

ಹಾನಗಲ್ಲ: ಬಾಬು ಜಗಜೀವನರಾಂ ಜಯಂತಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಎಲ್ಲರ ಸಹಕಾರ ಅತ್ಯಗತ್ಯ ಎಂದು ತಾಲೂಕು ತಹಸೀಲ್ದಾರ್ ಎಸ್. ರೇಣುಕಾ ಮನವಿ ಮಾಡಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ, ತಹಸೀಲ್ದಾರ್ ಎಸ್. ರೇಣುಕಾ ಅವರು ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಏ. 14ರಂದು ಬಾಬು ಜಗಜೀವನರಾಮ್ ಹಾಗೂ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು ಇರಲಿವೆ. ತಾಪಂ ಆವರಣದಲ್ಲಿರುವ ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಗುವುದು. ಮೆರವಣಿಗೆ ಬಳಿಕ ಪಟ್ಟಣದ ಬಿ.ಆರ್. ಅಂಬೇಡ್ಕರ್ ಭವವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಚಂದ್ರಪ್ಪ ಹರಿಜನ, ರಾಜಕುಮಾರ ಶಿರಪಂತಿ, ಉಮೇಶ ಮಾಳಗಿ, ಉಮೇಶ ದೊಡ್ಡಮನಿ, ನಿಂಗಪ್ಪ ಕಾಳೇರ, ಶಿವು ಭದ್ರಾವತಿ, ಪುಟ್ಟಪ್ಪ ಹರಿಜನ, ಸುರೇಶ ನಾಗಣ್ಣನವರ, ಬಸವರಾಜ ಮಣ್ಣಮ್ಮನವರ, ಸಿದ್ದಲಿಂಗಪ್ಪ ಕಾಳೇರ, ಪವನ ಗಜಾಕೋಶ, ಸುರೇಶ ಹರಿಜನ, ಮಾಲತೇಶ ಕಾಳೇರ, ಸಿದ್ದಲಿಂಗಪ್ಪ ಮಾದರ, ಇತರರಿದ್ದರು.