾಮಗಾರಿಗೆ 2 ಲಕ್ಷ ರೂಗಳ ಅನುದಾನ ನೀಡಲು ಸಮ್ಮತಿಸಿದರು.

ಮಹಾಸಭಾ ವಿಪ್ರ ಸಮಾವೇಶದ ರಾಜ್ಯ ಪ್ರಧಾನ ಸಂಚಾಲಕಾರದ ವಿಜಯೇಂದ್ರ ನಾಡಜೋಶಿ, ಸುಧಾಕರ ಬಾಬು, ಕಾರ್ತಿಕ ಬಾಪಟ, ವೆಂಕಟೇಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಬಿ.ಜಿ. ಜೋಶಿ, ಬಿ.ಎಲ್. ಬಬಲಾದಿ, ಬಿ.ಡಿ. ಚಿನಗುಂಡಿ, ಕೃಷ್ಣಾಜಿ ಕುಲಕರ್ಣಿ, ಪ್ರವೀಣ ಸೋಮಾಪುರ, ಆನಂದಚಾರ್ಯ ಜಂಬಗಿ, ಗೋಪಾಲರಾವ ದೇಶಪಾಂಡೆ, ವಿಪ್ರ ಸಮಾಜಬಾಂಧವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net