

ಮುಂಡರಗಿ: ಜಗತ್ತಿನಲ್ಲಿ ಟಿ.ವಿ.ಇಲ್ಲದೆ ಬದುಕು ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಬಿಡುವಿನ ಸಮಯದಲ್ಲಿ ಮನರಂಜನೆ ಸೇರಿ ಇಂದಿನ ವಿದ್ಯಮಾನಗಳನ್ನು ತಿಳಿಯಲು ಟಿ.ವಿ. ಉತ್ತಮ ಸಾಧನವಾಗಿದೆ. ರಾಜ್ಯಾದ್ಯಂತ ಗ್ರಾಹಕರು ಕೇಬಲ್ ಸೆಟ್‌ಆಫ್ ಬಾಕ್ಸ್ ಹಾಕಿಸಿಕೊಂಡು ಕೇಬಲ್ ಉದ್ಯಮ ಉಳಿಸಲು ಸಹಕಾರ ನೀಡಬೇಕು ಎಂದು ತಾಲೂಕು ಟಿ.ವಿ. ಕೇಬಲ್ ಆಪರೇಟರ್ ಸಂಘದ ಅಧ್ಯಕ್ಷ ಸಿ.ಎಂ. ಹಿರೇಮಠ ಹೇಳಿದರು.
ಪಟ್ಟಣದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ತಾಲೂಕು ಟಿ.ವಿ. ಕೇಬಲ್ ಆಪರೇಟರ್ ಸಂಘದ ವತಿಯಿಂದ 23ನೇ ಕೇಬಲ್ ದಿನಾಚರಣೆ ಅಂಗವಾಗಿ ಸೋಮವಾರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲೂಕು ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮಣ ಪೂಜಾರ, ಸಂಘದ ಜಿಲ್ಲಾಧ್ಯಕ್ಷ ಎಂ.ಬಿ. ತಾಂಬೋಟಿ, ಜಿಲ್ಲಾ ಕಾರ್ಯದರ್ಶಿ ಎಂ.ಟಿ. ದೊಡ್ಡಮನಿ, ತಾಲೂಕು ಪ್ರಧಾನ ಕಾರ್ಯದರ್ಶಿ ಗಣೇಶ ಹಾತಲಗೇರಿ, ರಮೇಶ ಹುಳಕಣ್ಣವರ, ಬಸನಗೌಡ ಪಾಟೀಲ, ಶಂಭು ಕರಡಕಲ್, ಯಲ್ಲಪ್ಪ ಸಂಕಣ್ಣವರ, ಶಂಕರ ಹಲವಾಗಲಿ, ಗೋಪಿ ಮೇಸ್ತ್ರಿ, ಮಾಬುಸಾಬ ಹರ್ಲಾಪುರ, ಚನ್ನಪ್ಪ ಚಿಕ್ಕನಕೊಪ್ಪ, ಅಂದಪ್ಪ ಸಂಗನಾಳ, ಹುಸೇನ ಹೊಸಮನಿ, ಪ್ರಶಾಂತ ಕಟಂಬಲ್ಲಿ, ಶರಣಯ್ಯ ಹಿರೇಮಠ, ನಾಗರಾಜ ಪೂಜಾರ, ರಾಜೇಶ ಬರದೂರ, ರಮೇಶ ನವಲಗುಂದ, ಬಸವರಾಜ ಗಡಾದ, ಮಾಬುಸಾಬ ಸರಕವಾಸ ಇತರರು ಇದ್ದರು.