ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಸಹಕರಿಸಿ

09.Pyp. 01..
ಪಿರಿಯಾಪಟ್ಟಣದ ಕೊಡಗು ಗೌಡ ಸಮಾಜದ ಸಮುದಾಯ ಭವನದಲ್ಲಿ ಆಯೋಜಿಸಿದ್ದ 32ನೇ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಪೊಕ್ಕಳಂಡ್ರ ವಸಂತ್ ಕುಮಾರ್ ಮಾತನಾಡಿದರು. ಜೋಯಪ್ಪ, ಪೂಜಾರಿ ರವಿ, ನಿಡ್ಯಮಲೆ ಪೂಣಚ್ಚ , ಕರೆಮನೆ ವಿಠಲ, ಕುಯ್ಯುಮುಡಿ ಬೋಜಪ್ಪ ಇತರರಿದ್ದರು.
Published on

ಪಿರಿಯಾಪಟ್ಟಣ: ತಾಲೂಕಿನಲ್ಲಿ ಕೊಡಗು ಗೌಡ ಸಮಾಜದ ಅಭಿವೃದ್ಧಿಗೆ ಪ್ರತಿಯೊಬ್ಬರು ಸಹಕಾರ ನೀಡಿ ಕೈಜೋಡಿಸಬೇಕು ಎಂದು ಸಮಾಜದ ಅಧ್ಯಕ್ಷ ಪೊಕ್ಕಳಂಡ್ರ ವಸಂತ್ ಕುಮಾರ್ ತಿಳಿಸಿದರು.

ಪಟ್ಟಣದ ಕೊಡಗು ಗೌಡ ಸಮಾಜದ ಸಮುದಾಯ ಭವನದಲ್ಲಿ ಭಾನುವಾರ ನಡೆದ 2024-25 ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ತಾಲೂಕಿನಲ್ಲಿ ಕೊಡಗು ಗೌಡ ಸಮಾಜದ ಸಮುದಾಯ ಭವನ ನೋಂದಣಿಯಾಗಿ 35 ವರ್ಷಗಳು ಕಳೆದಿವೆ. ಆದರೆ ಪಟ್ಟಣದಲ್ಲಿ ನಮ್ಮ ಸಮಾಜಕ್ಕೆ ಪ್ರತ್ಯೇಕ ಸ್ಮಶಾನಕ್ಕೆ ಜಾಗ ಇಲ್ಲದಿರುವುದು ಬೇಸರದ ವಿಷಯವಾಗಿದೆ. ಪಟ್ಟಣದ ಆಸುಪಾಸಿನಲ್ಲಿ ನಮ್ಮ ಸಮಾಜದ ವತಿಯಿಂದ ಸೂಕ್ತ ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ಮೀಸಲಿಡಬೇಕಿದೆ ಎಂದರು.

ನಮ್ಮ ಕೊಡಗು ಗೌಡ ಸಮಾಜಕ್ಕೆ ಪಿರಿಯಾಪಟ್ಟಣ, ಹುಣಸೂರು ಹಾಗೂ ಎಚ್.ಡಿ.ಕೋಟೆ ತಾಲೂಕಿನಲ್ಲಿ ವಾಸವಿರುವವರಿಗೆ ಸದಸ್ಯತ್ವವನ್ನು ನೀಡಿದ್ದು, ಇನ್ನು ಕೆಲವರು ಇದುವರೆಗೂ ಸದಸ್ಯತ್ವ ಪಡೆದಿಲ್ಲ. ನಮ್ಮ ಸಮಾಜದ ಅಭಿವೃದ್ಧಿ ಮತ್ತು ನಮ್ಮ ಸಮುದಾಯ ಭವನವನ್ನು ಉನ್ನತೀಕರಣಗೊಳಿಸಲು ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಸದಸ್ಯತ್ವ ಪಡೆದುಕೊಳ್ಳಬೇಕು. ನಮ್ಮ ಕೊಡಗು ಗೌಡ ಸಮಾಜದ ಸಮುದಾಯ ಭವನ ನಿವ್ವಳ ಲಾಭ ಹೊಂದಿದೆ ಎಂದು ತಿಳಿಸಿದರು.

ಸರ್ಕಾರದ ವತಿಯಿಂದ ಕೆಲವೊಂದು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ, ಅದರಲ್ಲೂ ಸಹ ನಮ್ಮ ಸಮುದಾಯದ ಜನಾಂಗದ ಸದಸ್ಯರು ಭಾಗವಹಿಸಬಹುದು. ನಮ್ಮ ಸಮಾಜದ ಜನಾಂಗವನ್ನು ಸರ್ಕಾರದ ವತಿಯಿಂದ ಗುರುತಿಸುವ ರೀತಿಯಲ್ಲಿ ಪ್ರತಿಯೊಬ್ಬರು ಕಾರ್ಯಕ್ರಮಗಳಿಗೆ ಭಾಗವಹಿಸಿ ಯಶಸ್ವಿಗೊಳಿಸಬೇಕು. ಹಬ್ಬದ ಪ್ರಯುಕ್ತ ಅಥವಾ ವಾರ್ಷಿಕ ಮಹಾಸಭೆಯ ಪ್ರಯುಕ್ತ ನಡೆಯುವಂತಹ ಕ್ರೀಡಾಕೂಟ, ಮನರಂಜನೆಯ ಆಟೋಟ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರತಿಯೊಬ್ಬರೂ ಸಹ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು.

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಕಳೆದ ಸಾಲಿನಲ್ಲಿ ಮೃತಪಟ್ಟ ಸಮಾಜ ಸದಸ್ಯರಿಗೆ ಸಂತಾಪ ಸಲ್ಲಿಸಲಾಯಿತು.

ಉಪಾಧ್ಯಕ್ಷ ಆರಂಬೂರು ಜೋಯಪ್ಪ, ಕಾರ್ಯದರ್ಶಿ ಪೂಜಾರಿ ರವಿ, ಜಂಟಿ ಕಾರ್ಯದರ್ಶಿ ನಿಡ್ಯಮಲೆ ಪೂಣಚ್ಚ , ಖಜಾಂಚಿ ಕರೆಮನೆ ವಿಠಲ, ನಿರ್ದೇಶಕರುಗಳಾದ ಕುಯ್ಯುಮುಡಿ ಬೋಜಪ್ಪ, ಪರಿವಾರನ ಮೋಹನ್ ಕುಮಾರ್, ಕೂರನ ಪೂಣಚ್ಚ, ಪೆಮ್ಮಟೆ ರಘುನಾಥ್, ಸೂದನ ಸುನಂದ, ಕೂಡಕಂಡಿ ಜಗದೀಶ್ ಕುಮಾರ್, ಕೋಲ್ಪೆ ದೇವಕಿ ಪ್ರಭಾಕರ್, ಬೆಳ್ಳಿಯಂಡ್ರ ಭಾಗ್ಯಲಕ್ಷ್ಮಿ ಪೊನ್ನು, ಕುಯ್ಯಮುಡಿ ಅಶ್ವಿನಿ ಕುಮಾರ್, ಸಮಾಜದ ಮ್ಯಾನೇಜರ್ ಪೆಮ್ಮಟೆ ಅರುಣ ಹಾಗೂ ಕೊಡಗು ಗೌಡ ಜನಾಂಗದ ಸದಸ್ಯರು ಮತ್ತು ಕುಟುಂಬ ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net