

ಎನ್.ಆರ್.ಪುರ: ಅಂದಿನ ಕಾಲದಲ್ಲೇ ಸಾರ್ವಜನಿಕ ಶೌಚಗೃಹ ಸ್ವಚ್ಛ ಮಾಡುವ ಮೂಲಕ ಸ್ವಚ್ಛ ಭಾರತ ಕಲ್ಪನೆ ಮೂಡಿಸಿದ್ದರು ಎಂದು ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ಡಿ.ರಾಜೇಗೌಡ ತಿಳಿಸಿದರು.
ಅಗ್ರಹಾರದ ಉಮಾ ಮಹೇಶ್ವರ ಸಭಾ ಭವನದಲ್ಲಿ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ನಡೆದ 155ನೇ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮಗಳು ಅಭಿವೃದ್ಧಿಯಾದರೆ ಭಾರತ ದೇಶ ಅಭಿವೃದ್ಧಿಯಾಗುತ್ತದೆ ಎಂದು ಗಾಂಧೀಜಿ ಪ್ರಬಲವಾಗಿ ನಂಬಿದ್ದರು. ಇಂದು ಭಾರತ ದೇಶ ಪ್ರಪಂಚದಲ್ಲೇ ಬಲಿಷ್ಠ ರಾಷ್ಟ್ರೀವಾಗಲು ಗಾಂಧೀಜಿ ಅವರು ಪ್ರತಿಪಾದಿಸಿದ್ದ ಗ್ರಾಮೀಣ ಅಭಿವೃದ್ಧಿಯೇ ಕಾರಣವಾಗಿದೆ ಎಂದರು.
ಲಾಲ್ ಬಹುದ್ದೂರ್ ಶಾಸ್ತ್ರಿ ಅವರು ಭಾರತ ಸೈನಿಕರನ್ನು ಜೈ ಜವಾನ್ ಜೈ ಕಿಸಾನ್ ಎಂದು ಹೇಳುವ ಮೂಲಕ ಭಾರತದ ರೈತರಿಗೆ ಸ್ಫೂರ್ತಿ ತುಂಬಿದ್ದರು. ಈಗ ಇಡೀ ಪ್ರಪಂಚವೇ ಭಾರತ ದೇಶದತ್ತ ತಿರುಗಿ ನೋಡುತ್ತಿದೆ. ವಿದೇಶಗಳು ಭಾರತವನ್ನು ಅನುಸರಿಸುತ್ತಿದೆ. ದಕ್ಷಿಣ ಆಫ್ರಿಕಾದಲ್ಲೂ ಗಾಂಧಿ ಪ್ರತಿಮೆ ಸ್ಥಾಪಿಸಿ ಅಲ್ಲೂ ಗಾಂಧಿ ತತ್ವ ಅನುಸರಿಸಲಾಗುತ್ತಿದೆ ಎಂದರು.
ತಾಲೂಕು ಬಗರ್‌ಹುಕಂ ಸಮಿತಿ ಸದಸ್ಯ ಇ.ಸಿ.ಜೋಯಿ, ಮುಖಂಡರಾದ ಎಂ.ಮಹೇಶ್, ಪ್ರಶಾಂತ ಶೆಟ್ಟಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲು ನಟರಾಜ,ನಗರ ಅಧ್ಯಕ್ಷ ಬಿಳಾಲು ಮನೆ ಉಪೇಂದ್ರ, ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್, ಕೆ.ಎ.ಅಬೂಬಕರ್, ಪಪಂ ಅಧ್ಯಕ್ಷೆ ಸುರೈಯಾಭಾನು, ಮುಖಂಡರಾದ ಕೆ.ಎಂ.ಸುಂದರೇಶ್, ಬಿನು, ಕೈಮರ ಸಾಜು, ಉಮಾ ಕೇಶವ್, ಶೈಲಾ ಮಹೇಶ್, ರತ್ನಮ್ಮ, ಮಾಳೂರು ದಿಣ್ಣೆ ರಮೇಶ್, ಅಂಜುಂ, ಸಮೀರ ನಹೀಂ, ರವಿಶಂಕರ್, ವಸೀಂ, ದೇವಂತರಾಜ್, ಕುಮಾರಸ್ವಾಮಿ ಮತ್ತಿತರರು ಇದ್ದರು.