ಲೋಕಾಪುರ ಪಟ್ಟಣ ಅಭಿವೃದ್ಧಿಗೆ ಸಹಕರಿಸಿ

Contribute to the development of Lokapura town
ಲೋಕಾಪುರ ಪಪಂ ನೂತನ ಮುಖ್ಯಾಧಿಕಾರಿ ಸಾಬಣ್ಣ ಪೂಜಾರಿ ಅವರನ್ನು ಪಟ್ಟಣದ ನುಲಿಚಂದಯ್ಯ ಕೊರಮ (ಭಜಂತ್ರಿ) ಸಮುದಾಯ ಕ್ಷೇಮಾಭಿವದ್ಧಿ ಸಂಘದ ಸರ್ವ ಪದಾಧಿಕಾರಿಗಳು ಸನ್ಮಾನಿಸಿದರು.
Published on

ಲೋಕಾಪುರ : ಪಟ್ಟಣ ಪಂಚಾಯಿತಿ ನೂತನ ಮುಖ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಸಾಬಣ್ಣ ಪೂಜಾರಿ ಅವರನ್ನು ಪಟ್ಟಣದ ನುಲಿಚಂದಯ್ಯ ಕೊರಮ (ಭಜಂತ್ರಿ) ಸಮುದಾಯ ಕ್ಷೇಮಾಭಿವದ್ಧಿ ಸಂಘದ ಸರ್ವ ಪದಾಧಿಕಾರಿಗಳು ಸನ್ಮಾನಿಸಿದರು.

ನಂತರ ಪ.ಪಂ. ನೂತನ ಮುಖ್ಯಾಧಿಕಾರಿ ಸಾಬಣ್ಣ ಪೂಜಾರಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲೋಕಾಪುರ ಪಟ್ಟಣ ಪಂಚಾಯಿತಿ ಸರ್ವ ರೀತಿಯಿಂದಲೂ ಅಭಿವೃದ್ಧಿ ಸಲುವಾಗಿ ಸರ್ಕಾರದ ಅನುದಾನ ಸದ್ಬಳಕೆಯಿಂದ ಆದಾಯ ಮೂಲಗಳನ್ನು ಹೆಚ್ಚಿಸಿಕೊಂಡು ಮಾದರಿ ಪಟ್ಟಣವನ್ನಾಗಿ ರೂಪಿಸುವಲ್ಲಿ ಪಟ್ಟಣದ ಸಮಸ್ತ ನಾಗರಿಕರು, ಎಲ್ಲ ಸಿಬ್ಬಂದಿ ವರ್ಗ ಸಹಕಾರ ಕೊಡಬೇಕೆಂದು ಸಲಹೆ ನೀಡಿದರು.

ಭಜಂತ್ರಿ ಸಮುದಾಯದ ಅಧ್ಯಕ್ಷ ಸಾಬಣ್ಣ ಭಜಂತ್ರಿ, ಬಸಪ್ಪ ಭಜಂತ್ರಿ, ಹಣಮಂತ ಭಜಂತ್ರಿ, ಬಾಲಪ್ಪ ಭಜಂತ್ರಿ, ಹೆಬ್ಬಾಳೆಪ್ಪ ಭಜಂತ್ರಿ, ಕಷ್ಣಾ ಭಜಂತ್ರಿ, ಡಾ. ಲೋಕಣ್ಣ ಭಜಂತ್ರಿ, ದುರ್ಗಣ್ಣ ಭಜಂತ್ರಿ ಹಾಗೂ ಭಜಂತ್ರಿ ಸಮುದಾಯದ ಹಿರಿಯರು, ಯುವಕರು, ಪ.ಪಂ. ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net