ಶಾಂತಿ ಸುವ್ಯವಸ್ಥೆಗೆ ಸಹಕಾರ ನೀಡಿ

FotoJet
Published on

ಗಣೇಶ ಪ್ರತಿಷ್ಠಾಪನೆಗೆ ನಿಯಮ ಪಾಲನೆ ಕಡ್ಡಾಯ
ತಹಸೀಲ್ದಾರ್ ಅಮೃತ್‌ಆತ್ರೇಶ್ ಸೂಚನೆ

ನೆಲಮಂಗಲ: ಗಣೇಶ ಪ್ರತಿಷ್ಠಾಪನೆ ವಿಚಾರದಲ್ಲಿ ಸರ್ಕಾರ ರೂಪಿಸಿರುವ ನಿಯಮಗಳ ಪಾಲನೆ ಮಾಡಿ ಶಾಂತಿ ಸುವ್ಯವಸ್ಥೆಗೆ ಸಹಕಾರ ನೀಡಬೇಕಿದೆ ತಹಸೀಲ್ದಾರ್ ಅಮೃತ್‌ಆತ್ರೇಶ್ ತಿಳಿಸಿದರು.
ಗೌರಿ, ಗಣೇಶ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕು ಕಚೇರಿ ಸಭಾಂಗಣದಲ್ಲಿ
ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪ್ರತಿವರ್ಷ ಗಣೇಶ ಪ್ರತಿಷ್ಠಾಪನೆ ಮಾಡುವುದು ವಾಡಿಕೆ, ಸ್ವಾತಂತ್ರ್ಯ ಚಳವಳಿಯ ಕಾಲದಲ್ಲಿ ಭಾರತೀಯರ ಒಗ್ಗಟ್ಟಿನ ಸಂಖೇತವಾಗಿ ಆರಂಭಗೊಂಡ ಗಣೇಶ ಚರ್ತುರ್ಥಿ ದೇಶೆದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಗಣೇಶ ಹಬ್ಬ ಆಚರಣೆ ಬಳಿಕ ಮೊಹರಂ ಹಬ್ಬವೂ ಬಂದಿದ್ದು, ಶಾಂತಿಯಿಂದ ಆಚರಣೆ ಮಾಡಬೇಕಿದೆ ಎಂದರು.
ಗಣೇಶ ವಿಸರ್ಜನೆ ವೇಳೆ ಮದ್ಯಸೇವನೆ ಮಾಡಿ ಅಸಭ್ಯವಾಗಿ ಕುಣಿದುಕುಪ್ಪಳಿಸುವುದು, ಅನ್ಯಧರ್ಮಿಯರನ್ನು ಪ್ರಚೋದಿಸುವ ರೀತಿಯ ಹಾಡುಗಳ ಬಳಕೆ ಮಾಡಬಾರದು. ಗ್ರಾಮಪಂಚಾಯಿತಿ ವ್ಯಾಪ್ತಿಯ ಗಣೇಶ ವಿಸರ್ಜನಾ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕಿದೆ. ನಿಗದಿತ ಸಮಯಕ್ಕೆ ಸರಿಯಾಗಿ ವಿಸರ್ಜನೆ ಮಾಡಬೇಕು. ಗಣೇಶ ಪ್ರತಿಷ್ಠಾನ ಸ್ಥಳದಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮಾರಾವನ್ನು ಅಳವಡಿಕೆ ಮಾಡಬೇಕು. ಹಬ್ಬಗಳ ಆಚರಣೆಯಿಂದ ಸಮಾಜದ ಎಲ್ಲಾ ವರ್ಗಗಳ ನಡುವಣ ಸೌಹಾರ್ದತೆಯ ಬೆಳವಣಿಗೆಗೆ ಸಹಕಾರಿಯಾಗಬೇಕೆ ಹೊರತು ಘರ್ಷಣೆಗಳಿಗಲ್ಲ ಎಂದರು.
ಬೆಸ್ಕಾಂ ಕಾರ್ಯಪಾಲ ಅಭಿಯಂತರ ಮನೋಹರ್‌ಶೆಟ್ಟಿ, ಪೊಲೀಸ್ ಆರಕ್ಷಕ ನಿರೀಕ್ಷಕ ಶಶಿಧರ್, ನರೇಂದ್ರಬಾಬು, ಶಿರಸ್ತೇದಾರ್ ರವೀಂದ್ರ, ರಾಜಸ್ವ ನಿರೀಕ್ಷಕ ರಘುಪತಿ, ಗ್ರಾಮ ಆಡಳಿತಾಧಿಕಾರಿ ಮಾರುತಿ ಮತ್ತಿತರರು ಉಪಸ್ಥಿತರಿದ್ದರು.


ಆರ್ಜಿ ಸ್ವೀಕೃತ ಕೇಂದ್ರ ಸ್ಥಾಪನೆ
ಗಣೇಶ ಪ್ರತಿಷ್ಠಾಪನೆ ಮಾಡಲು ಸ್ಥಳೀಯ ನಗರಸಭೆೆ, ಗ್ರಾಮಪಂಚಾಯಿತಿಯಿಂದ ನಿರಪೇಕ್ಷಣಾ ಪತ್ರ ಪಡೆದುಕೊಂಡ ಬಳಿಕ ತಾತ್ಕಾಲಿಕ ವಿದ್ಯುತ್ ಬಳಕೆ ವಿಚಾರವಾಗಿ ಅರ್ಜಿ ಸಲ್ಲಿಸಬೇಕು. ಬಳಕೆ ಮಾಡುವ ವಿದ್ಯುತ್‌ಗೆ ಮುಂಗಡವಾಗಿ ಹಣ ಪಾವತಿಮಾಡಬೇಕು. ಜತೆಗೆ ಪೊಲೀಸ್ ಇಲಾಖೆಯಿಂದಲ್ಲೂ ಅನುಮತಿ ಕಡ್ಡಾಯವಾಗಿದ್ದು ತಾಲೂಕು ಮಟ್ಟದಲ್ಲಿ ನಗರಸಭೆ ಅವರಣದಲ್ಲಿ ತಾಲೂಕು ಆಡಳಿತದಿಂದ ಆರ್ಜಿ ಸ್ವೀಕೃತ ಕೇಂದ್ರವನ್ನು ಸ್ಥಾಪನೆ ಮಾಡಲಾಗುವುದು ಎಂದು ತಹಸೀಲ್ದಾರ್ ಅಮೃತ್‌ಆತ್ರೇಶ್ ಮಾಹಿತಿ ನೀಡಿದರು.


ಡಿಜೆಗೆ ಅನುಮತಿ ಇಲ್ಲ
ಗಣೇಶ ಪ್ರತಿಷ್ಠಾಪನೆಯಲ್ಲಿ ಡಿಜೆಗೆ ಅನುಮತಿ ನೀಡುವುದಿಲ್ಲ. ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ದಿನಾಂಕವನ್ನು ಮುಂಚಿತವಾಗಿ ತಿಳಿಸಿಬೇಕು. ಆರ್ಕೆಸ್ಟ್ರಾ ಇನ್ನಿತರ ಕಾರ್ಯಕ್ರಮಗಳಿಗೆ ಅನುಮತಿ ಪಡೆದಿರಬೇಕು ಎಂದು ಡಿವೈಎಸ್‌ಪಿ ಜಗದೀಶ್ ತಿಳಿಸಿದರು.
ಹಳೆಯ ವೈಷಮ್ಯಗಳನ್ನು ಇಟ್ಟುಕೊಂಡು ಗಣೇಶ ಹಬ್ಬದ ವೇಳೆ ಗಲಭೆ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರಿಗೂ ಸ್ವಾತಂತ್ರ್ಯವಿದ್ದು ಮತ್ತೊಬ್ಬರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಕಾರ್ಯ ಮಾಡಬಾರದು. ಗಣೇಶ ಪ್ರತಿಷ್ಠಾಪನೆ ಮಾಡುವ ಸಂಘದವರು ಪ್ರತಿಯೊಬ್ಬರು ಕಡ್ಡಾಯವಾಗಿ ಸ್ವಯಂ ಶಿಸ್ತುವನ್ನು ಪಾಲಿಸಬೇಕು ಜತೆಗೆ ಸೇರಿದಂತೆ ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರಗೆ ಧ್ವನಿವರ್ಧಕ ಬಳಕೆಗೆ ಪರವಾನಗಿಯನ್ನು ಪೊಲೀಸ್ ಠಾಣೆಯಿಂದ ಕಡ್ಡಾಯವಾಗಿ ಪಡೆಯಬೇಕು ಎಂದರು.


"ಪ್ರತಿ ವರ್ಷದಂತೆ ಈ ಬಾರಿಯೂ ನಗರಸಭೆ ವ್ಯಾಪ್ತಿಯ ಭಕ್ತನಪಾಳ್ಯರ ರಸ್ತೆಯಲ್ಲಿನ ನಗರಸಭೆಯ ಜಾಗದಲ್ಲಿ ಗಣೇಶ ವಿಸರ್ಜನೆಗೆ ವ್ಯವಸ್ಥೆ ಮಾಡಲಾಗಿದ್ದು, ನಗರದ ಜನರು ಪ್ರಯೋಜನ ಪಡೆದುಕೊಳ್ಳಬೇಕು."
ನಾಗಲಿಂಗಬಡಿಗೇರ್ ನಗರಸಭೆ ಕಾರ್ಯಪಾಲಕ ಅಭಿಯಂತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net